Home » Personality Test for Career: ನಿಮಗೆ ಈ ಫೋಟೋದಲ್ಲಿ ಯಾವ ಪ್ರಾಣಿ ಫಸ್ಟ್ ಗೆ ಕಾಣುತ್ತೆ? ಅದರಲ್ಲಿ ಅಡಗಿದೆ ನಿಮ್ಮ ವೃತ್ತಿ

Personality Test for Career: ನಿಮಗೆ ಈ ಫೋಟೋದಲ್ಲಿ ಯಾವ ಪ್ರಾಣಿ ಫಸ್ಟ್ ಗೆ ಕಾಣುತ್ತೆ? ಅದರಲ್ಲಿ ಅಡಗಿದೆ ನಿಮ್ಮ ವೃತ್ತಿ

0 comments

ನಮ್ಮ ಜೀವನದಲ್ಲಿ ನಾವು ಹಲವಾರು ಅವಕಾಶಗಳು, ಆಯ್ಕೆಗಳನ್ನು ನಾನಾ ರೀತಿ ಅನುಭವಿಸುತ್ತೇವೆ. ಕೆಲವೊಂದು ನಿರ್ಧಾರ ಮಾಡಬೇಕಾದಲ್ಲಿ ಹಲವಾರು ರೀತಿಯ ಗೊಂದಲಗಳು ಮೂಡುತ್ತವೆ. ಮುಖ್ಯವಾಗಿ ವೃತ್ತಿ ಆಯ್ಕೆಯಲ್ಲಿ ಹೆಚ್ಚಾಗಿ ಗೊಂದಲ ಉಂಟಾಗುತ್ತದೆ. ವೃತ್ತಿ ಆಯ್ಕೆಯಲ್ಲಿ ನಿಮಗೆ ಮಾರ್ಗದರ್ಶನ ನೀಡಲು ಈ ವ್ಯಕ್ತಿತ್ವ ಪರೀಕ್ಷೆ ನಿಮಗೆ ಸಹಾಯ ಮಾಡುತ್ತದೆ. ನೀವು ಎಂತಹ ವ್ಯಕ್ತಿ, ಯಾವ ವೃತ್ತಿಯನ್ನು ಆಯ್ಕೆ ಮಾಡಿಕೊಂಡರೆ ಯಶಸ್ವಿ ವ್ಯಕ್ತಿಯಾಗುತ್ತೀರಿ ಎಂದು ತಿಳಿಯಲು ಈ ಪರೀಕ್ಷೆ ನಿಮಗೆ ನೆರವಾಗುತ್ತೆ.

ನೀವು ಮೊದಲು ಆನೆಯನ್ನು ನೋಡಿದರೆ, ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಮನಸ್ಸಿಗಿಂತ ಹೆಚ್ಚಾಗಿ ನಿಮ್ಮ ಬುದ್ಧಿಶಕ್ತಿಯನ್ನು ಅನುಸರಿಸುತ್ತೀರಿ ಎಂದರ್ಥ. ಕಮ್ಯುನಿಕೇಷನ್ ಸ್ಕಿಲ್ ನಿಮ್ಮಲ್ಲಿ ಚೆನ್ನಾಗಿದೆ. ಹಾಗಾಗಿ ನೀವು ಲೀಡರ್ ಆಗಬಹುದು. ಜನ ಸಂಪರ್ಕದಲ್ಲಿರುವ ವೃತ್ತಿಗಳು ನಿಮಗೆ ಹೊಂದಿಕೆ ಆಗುತ್ತೆ.

ಹಾರುವ ಪಕ್ಷಿಗಳನ್ನು ಮೊದಲು ಗಮನಿದ್ದರೆ, ನೀವು ತರ್ಕಬದ್ಧ ಚಿಂತಕರಾಗಿದ್ದೀರಿ ಎಂದು ಅರ್ಥ. ನೀವು ಮೊದಲು ಪಕ್ಷಿಗಳು ಮರದ ಮೇಲೆ ಏರುತ್ತಿರುವುದನ್ನು ನೋಡಿದರೆ ಭಾವನಾತ್ಮಕವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕಿಂತ ನೀವು ಪ್ರ್ಯಾಕ್ಟಿಕಲ್ ಆಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರಿ.

