Home » ಸಿಂಗರ್ ಮಂಗ್ಲಿ ಕಾರಿನ ಗ್ಲಾಸ್ ಹೊಡೆದ ಪುಂಡರು | ಕಾರಣವೇನು?

ಸಿಂಗರ್ ಮಂಗ್ಲಿ ಕಾರಿನ ಗ್ಲಾಸ್ ಹೊಡೆದ ಪುಂಡರು | ಕಾರಣವೇನು?

0 comments

ತಮ್ಮ ಸುಮಧುರ ಕಂಠದಿಂದ ಅಪಾರ ಅಭಿಮಾನಿಗಳನ್ನು ಹೊಂದಿರುವ ಟಾಲಿವುಡ್​​ನಲ್ಲಿ ಮಾತ್ರವಲ್ಲದೇ ಸ್ಯಾಂಡಲ್ ವುಡ್ ನಲ್ಲಿಯೂ ತನ್ನ ಪ್ರಭೆಯನ್ನು ಹೆಚ್ಚಿಸಿರುವ (Singer Mangli New Song) ಗಾಯಕಿ ಮಂಗ್ಲಿ ಕುರಿತಾದ ಹೊಸ ಸುದ್ದಿಯೊಂದು ಹೊರಬಿದ್ದಿದೆ.

ಇತ್ತೀಚಿಗೆ ಎಲ್ಲೆಡೆ ಟ್ರೆಂಡ್ ಮಾಡಿರುವ ವೇದ ಸಿನೆಮಾದ (Vedha Movie Singer) ಚಿತ್ರದ ಮಂಗ್ಲಿ ಅವರ ಕಂಠಸಿರಿಯಲ್ಲಿ ಹೊರ ಹೊಮ್ಮಿರುವ ಗಿಲ್ಲಕ್ಕೋ ಶಿವ ಮಾಸ್ ಸಾಂಗ್​ಗಳನ್ನೂ ಕೇಳಲು ಜನ ಕಾತುರದಿಂದ ಎದುರು ನೋಡುವುದು ಗೊತ್ತಿರುವ ವಿಚಾರವೇ!!! ಹೀಗೆ ಕಾರ್ಯ ಕ್ರಮ ನೋಡಲು ಬಂದ ಜನರಿಂದ ಗಾಯಕಿಗೆ ಸಮಸ್ಯೆ ಉಂಟಾದ ಘಟನೆ ನಡೆದಿದೆ. ಹೌದು !! ಪುಂಡರ ಗುಂಪು ಮಂಗ್ಲಿ ಕಾರಿನ ಗ್ಲಾಸ್ ಒಡೆದು ಹಾಕಿರುವ ಘಟನೆ ಬೆಳಕಿಗೆ ಬಂದಿದೆ.

ಬಳ್ಳಾರಿ ಉತ್ಸವದಲ್ಲಿ ಸಾಗರೋಪಾತಿಯಲ್ಲಿ ಜನ ಸೇರಿದ್ದು, ಜನಪ್ರಿಯ ನಿರೂಪಕಿ ಅನುಶ್ರೀ ಹಾಗೂ ಸಂಗೀತ ಲೋಕದ ಮಾಂತ್ರಿಕ ಅರ್ಜುನ್ ಜನ್ಯ ಸೇರಿದಂತೆ ಹಲವು ಕಲಾವಿದರು ಭಾಗಿಯಾದ್ದರು ಎನ್ನಲಾಗಿದೆ. ಬಳ್ಳಾರಿಯ ಮುನ್ಸಿಪಲ್ ಕಾಲೇಜು ಮೈದಾನಕ್ಕೆ ಬಳ್ಳಾರಿ ಉತ್ಸವದ ಕಾರ್ಯಕ್ರಮದ ನಿಮಿತ್ತ ಭಾಗಿಯಾಗಲು ಆಗಮಿಸಿದ್ದ ಸಿಂಗರ್ ಮಂಗ್ಲಿ ಅವರ ಕಾರಿನ ಗ್ಲಾಸನ್ನು ಪುಂಡರು ಹೊಡೆದ ಘಟನೆ ನಿನ್ನೆ (ಶನಿವಾರ) ರಾತ್ರಿ ನಡೆದಿದೆ ಎಂದು ತಿಳಿದು ಬಂದಿದೆ.


ಸಮಾಜದಲ್ಲಿ ನೇಮ್ ಫೇಮ್ ಪಡೆದ ಜನರು ಆಗಮಿಸಿದ ವೇಳೆ ಅವರನ್ನು ಭೇಟಿಯಾಗಲು ಜನರು ಮುಗಿ ಬೀಳೋದು ಸಹಜ. ಅದೇ ರೀತಿ, ವೇದಿಕೆ ಮೇಲೆ ತಮ್ಮ ವಿಭಿನ್ನ ಶೈಲಿಯ ಕಂಠ ಸಿರಿಯ ಮೂಲಕ ಹಾಡಿನ ಕಂಪನಿ ಪಸರಿಸಿ ಜನರನ್ನು ರಂಜಿಸಿದ ಪ್ರತಿಭಾನ್ವಿತ ಗಾಯಕಿ ಮಂಗ್ಲಿ ವಾಪಸ್ ತೆರಳುವ ಸಂದರ್ಭದಲ್ಲಿ ಮಂಗ್ಲಿ ಅವರನ್ನು ಭೇಟಿಯಾಗಲು ಯುವಕರು ದುಂಬಾಲು ಬಿದ್ದಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ವೇದಿಕೆ ಹಿಂಭಾಗದಲ್ಲಿದ್ದ ಮೇಕಪ್ ಟೆಂಟ್‌ ಗೆ ಕೂಡ ಪುಂಡರು ಲಗ್ಗೆ ಇಟ್ಟ ಹಿನ್ನೆಲೆ ತಕ್ಷಣವೆ ಪೋಲಿಸರು ಲಘು ಲಾಟಿ ಪ್ರಹಾರ ನಡೆಸಿದ್ದಾರೆ ಎನ್ನಲಾಗಿದೆ. ಈ ಘಟನೆಯ ಬಳಿಕ ಮಂಗ್ಲಿ ಹೋಗುತ್ತಿದ್ದ ಕಾರಿಗೆ ಪುಂಡರು ಕಲ್ಲು ಎಸೆದಿದ್ದು ಹೀಗಾಗಿ, ಕಾರಿನ ಗ್ಲಾಸ್ ಒಡೆದು ಹೋಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

You may also like

Leave a Comment