Home » ತವರಿಂದ ಹೆಂಡತಿ ಬರಲಿಲ್ಲ ಎಂದು ಪತಿ ಮಹಾಶಯ ಮಾಡಿದ್ದೇನು ಗೊತ್ತಾ? ಕೋಪದಲ್ಲಿ ಮೂಗು ಕುಯ್ಕೋಬಾರ್ದು ಅಂದ್ರೆ, ಇವನು ಕುಯ್ಕೊಂಡಿದ್ದೇ ಬೇರೆ !

ತವರಿಂದ ಹೆಂಡತಿ ಬರಲಿಲ್ಲ ಎಂದು ಪತಿ ಮಹಾಶಯ ಮಾಡಿದ್ದೇನು ಗೊತ್ತಾ? ಕೋಪದಲ್ಲಿ ಮೂಗು ಕುಯ್ಕೋಬಾರ್ದು ಅಂದ್ರೆ, ಇವನು ಕುಯ್ಕೊಂಡಿದ್ದೇ ಬೇರೆ !

by ಹೊಸಕನ್ನಡ
0 comments

ಕೋಪದಲ್ಲಿದ್ದಾಗ ಮೂಗು ಕುಯ್ಕೋಬಾರ್ದು ಅನ್ನೋ ಮಾತು ಇದೆ. ಆ ಕ್ಷಣದಲ್ಲಿ ಬಂದ ಕೋಪ ನಮಗೆ ಏನು ಬೇಕಾರೂ ಮಾಡಲು ಪ್ರಚೋದಿಸಬಹುದು. ಹೀಗಾಗಿ ನಾವು ಕೋಪ ಬಂದಾಗ ಏನು ಮಾಡಲೂ ಮುಂದಾಗಬಾರ್ದು. ಆದ್ರೆ ಇಲ್ಲೊಬ್ಬ ಬೇಕೂಫ ಹೆಂಡತಿ ಇಲ್ಲ ಎಂಬ ಸಿಟ್ಟಿಗೆ ಕುಯ್ದುಕೊಳ್ಳಲು ಮೂಗು ನೆನಪಾಗಲಿಲ್ಲವೇನೋ, ಬದಲಿಗೆ ಆತ ಬೇರೇನನ್ನೋ ಕುಯ್ದುಕೊಂಡು ಸುದ್ದಿಯಲ್ಲಿದ್ದಾನೆ.

‘ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನಮಗದು ಕೋಟಿ ರುಪಾಯಿ’ ಎಂದು ಕನ್ನಡದ ಹೆಸರಾಂತ ಸಾಹಿತಿಯೊಬ್ರು ಯಥೋಚಿತವಾಗಿ ಬರೆದಿದ್ದಾರೆ. ಈ ಅರ್ಧಾಂಗಿ ತವರು ಮನೆಗೆ ಹೋಗಿ ಟೆಂಟ್ ಹಾಕಿಬಿಟ್ರೆ, ಮನೆಯಲ್ಲಿರೋ ಗಂಡನ ಕಥೆ ಏನಾಗಬೇಡ ಹೇಳಿ. ಹೌದು, ಗಂಡ ಹೆಂಡತಿಗೆ ಜಗಳವಾಗಿ ಹೆಂಡತಿ ಏನಾದರೂ ಸಿಟ್ಟಾಗಿಬಿಟ್ಟರೆ ಆಕೆ ನೆಪ ಸಿಕ್ಕಿತೆಂದು ಸೀದಾ ತವರು ಮನೆಗೆ ಹೋಗುತ್ತಾಳೆ. ಕೊನೆಗೆ ಗಂಡನೇ ಹೋಗಿ ಆಸೆ ಮಾಡಿ, ಪೂಸಿ ಹೊಡೆದು ಮರಳಿ ತನ್ನ ಮನೆಗೆ ಕರೆತರಬೇಕು. ಇನ್ನು ಕೆಲವೊಮ್ಮೆ ಹಬ್ಬ-ಹರಿದಿನ ಎಂದು ತವರಿಗೆ ಹೋದ ಹೆಂಡತಿ ಎಷ್ಟು ದಿನವಾದರೂ ಬರುವುದಿಲ್ಲ. ಗಂಡ ಎಷ್ಟು ಅಂಗಲಾಚಿದರೂ, ಏನಾದರೂ ನೆಪ ಹೂಡಿ ಅಲ್ಲೇ ಇರುತ್ತಾಳೆ. ಕೊನೆಗೆ ತಾಳ್ಮೆ ಕಳೆದುಕೊಂಡ ಪತಿರಾಯ ಗದರಿಸಿದಾಗ ಓಡೋಡಿ ಬರುತ್ತಾಳೆ. ಇದೇ ರೀತಿ ಇಲ್ಲೊಬ್ಬನ ಹೆಂಡತಿ ತವರು ಮನೆಗೆ ಹೋದೋಳು ಎಷ್ಟು ಕರೆದ್ರೂ ಬಂದಿಲ್ಲ. ಕರೆದು ಕರೆದು ಸಾಕಾದ ಪತಿ ಮಹಾಶಯ ಕೊನೆಗೆ ಸಿಟ್ಟಿನಿಂದ, ಹತಾಶೆಯಿಂದ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡಿದ್ದಾನೆ!

