Home » ಬಿಜೆಪಿ ಮುಖಂಡನ ಮೇಲೆ ಹಾಡಹಗಲೇ ಬೈಕ್ ನಿಂದ ಬಂದ ಮುಸುಕುಧಾರಿಗಳಿಂದ ಗುಂಡಿನ ದಾಳಿ!!!

ಬಿಜೆಪಿ ಮುಖಂಡನ ಮೇಲೆ ಹಾಡಹಗಲೇ ಬೈಕ್ ನಿಂದ ಬಂದ ಮುಸುಕುಧಾರಿಗಳಿಂದ ಗುಂಡಿನ ದಾಳಿ!!!

0 comments

ಬೈಕ್ ನಲ್ಲಿ ಬಂದ ಮೂವರು ಅಪರಿಚಿತ ವ್ಯಕ್ತಿಗಳು ಬಿಜೆಪಿ ನಾಯಕರೊಬ್ಬರ ಮೇಲೆ ಗುಂಡಿನ ದಾಳಿ ನಡೆಸಿರುವ ಆಘಾತಕಾರಿ‌ ಘಟನೆಯೊಂದು ನಡೆದಿದೆ. ಈ ಘಟನೆ ಮಧ್ಯಪ್ರದೇಶದ ಮೊರೆನಾದಲ್ಲಿ ನಡೆದಿದೆ. ಜನನಿಬಿಡ ಮಾರುಕಟ್ಟೆಯಲ್ಲಿ ಬೈಕ್ ನಲ್ಲಿ ಬಂದ ಮೂವರು ವ್ಯಕ್ತಿಗಳು ಈ ಕೃತ್ಯವೆಸಗಿದ್ದಾರೆ.

ಈ ಘಟನೆಯ ಆಘಾತಕಾರಿ ದೃಶ್ಯಗಳು ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿವೆ.

ವಿಡಿಯೋದಲ್ಲಿ ತೋರಿಸೋ ಪ್ರಕಾರ, ಮಾರ್ಕೆಟ್ ಪ್ರದೇಶದಲ್ಲಿ ಹಾಡಹಗಲೇ ಬಂದ ಮೂವರು ಅಪರಿಚಿತ ವ್ಯಕ್ತಿಗಳು ಆಭರಣ ವ್ಯಾಪಾರಿಯೂ ಆಗಿರುವ ಸಂತೋಷ್ ಕುಮಾರ್ ಶರ್ಮಾ ಮೇಲೆ ಗುಂಡು ಹಾರಿಸುವುದನ್ನು ನೋಡಬಹುದು. ಹಾಗೆನೇ ಬೈಕ್‌ನಲ್ಲಿ ಬಂದ ಮೂವರು ಬಟ್ಟೆಯಲ್ಲಿ ಮುಖ ಮುಚ್ಚಿಕೊಂಡಿರುವುದು ಕೂಡಾ ಕಾಣುತ್ತದೆ.

ದಾಳಿಯ ಸಂದರ್ಭದಲ್ಲಿ ಅಂಗಡಿಯಲ್ಲಿ ತನ್ನ ಇಬ್ಬರು ಸ್ನೇಹಿತರೊಂದಿಗೆ ಕುಳಿತಿದ್ದ ಶರ್ಮಾ ಕೆಳಕ್ಕೆ ಭಾಗಿ ಗುಂಡಿನ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ. ಗುಂಡಿನ ದಾಳಿ ನಡೆದ ಕೆಲವೇ ಕ್ಷಣಗಳಲ್ಲಿ ಜನರ ಗುಂಪು ಜಮಾಯಿಸಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

You may also like

Leave a Comment