Home » EPFO ಇ-ಪಾಸ್‌ಬುಕ್ ಸೇವೆಯಲ್ಲಿ ಅಡಚಣೆ

EPFO ಇ-ಪಾಸ್‌ಬುಕ್ ಸೇವೆಯಲ್ಲಿ ಅಡಚಣೆ

0 comments

ಇಪಿಎಫ್ ಅಥವಾ ಕಾರ್ಮಿಕ ಭವಿಷ್ಯ ನಿಧಿ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗಾಗಿ ಭಾರತ ಸರಕಾರ ಜಾರಿಗೆ ತಂದಿರುವ ಪ್ರಮುಖ ಉಳಿತಾಯ ಯೋಜನೆಯಾಗಿದೆ. ಈ ಯೋಜನೆಯ ಅನುಸಾರ ಕೆಲಸ ನೀಡಿರುವ ಉದ್ಯೋಗದಾತ ನಿರ್ದಿಷ್ಟ ಮೊತ್ತದ ಹಣವನ್ನು ತನ್ನ ವಂತಿಗೆಯಾಗಿ ಭರಿಸಲಾಗುತ್ತದೆ. ಉದ್ಯೋಗಿಯ ವಂತಿಗೆಗೆ ಸಮನಾದ ಮೊತ್ತದ ವಂತಿಗೆಯನ್ನು ಉದ್ಯೋಗದಾತ ಇಪಿಎಫ್ ಖಾತೆಗೆ ಸಲ್ಲಿಸಬೇಕಾಗಿದ್ದು, ಈ ಎರಡೂ ಮೊತ್ತಗಳಿಗೆ ಸರಕಾರ ತಾನು ನಿಗದಿಪಡಿಸಿದ ಬಡ್ಡಿಯನ್ನು ನೀಡುತ್ತದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಇತ್ತೀಚೆಗಷ್ಟೇ ತನ್ನ ಚಂದಾದಾರರಿಗೆ ಇ-ನಾಮನಿರ್ದೇಶನವನ್ನು ಕಡ್ಡಾಯಗೊಳಿಸಿತ್ತು.

ಚಂದಾದಾರರಿಗೆ ಉದ್ಯೋಗಿಗಳ ಭವಿಷ್ಯ ನಿಧಿಯಲ್ಲಿ (ಇಪಿಎಫ್) ನೋವ್ ಯುವರ್ ಕಸ್ಟಮರ್ (ಕೆವೈಸಿ) ಅನ್ನು ನವೀಕರಿಸಲು ಅವಕಾಶ ಮಾಡಿಕೊಟ್ಟಿದೆ. ಅಲ್ಲದೇ ನವೀಕರಣವಾಗದೇ ಹೋದಲ್ಲಿ ಬಡ್ಡಿ ಹಣ ನಿಲ್ಲಿಸುವುದಾಗಿಯೂ ಎಚ್ಚರಿಕೆ ನೀಡಿತ್ತು. ಇಪಿಎಫ್‌ಒ ಒದಗಿಸುವ ಪ್ರಮುಖ ಸೇವೆಗಳಲ್ಲಿ ಇ-ಪಾಸ್‌ಬುಕ್ ಸೌಲಭ್ಯವು ಬಹಳ ಜನಪ್ರಿಯವಾಗಿದ್ದು, ಆದರೆ, ಕಳೆದ ಕೆಲವು ದಿನಗಳಿಂದ ಈ ಸೇವೆಯಲ್ಲಿ ವ್ಯತ್ಯಯ ಕಂಡು ಬಂದ ಹಿನ್ನೆಲೆ ಇಪಿಎಫ್‌ಒ ಚಂದಾದಾರರು ಆತಂಕಗೊಂಡಿದ್ದಾರೆ.

ಪಿಎಫ್ ಬ್ಯಾಲೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಲು ಸರಳ ಮಾರ್ಗಗಳು ಹೀಗಿವೆ;
ಇಪಿಎಫ್‌ಒ ಸದಸ್ಯರಿಗೆ ಇಪಿಎಫ್‌ಒ ವೆಬ್‌ಸೈಟ್ ಪಿಎಫ್ ಬ್ಯಾಲೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಲು ಸರಳ ಮಾರ್ಗವಾಗಿದೆ. ನಿಮ್ಮ ಪಿಎಫ್ ಬ್ಯಾಲೆನ್ಸ್ ಅನ್ನು ಪರಿಶೀಲಿಸಲು ಇರುವ ಇನ್ನೊಂದು ವಿಧಾನವೆಂದರೆ ಇಪಿಎಫ್‌ಒ ಮೊಬೈಲ್ ಅಪ್ಲಿಕೇಶನ್ ಅನ್ನು ಬಳಕೆ ಮಾಡಬಹುದು. ಈ ಸೇವೆಯನ್ನು ಬಳಸಲು ಮೊದಲು ನೀವು ನಿಮ್ಮ UAN ಅನ್ನು ನಿಮ್ಮ ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಬೇಕಾಗುತ್ತದೆ.