ಬಿಹಾರದ ಕೃಷ್ಣ ಬಾಸುಕಿ ಎಂಬಾತ ಅನಿತಾ ಎನ್ನುವವರನ್ನು ಮದುವೆಯಾಗಿದ್ದಾನೆ. ದಂಪತಿಗೆ ನಾಲ್ಕು ಮಕ್ಕಳು ಕೂಡಾ ಇವೆ. ಕುಟುಂಬದಿಂದ ದೂರವಿದ್ದ ಕೃಷ್ಣ ಪಂಜಾಬ್‌ ನ ಮಂಡಿಯಲ್ಲಿ ವಾಸವಾಗಿ ಕೆಲಸ ಮಾಡಿಕೊಂಡು ಇರುತ್ತಿದ್ದನು. ಎರಡು ತಿಂಗಳ ಹಿಂದಷ್ಟೇ ಮನೆಗೆ ಬಂದಿದ್ದನು. ಈ ವೇಳೆ ಹೆಂಡತಿ ಮಕ್ಕಳು ಮನೆಯಲ್ಲಿರಲಿಲ್ಲ. ತವರಿಗೆ ಹೋದ ಹೆಂಡತಿಗಾಗಿ ಕಾದು ಸಿಟ್ಟಾದ ಕೃಷ್ಣರಾತ್ರಿ ಚೂಪಾದ ಚೂರಿಯಿಂದ ತನ್ನ ಖಾಸಗಿ ಅಂಗವನ್ನೇ ಕತ್ತರಸಿಕೊಂಡಿದ್ದಾನೆ. ಮಧೇಪುರ ಜಿಲ್ಲೆಯ ಮುರಳಿಗಂಜ್ ಬ್ಲಾಕ್‌ನಲ್ಲಿರುವ ನಯಾ ನಗರ್ ಗಾಂವ್ ಗ್ರಾಮದಲ್ಲಿ ಆಘಾತಕಾರಿ ಘಟನೆ ವರದಿಯಾಗಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಗಾಯಾಳುವಿನ ಪರಿಚಯಸ್ಥರೊಬ್ಬರು, ಮೊನ್ನೆ ಜನವರಿ 20 ರಂದು ಅವರ ಹೆಂಡತಿ ತನ್ನ ತವರಿಗೆ ಹೋಗುತ್ತಿದ್ದಂತೆ, ಅವನು ತನ್ನ ಖಾಸಗಿ ಅಂಗವನ್ನು ಕತ್ತರಿಸಿದ್ದಾನೆ ಎಂದು ಹೇಳಿದರು. ಕೂಡಲೇ ಅಕ್ಕಪಕ್ಕದವರು ಕೃಷ್ಣ ಬಾಸುಕಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದ್ದಾರೆ. ಸದ್ಯ ಆತ ಅಪಾಯದಿಂದ ಪಾರಾಗಾಗಿದ್ದಾನೆ. ಈತನ ಈ ಕೃತ್ಯ ನೋಡಿ ಪತ್ನಿ ವಾಪಸ್ಸಾದಳಾ, ಇಲ್ಲಾ ಮತ್ತಷ್ಟು ಮುನಿಸು ಮಾಡಿಕೊಂಡು ತವರಲ್ಲೇ ಕೂತಳಾ, ಉತ್ತರ ಲಭ್ಯವಿಲ್ಲ.

You may also like

Leave a Comment