Home » ಹಿಂದೂ ಹುಡುಗಿ – ಮುಸ್ಲಿಂ ಯುವಕ ಸುಬ್ರಹ್ಮಣ್ಯದಲ್ಲಿ ಭೇಟಿ | ಇಂಸ್ಟಾಗ್ರಮ್ ಪರಿಚಯ ಆಗಿ ರಿಯಲ್ ಜೋಡಿ ಆಗಲು ಬಂದವನಿಗೆ ಸಿಕ್ತು ಇಂಸ್ಟಾಂಟ್‌ ಕಜ್ಜಾಯ !

ಹಿಂದೂ ಹುಡುಗಿ – ಮುಸ್ಲಿಂ ಯುವಕ ಸುಬ್ರಹ್ಮಣ್ಯದಲ್ಲಿ ಭೇಟಿ | ಇಂಸ್ಟಾಗ್ರಮ್ ಪರಿಚಯ ಆಗಿ ರಿಯಲ್ ಜೋಡಿ ಆಗಲು ಬಂದವನಿಗೆ ಸಿಕ್ತು ಇಂಸ್ಟಾಂಟ್‌ ಕಜ್ಜಾಯ !

0 comments

ದಿನಂಪ್ರತಿ ಲವ್ ಜಿಹಾದ್ ಪ್ರಕರಣಗಳು ತೆರೆಮರೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದು, ಮತಾಂತರ ಮಾಡುವ ಜೊತೆಗೆ ಭೀಕರವಾಗಿ ಕೊಲೆ ಮಾಡಲು ಹಿಂದು ಮುಂದು ನೋಡಲಾರರು ಎಂಬುದಕ್ಕೆ ನಿದರ್ಶನಗಳು ಕೂಡ ನಮ್ಮ ಕಣ್ಣ ಮುಂದೆಯೇ ಇವೆ. ಪ್ರೀತಿ ಪ್ರೇಮ ಪ್ರಣಯ..ಎಂದು ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾಗಿ ಪ್ರೀತಿಯ ಬಲೆಗೆ ಸಿಲುಕಿ ಪ್ರಣಯ ಜೋಡಿಯಂತೆ ಗುರುತಿಸಿಕೊಂಡು ಪಂಜರದ ಹಕ್ಕಿಯಂತೆ ಬಂಧಿಯಾಗಿ ಮತಾಂತರವಾಗಿ ಸಾವಿನ ಕದ ತಟ್ಟಿದ ಅದೆಷ್ಟೋ ಘಟನೆಗಳು ದಿನಂಪ್ರತಿ ವರದಿಯಾಗುತ್ತಲೆ ಇದೆ. ಆದರೂ ಎಗ್ಗಿಲ್ಲದೆ ಈ ಘಟನೆಗಳು ಯುವಪೀಳಿಗೆ ಮುಖಾಂತರ ನಡೆಯುತ್ತಲೇ ಇರುತ್ತದೆ. ಅಂತಹುವುದೇ ಮತ್ತೊಂದು ಘಟನೆ ಕರಾವಳಿಯಲ್ಲಿ ನಡೆದಿದೆ. ಹಿಂದೂ ಹುಡುಗಿಯ ಹಿಂದೆ ಬಿದ್ದ ಅನ್ಯ ಕೋಮಿನ ಯುವಕನಿಗೆ ಹಿಗ್ಗಾ ಮುಗ್ಗ ಥಳಿಸಿದ ಘಟನೆಯೊಂದು ವರದಿಯಾಗಿದೆ.

ಈ ಘಟನೆಯ ಹಿಂದೆ ಸ್ವಾರಸ್ಯಕರವಾದ ಮಾಹಿತಿ ಇದೆ. ಇವರಿಬ್ಬರು ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿ ನಂತರ ಭೇಟಿಯಾಗಲು ನಿರ್ಧರಿಸಿದವರು ಎನ್ನಲಾಗಿದೆ. ಸುಬ್ರಹ್ಮಣ್ಯದ ಹಿಂದೂ ಹುಡುಗಿ ಜತೆ ಕಲ್ಲುಗುಂಡಿಯ ಅನ್ಯಕೋಮಿನ ಹುಡುಗನೊಬ್ಬ ಇನ್ ಸ್ಟಾಗ್ರಾಂನಲ್ಲಿ ಪರಿಚಿತನಾಗಿ ಸುಬ್ರಹ್ಮಣ್ಯ ಬಸ್ ಸ್ಟ್ಯಾಂಡ್ ನಲ್ಲಿ ಭೇಟಿಯಾಗಿರುವ ಘಟನೆ ನಡೆದಿದೆ ಎನ್ನಲಾಗಿದೆ. ಈ ಹಿನ್ನೆಲೆ ಒಂದು ಗುಂಪಿನಿಂದ ಅನ್ಯ ಕೋಮಿನ ಯುವಕನಿಗೆ ಥಳಿಸಿದ್ದಾರೆ. ಇದರ ಪರಿಣಾಮವಾಗಿ ಗಂಭೀರವಾಗಿ ಯುವಕ ಗಾಯಗೊಂಡಿದ್ದು ಸದ್ಯ ಸುಳ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ತಿಳಿದು ಬಂದಿದೆ.

You may also like

Leave a Comment