EPFO ​​ಗೆ SMS ಕಳುಹಿಸುವ ಮೂಲಕವೂ ಇಪಿಎಫ್‌ಒ ಸದಸ್ಯರು ತಮ್ಮ ಪಿಎಫ್ ಖಾತೆಯ ಬ್ಯಾಲೆನ್ಸ್ ಅನ್ನು ಸುಲಭವಾಗಿ ಪರಿಶೀಲನೆ ನಡೆಸಬಹುದಾಗಿದ್ದು ಇದಕ್ಕಾಗಿ 7738299899 ಗೆ ನಿಮ್ಮ UAN ಮತ್ತು ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆಯ ಕೊನೆಯ ನಾಲ್ಕು ಅಂಕಿಗಳನ್ನು ಸಂದೇಶದ ಮೂಲಕ ಕಳುಹಿಸಿ ನಿಮ್ಮ ಬ್ಯಾಲೆನ್ಸ್ ಅನ್ನು ಪರಿಶೀಲನೆ ಮಾಡಬಹುದು. ಉಮಾಂಗ್ ಅಪ್ಲಿಕೇಶನ್ ಮೂಲಕವೂ ನೀವು ನಿಮ್ಮ ಪಿಎಫ್ ಬ್ಯಾಲೆನ್ಸ್ ಅನ್ನು ಸುಲಭವಾಗಿ ಪರಿಶೀಲನೆ ನಡೆಸಬಹುದು.

ಪಿಎಫ್‌ಒ ಒದಗಿಸುವ ಇ-ಪಾಸ್‌ಬುಕ್ ಸೇವೆಯಲ್ಲಿ ಉದ್ಯೋಗಿಗಳು ತಮ್ಮ ಉಳಿತಾಯದ ಬಗ್ಗೆ ಗಮನ ಹರಿಸಲು ಹಾಗೂ ಕೊಡುಗೆಗಳು ಸರಿಯಿದೆಯೇ ಎಂದು ಖಚಿತಪಡಿಸಿಕೊಳ್ಳಲು ಅನುಮತಿ ನೀಡುತ್ತದೆ. ಆದರೆ, ಕಳೆದ ಕೆಲವು ದಿನಗಳಿಂದ ಈ ಸೇವೆ ಸರಿಯಾಗಿ ಲಭ್ಯವಾಗದೆ ಇದರ ಜೊತೆಗೆ UMANG ಮೊಬೈಲ್ ಅಪ್ಲಿಕೇಶನ್‌ನಲ್ಲಿಯೂ ಕೂಡ ಪಾಸ್‌ಬುಕ್ ಸೇವೆಯು ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವುದರಿಂದ ಇಪಿಎಫ್‌ಒ ಚಂದಾದಾರರು ಗಾಬರಿಯಾಗಿದ್ದಾರೆ.

ಈ ಬಗ್ಗೆ ಚಂದಾದಾರರು ಆರೋಪಿಸುತ್ತಿದ್ದು, ತಮ್ಮ ಪಾಸ್‌ಬುಕ್ ಅನ್ನು ಪ್ರವೇಶಿಸಲು ಪ್ರಯತ್ನ ಪಟ್ಟಾಗಲೆಲ್ಲ ದೋಷ ಸಂದೇಶ ರವಾನೆಯಾಗುತ್ತಿದೆ. ಹೀಗಾಗಿ, ಚಂದಾದಾರರು ಬೇಸರ ವ್ಯಕ್ತಪಡಿಸಿದ್ದು, ಆದರೆ, ಇಂದು ಮುಂಜಾನೆಯಿಂದ ವೆಬ್‌ಸೈಟ್‌ನಲ್ಲಿ ‘ತಾಂತ್ರಿಕ ನಿರ್ವಹಣೆ’ ಸಂಬಂಧಿತ ಸಮಸ್ಯೆಗಳ ಖಾತೆಯಲ್ಲಿ ಇಪಿಎಫ್‌ಒ ಸೇವೆಗಳು ಲಭ್ಯವಿಲ್ಲ. ಈ ಅನಾನುಕೂಲತೆಗಾಗಿ ವಿಷಾದಿಸಲಾಗಿದೆ ಜೊತೆಗೆ ಇ-ಪಾಸ್‌ಬುಕ್ ಸೌಲಭ್ಯ ಇಂದು ಸಂಜೆ 5 ರಿಂದ ಲಭ್ಯವಿರುತ್ತದೆ’ ಎಂಬ ಸಂದೇಶ ಕಂಡುಬರುತ್ತಿವೆ ಎನ್ನಲಾಗಿದೆ.

You may also like

Leave a Comment