Home » Kodi Mutt Shree : ಕೋಡಿ ಮಠ ಶ್ರೀಯಿಂದ ರಾಜಕೀಯದ ಕುರಿತು ಭಯಾನಕ ಭವಿಷ್ಯ

Kodi Mutt Shree : ಕೋಡಿ ಮಠ ಶ್ರೀಯಿಂದ ರಾಜಕೀಯದ ಕುರಿತು ಭಯಾನಕ ಭವಿಷ್ಯ

0 comments

ಇತ್ತೀಚೆಗಷ್ಟೇ ಈ ಬಾರಿಯ ಕೊರೊನಾ ಅಲೆಯ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಭವಿಷ್ಯ ನುಡಿದಿದ್ದ ಕೋಡಿ ಮಠದ ಶ್ರೀಗಳು ಇದೀಗ, ರಾಜ್ಯ ರಾಜಕೀಯದ ಬಗ್ಗೆ ಭವಿಷ್ಯವಾಣಿ ನುಡಿದಿದ್ದಾರೆ.

ಕೋಡಿಮಠದ ಪೀಠಾಧ್ಯಕ್ಷ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ, ಒಲೆ ಹೊತ್ತಿ ಉರಿದರೆ ನಿಲ್ಲಬಹುದು ಅದೆ ರೀತಿ ಧರೆ ಹೊತ್ತಿ ಉರಿದರೆ ನಿಲ್ಲದು ಎಂದು ಒಗಟಾಗಿ ಭವಿಷ್ಯ ನುಡಿದು ಇದರ ಒಳಾರ್ಥ ಏನಿರಬಹುದು ಎಂದು ಜನರಲ್ಲಿ ಕೂತೂಹಲ ಮನೆ ಮಾಡಿದ್ದು ಈ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿವೆ.
ಎರಡು ಇಲ್ಲವೇ ಮೂರು ಪ್ರಸಿದ್ಧಿ ಪಡೆದವರ ತಲೆಗಳು ಉರುಳುತ್ತವೆ. ಕೊರೊನಾ ನಾಲ್ಕನೆ‌ ಅಲೆಯಿಂದ‌ ಯಾವುದೇ ರೀತಿಯ ಸಮಸ್ಯೆ ಉಂಟಾಗದು.

ಸಂಕ್ರಾಂತಿ- ಯುಗಾದಿಯ ಬಳಿಕ ವರ್ಷಧಾರೆ ಆರಂಭವಾಗಲಿದೆ. ಕಳೆದ ಬಾರಿ ಆದ ಹಾಗೆಯೇ ಈ ಬಾರಿ ಕೂಡ ಆಗಲಿದ್ದು, ಸಂಕ್ರಾಂತಿಗೆ ಇನ್ನೂ ಎರಡು ದಿನಗಳು ಬಾಕಿ ಉಳಿದಿದ್ದು ಸಂಕ್ರಾಂತಿ ಭವಿಷ್ಯ, ಯುಗಾದಿ ಭವಿಷ್ಯ ಆ ಕಾಲಕ್ಕೆ ಹೇಳಬೇಕಾಗುತ್ತದೆ ಎಂದು ಕೋಡಿ ಮಠದ ಶ್ರೀಗಳು ಹೇಳಿದ್ದಾರೆ.

ಈ ನಡುವೆ, ವಿಜಯನಗರ ಜಿಲ್ಲೆ ಹೊಸಪೇಟೆಯ ಬಿಜೆಪಿ ನಾಯಕಿ ರಾಣಿ‌ ಸಂಯುಕ್ತ ಅವರ ನಿವಾಸಕ್ಕೆ‌ ಶುಕ್ರವಾರ ಭೇಟಿ ನೀಡಿ‌ದ ಸಂದರ್ಭ ಶ್ರೀಗಳು ಈ ಹೊಸ ವರ್ಷದಲ್ಲಿ ನಡೆಯಲಿರುವ ಆಗು ಹೋಗುಗಳ ಬಗ್ಗೆ ಭವಿಷ್ಯ ನುಡಿದಿದ್ದಾರೆ. 2023 ಕ್ಕೆ ಜಾಗತಿಕ ಮಟ್ಟದಲ್ಲಿ ಸಮಸ್ಯೆ ತಲೆದೋರಲಿದ್ದು, ಜಾಗತಿಕವಾಗಿ ಬಹಳ ದೊಡ್ಡ ಸಮಸ್ಯೆ ಕಎದುರಾಗಲಿದೆ ಎಂದು ಭವಿಷ್ಯ ನುಡಿದಿದ್ದು ,ಸಾಧು ಸಂತರಿಗೆ ತೊಂದರೆ ಉಂಟಾಗಲಿದೆ. ಇದರ ಜೊತೆಗೆ ರಾಜ್ಯದ ರಾಜಕೀಯದ ಬಗ್ಗೆ ಮಾತನಾಡಿದ್ದು,ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರ‌ ಮಾಡುವುದಿಲ್ಲ ಎಂದು ಹೇಳಿದ್ದು ಜೊತೆಗೆ ರಾಜ್ಯದಲ್ಲಿ ಒಂದು ಪಕ್ಷ ಮಾತ್ರ ಅಧಿಕಾರಕ್ಕೆ ಬರಲಿರುವ ಕುರಿತು ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

You may also like

Leave a Comment