ಆನೆ-ಪಕ್ಷಿಯನ್ನು ನೋಡಿದವರಿಗೆ ಈ ವೃತ್ತಿಗಳು ಸರಿಯಾಗಿ ಹೊಂದಿಕೆ ಆಗುತ್ತದೆ. ಲಾಜಿಸ್ಟಿಕ್ಸ್ ಸೂಪರ್ ವೈಸರ್, ಅಕೌಂಟೆಂಟ್, ಇಂಜಿನಿಯರ್, ಮಾರ್ಕೆಟಿಂಗ್ ವಿಶ್ಲೇಷಕ, ಹಣಕಾಸು ವಿಶ್ಲೇಷಕ, ರಸಾಯನಶಾಸ್ತ್ರಜ್ಞ, ಡೇಟಾ ವಿಶ್ಲೇಷಕ, ಇನ್ವೆಸ್ಟ್ಮೆಂಟ್ ಬ್ಯಾಂಕರ್, ಎಕನಾಮಿಸ್ಟ್ ನಿಮಗೆ ಸೂಕ್ತವಾದ ಕೆಲವು ವೃತ್ತಿ ಆಯ್ಕೆಗಳು.

ಈ ಚಿತ್ರದಲ್ಲಿ ಆಸ್ಟ್ರಿಚ್ ಅನ್ನು ಮೊದಲು ನೋಡುವ ಜನರು ಬಹುಶಃ ಸಾಕಷ್ಟು ಅರ್ಥಗರ್ಭಿತರಾಗಿದ್ದಾರೆ. ಇವರು ಬುದ್ಧಿಗಿಂತ ಹೆಚ್ಚಾಗಿ, ಹೃದಯದ ಮಾತನ್ನು ಅನುಸರಿಸುತ್ತಾರೆ. ಸಾಮಾನ್ಯವಾಗಿ ಸ್ವಯಂ ಭರವಸೆಯುಳ್ಳವರು. ಹೊಸ ವಿಷಯಗಳ ಬಗ್ಗೆ ಕುತೂಹಲ ಹೆಚ್ಚಿರುತ್ತೆ.

ಸಿಂಹವನ್ನು ಮೊದಲು ನೋಡುವ ಜನರು ಬಹುಶಃ ತ್ವರಿತವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಈ ಜನರು ಬಲವಾದ ವ್ಯಕ್ತಿತ್ವ ಮತ್ತು ಹಠಾತ್ ಪ್ರವೃತ್ತಿಯೊಂದಿಗೆ ನಂಬಲಾಗದಷ್ಟು ಉತ್ಸಾಹವನ್ನು ಹೊಂದಿರುತ್ತಾರೆ.

ಆಸ್ಟ್ರಿಚ್ ಪಕ್ಷಿ, ಸಿಂಹವನ್ನು ನೋಡಿದವರಿಗೆ ಈ ವೃತ್ತಿಗಳು ಸರಿ ಹೊಂದುತ್ತವೆ. ಪ್ರೊಫೆಸರ್, ಟೀಚರ್, ಆರ್ಟಿಸ್ಟ್, ರೈಟರ್, ಎಡಿಟರ್ ವೃತ್ತಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಈ ಮೇಲಿನಂತೆ ನೀವು ನಿಮ್ಮ ಜೀವನದ ವ್ಯಕ್ತಿತ್ವವನ್ನು ಅಡಿಪಾಯವನ್ನು ಈ ರೀತಿಯಾಗಿ ಪರೀಕ್ಷಿಸಿ ನೋಡಿ.

You may also like

Leave a Comment