Home » Indian Cough Syrup: ಭಾರತದ 2 ಕೆಮ್ಮಿನ ಸಿರಪ್​ಗಳನ್ನು ಬಳಸದಂತೆ WHO ಶಿಫಾರಸು

Indian Cough Syrup: ಭಾರತದ 2 ಕೆಮ್ಮಿನ ಸಿರಪ್​ಗಳನ್ನು ಬಳಸದಂತೆ WHO ಶಿಫಾರಸು

0 comments

WHO ಭಾರತದ ಎರಡು ಕೆಮ್ಮಿನ ಸಿರಪ್‌ಗಳನ್ನು ಬಳಸದಂತೆ ಶಿಫಾರಸು ಮಾಡಿದೆ. ಉಜ್ಬೇಕಿಸ್ತಾನದಲ್ಲಿ ಭಾರತದ 2 ಕೆಮ್ಮಿನ ಸಿರಪ್​ಗಳನ್ನು ಬಳಸದಂತೆ WHO ಹೇಳಿದೆ. ನೋಯ್ಡಾ ಮೂಲದ ಕಂಪನಿ ಮರಿಯನ್ ಬಯೋಟೆಕ್ ತಯಾರಿಸಿದ ಎರಡು ಕೆಮ್ಮಿನ ಸಿರಪ್‌ಗಳನ್ನು ಉಜ್ಬೇಕಿಸ್ತಾನ್‌ನಲ್ಲಿರುವ ಮಕ್ಕಳಿಗೆ ಬಳಸಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಶಿಫಾರಸು ಮಾಡಿದೆ.

ವೈದ್ಯಕೀಯ ಉತ್ಪನ್ನದ ಕುರಿತು ಎಚ್ಚರಿಕೆ ನೀಡಿದ ವಿಶ್ವ ಆರೋಗ್ಯ ಸಂಸ್ಥೆ ಮೆರಿಯನ್ ಬಯೋಟೆಕ್‌ನಿಂದ ತಯಾರಿಸಲ್ಪಟ್ಟ ಗುಣಮಟ್ಟದ ವೈದ್ಯಕೀಯ ಉತ್ಪನ್ನಗಳು ಗುಣಮಟ್ಟದ ಮಾನದಂಡಗಳು ಅಥವಾ ವಿಶೇಷಣಗಳನ್ನು ಪೂರೈಸಲು ವಿಫಲವಾದ ಉತ್ಪನ್ನಗಳಾಗಿವೆ ಮತ್ತು ಹಾಗಾಗಿ ನಿರ್ದಿಷ್ಟತೆಯಿಂದ ಹೊರಗಿದೆ ಎಂದು ಹೇಳಲಾಗಿದೆ.

ಇತ್ತೀಚೆಗಷ್ಟೇ, ಗ್ಯಾಂಬಿಯಾದಲ್ಲಿ ಭಾರತ ಮೂಲದ ಔಷಧಿ ಕಂಪನಿ ತಯಾರಿಸಿದ ಕೆಮ್ಮಿನ ಔಷಧಿ ಕುಡಿದು ಮಕ್ಕಳು ಸಾವನ್ನಪ್ಪಿರುವ ಘಟನೆ ನಡೆದ ನಂತರ, ಉಜ್ಬೇಕಿಸ್ತಾನ್‌ನಲ್ಲಿ 18 ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಭಾರತೀಯ ಔಷಧೀಯ ಕಂಪನಿಯೊಂದು ತಯಾರಿಸಿದ ಔಷಧಿಗಳನ್ನು ಸೇವಿಸಿ ದೇಶದಲ್ಲಿ 18 ಮಕ್ಕಳು ಸಾವನ್ನಪ್ಪಿರುವುದಾಗಿ ಉಜ್ಬೇಕಿಸ್ತಾನ್‌ನ ಆರೋಗ್ಯ ಸಚಿವಾಲಯವು ಹೇಳಿಕೊಂಡಿದೆ. ನೋಯ್ಡಾ ಮೂಲದ ಮರಿಯನ್ ಬಯೋಟೆಕ್ ತಯಾರಿಸಿದ ಕೆಮ್ಮಿನ ಸಿರಪ್ ಕುಡಿದು ತೀವ್ರ ಉಸಿರಾಟದ ಕಾಯಿಲೆಯಿಂದ ಬಳಲುತ್ತಿದ್ದ 18 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಉಜ್ಬೇಕಿಸ್ತಾನ್ ಆರೋಗ್ಯ ಸಚಿವಾಲಯ ಹೇಳಿತ್ತು.

ಉಸಿರಾಟದ ತೊಂದರೆ ಇರುವ ಮಕ್ಕಳಿಗೆ ಡಾಕ್‌-1 ಮ್ಯಾಕ್ಸ್‌ ಔಷಧವನ್ನು ನೀಡಲಾಗಿದೆ. ಈ ಔಷಧ ಭಾರತದಲ್ಲಿ ತಯಾರಿಸಲಾಗುತ್ತದೆ. ಅಂದ ಹಾಗೆ ಈ ಔಷಧ ಬಳಸಿದ 21 ಮಕ್ಕಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದರಲ್ಲಿ 18 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಈ ಸತ್ತ ಮಕ್ಕಳು ಮನೆಯಲ್ಲಿ ಈ ಔಷಧಿಯನ್ನು 2 ರಿಂದ 7 ದಿನಗಳವರೆಗೆ ದಿನಕ್ಕೆ 3-4 ಬಾರಿ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

You may also like

Leave a Comment