Home » Alia Bhatt : ಆಲಿಯಾ ದಂಪತಿ, ಮತ್ತೆ ಪ್ರೆಗ್ನೆಂಟ್‌ | ಎರಡನೇ ಮಗುವಿನ ನಿರೀಕ್ಷೆಯಲ್ಲಿ ಬಿಟೌನ್‌ ಜೋಡಿ !

Alia Bhatt : ಆಲಿಯಾ ದಂಪತಿ, ಮತ್ತೆ ಪ್ರೆಗ್ನೆಂಟ್‌ | ಎರಡನೇ ಮಗುವಿನ ನಿರೀಕ್ಷೆಯಲ್ಲಿ ಬಿಟೌನ್‌ ಜೋಡಿ !

0 comments

ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಪ್ರೀತಿಸುತ್ತಿದ್ದ ರಣಬೀರ್‌ ಕಪೂರ್‌ ಮತ್ತು ಆಲಿಯಾ ಭಟ್‌ ಏಪ್ರಿಲ್ 14, 2022 ರಂದು ವಿವಾಹವಾದರು. ಇದೀಗ ಅವರಿಗೆ ಒಬ್ಬ ಮುದ್ದಾದ ಮಗಳಿದ್ದಾಳೆ. ಸದ್ಯ ಈ ಚಿಕ್ಕ ಸಂಸಾರ ಸರಾಗವಾಗಿ ಸಾಗುತ್ತಿದೆ. ಮಗಳು ರಾಹಾ ಹುಟ್ಟಿದಾಗಿನಿಂದಲೂ ಆಲಿಯಾ ಭಟ್ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗುತ್ತಿದ್ದರು.

ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ತನ್ನ ಮಗುವಿಗೆ ರಾಹಾ ಎಂದು ಹೆಸರಿಟ್ಟಿದ್ದಾರೆ. ಆಲಿಯಾ ಸಿನಿಮಾ ಕೆಲಸಕ್ಕೆ ಬ್ರೇಕ್ ಕೊಟ್ಟಿದ್ದು, ತಾಯ್ತನದ ಪ್ರತಿ ಕ್ಷಣವನ್ನು ಅನುಭವಿಸುತ್ತಿದ್ದಾರೆ. ಇತ್ತೀಚೆಗೆ ಆಲಿಯಾ ತನ್ನ ಮಗಳಿಗೆ ಹಾಲುಣಿಸುವ ಚಿತ್ರವೊಂದು ವೈರಲ್ ಆಗಿತ್ತು. ಕೆಂಪು ಸೀರೆಯುಟ್ಟು ಮಗುವಿಗೆ ಹಾಲುಣಿಸೋ ವೇಳೆ ನಟಿ ನಗುತ್ತಿದ್ದ ಫೋಟೋದಲ್ಲಿ ಆಕೆಯ ತಾಯ್ತನದ ಆನಂದ ಎದ್ದು ಕಾಣುತ್ತಿತ್ತು.

ಆಲಿಯಾ ನವೆಂಬರ್ 6 ರಂದು ಮೊದಲ ಮಗುವಿಗೆ ಜನ್ಮ ನೀಡಿದರು. ಮದುವೆಯಾದ ಎರಡು ತಿಂಗಳ ನಂತರ ಆಲಿಯಾ ತಾನು ಗರ್ಭಿಣಿಯಾಗಿರುವ ವಿಚಾರ ತಿಳಿಸಿದರು. ಈ ಸಂತಸದ ಸುದ್ದಿಯನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಸೋನೋಗ್ರಫಿ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ತಿಳಿಸಿದರು. ಹಾಗೆ, ಏಪ್ರಿಲ್ 14 ಕ್ಕೆ ಮದುವೆಯಾಗಿ ಏಳು ತಿಂಗಳುಗಳು ಪೂರ್ಣಗೊಳ್ಳುವ ಮೊದಲೇ ಆಲಿಯಾ ತನ್ನ ಮೊದಲ ಮಗುವಿಗೆ ಜನ್ಮ ನೀಡಿದರು ಈ ವಿಚಾರ ಎಲ್ಲೆಡೆ ವೈರಲ್ ಆಗಿತ್ತು.

ಇದೀಗ ಮತ್ತೇ ಬಾಲಿವುಡ್ ಕ್ಯೂಟ್‌ ಕಪಲ್‌ ರಣಬೀರ್‌ ಕಪೂರ್‌ ಮತ್ತು ಆಲಿಯಾ ಭಟ್‌ ಶೀಘ್ರದಲ್ಲೇ ಮತ್ತೊಂದು ಶುಭ ಸಮಾಚಾರವನ್ನು ಅಭಿಮಾನಿಗಳಿಗೆ ಹೇಳಲಿದ್ದಾರೆ. ಹೌದು ಇದೀಗ ಆಲಿಯಾ ಮತ್ತೊಮ್ಮೆ ತಾಯಿಯಾಗುತ್ತಿದ್ದಾರೆ ಎಂಬ ವಿಚಾರ ಹರಿದಾಡುತ್ತಿದೆ.

ಈ ಕುರಿತು ಬಾಲಿವುಡ್ ಮಾಧ್ಯಮದಲ್ಲಿ ಕೆಲವು ವದಂತಿಗಳು ಹರಿದಾಡುತ್ತಿವೆ. ಆದರೆ ಈ ಬಗ್ಗೆ ಆಲಿಯಾ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಆಲಿಯಾ ನಿಜವಾಗಿಯೂ ಗರ್ಭಿಣಿಯಾಗಿದ್ದರೆ ಎರಡನೇ ಮಗುವಿಗೆ ಒಂದು ವರ್ಷದೊಳಗೆ ಜನ್ಮ ನೀಡುತ್ತಾರೆ. ಮಕ್ಕಳಿಗಿಂತ ವೃತ್ತಿಜೀವನವು ಮುಖ್ಯವಲ್ಲ ಎಂದು ಆಲಿಯಾ ಈಗಾಗಲೇ ಹೇಳಿದ್ದಾರೆ.

ಈ ಎಲ್ಲಾ ಗಾಸಿಪ್ ಗಳಿಗೆ ಆಲಿಯಾ ಭಟ್ ತನ್ನ ಬಟ್ಟೆ ಬ್ರಾಂಡ್‌ಗಾಗಿ ಹೊಸ ಮ್ಯಾಟರ್ನಿಟಿ ಕಲೆಕ್ಷನ್‌ ಪ್ರಾರಂಭಿಸಿದ್ದು, ಇದು ನಟಿಯ ಎರಡನೇ ಗರ್ಭಧಾರಣೆಯ ಬಗ್ಗೆ ಜನರ ತಲೆಗೆ ಹುಳ ಬಿಟ್ಟಂತಾಗಿದೆ.

You may also like

Leave a Comment