ಮದುವೆ ಸಮಯದಲ್ಲಿ ಅದೆಷ್ಟೋ ಕಪಲ್ಸ್ ನಿದ್ದೆ ಬಂದಿಲ್ಲ, ನಂಗೆ ನಿದ್ದೆ ಬಂದಿಲ್ಲ ಅಂತ ಹಾಡು ಹೇಳಿದ್ರೆ, ಇನ್ನೂ ಸ್ವಲ್ಪ ಜನರಿಗೆ ಹೊಟ್ಟೆ ಒಳಗೆ ಚಿಟ್ಟೆ ಬಿಟ್ಟ ಹಾಗೆ ಆಗುತ್ತೆ ಅಂತ ಒದ್ದಾಡ್ತಾ ಇರ್ತಾರೆ. ಆದ್ರೆ ಇಲ್ಲಿ ಒಬ್ಬಳು ಮದುಮಗಳು ಮದುವೆ ದಿನ ಏನ್ನ್ ಮಾಡಿದ್ದಾಳೆ ಗೊತ್ತಾ? ವಿಡಿಯೋ ಫುಲ್ ವೈರಲ್ ಆಗ್ತಾ ಇದೆ.
ಎಸ್, ಮುಹೂರ್ತಕ್ಕೆ ಸಮಯ ಆಯ್ತು ಬಾರಮ್ಮ ಅಂತ ಮದುವೆ ಮಂಟಪದಿಂದ ಕರೆಯುತ್ತಾ ಇದ್ರೆ, ಇಲ್ಲಿ ಮದುಮಗಳು ಫುಡ್ ಆರ್ಡರ್ ಮಾಡಿ ಸಖತ್ ಆಗಿ ತಿಂತಾ ಇದ್ದಾಳೆ. ಅದರಲ್ಲಿಯೂ ಚೆನ್ನಾಗಿ ಡ್ರೆಸ್ ಮಾಡಿಕೊಂಡು, ಮೇಕಪ್ ಹಾಕಿ, ಮೂಗು ಬೊಟ್ಟನ್ನು ಸೇರಿಸಿ ತಿಂಡಿ ತಿಂತಾ ಇದ್ದಾಳೆ.
ಕಾರಣ ಏನು?
ಮುಹೂರ್ತದ ಮೊದಲು ಒಂದು ವರ ಮತ್ತು ವಧುವಿನ ಒಂದು ಪೂಜೆ ಮಾಡಲು ಇತ್ತು. ಆದರೆ ಆ ಪೂಜೆಗೆ ವರ ಬರಲು ತಡ ಮಾಡಿದ. ಅದನ್ನೇ ಸೇಡಾಗಿ ಇದೀಗ ಮದುಮಗಳು ಮುಹೂರ್ತದ ಸಮಯದಲ್ಲಿ ತಿಂಡಿ ತಿಂತಾ ಇದ್ದಾಳೆ. ಇದನ್ನು ಆಕೆಯ ಸ್ನೇಹಿತರು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾ ದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಐ ಯಾಮ್ ಫುಡ್ಡಿ ಅಂತಲೂ ಕಾಪ್ಶನ್ ಕೊಟ್ಟಿದ್ದಾಳೆ.
‘ ಮದುವೆ ಮೊದಲೇ ಹೀಗೆ, ಇನ್ನೂ ಮದುವೆ ಆದಮೇಲೆ ಅದೋ ಗತಿ ‘ ಎಂದು ಒಬ್ಬ ಕಮೆಂಟ್ ಮಾಡಿದ್ದಾನೆ. ಹೀಗೆ ಹತ್ತು ಹಲವಾರು ಜನರು ಕಮೆಂಟ್ ಗಳನ್ನು ಮಾಡಿದ್ದು, ಒಟ್ಟಿನಲ್ಲಿ ವಿಡಿಯೋ ಸಖತ್ ವೈರಲ್ ಆಗ್ತಾ ಇದೆ.
