Home » ಡಿವೋರ್ಸ್ ಪಡೆದ ದಿನವನ್ನು ಪ್ರತೀ ವರ್ಷ ಸಂಭ್ರಮಿಸುವ ಈಕೆ, ಈ ಬಾರಿ ಆಚರಿಸಿದ್ದು ವಿಚ್ಛೇದನದ 4ನೇ ವಾರ್ಷಿಕೋತ್ಸವ!

ಡಿವೋರ್ಸ್ ಪಡೆದ ದಿನವನ್ನು ಪ್ರತೀ ವರ್ಷ ಸಂಭ್ರಮಿಸುವ ಈಕೆ, ಈ ಬಾರಿ ಆಚರಿಸಿದ್ದು ವಿಚ್ಛೇದನದ 4ನೇ ವಾರ್ಷಿಕೋತ್ಸವ!

by ಹೊಸಕನ್ನಡ
0 comments

ಹೆಚ್ಚಿನವರು ಬದುಕಿನಲ್ಲಿ ಅನೇಕ ಸಂತೋಷದ ಗಳಿಗೆಗಳನ್ನು ನೆನಪು ಮಾಡಿಕೊಂಡು ಪ್ರತೀ ವರ್ಷ ಸಂಭ್ರಮಿಸುತ್ತಾರೆ. ಹುಟ್ಟುಹಬ್ಬ, ಮದುವೆ ದಿನವನ್ನೆಲ್ಲ ಸಂಭ್ರಮ, ಸಡಗರದಿಂದೆಲ್ಲ ಆಚರಿಸುತ್ತೇವೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೆಲವು ಕಪಲ್ಸ್ ಗಳು ತಾವು ಕಮಿಟ್ ಆದ ದಿನವನ್ನೂ ಸಂಭ್ರಮಿಸುತ್ತಾರೆ. ಆದರೆ ಇಲ್ಲೊಬ್ಬಳು ಮಹಿಳೆ ತನ್ನ ಜೀವನದಲ್ಲಾದ ಕಹಿ ಘಟನೆಯನ್ನು ವಾರ್ಷಿಕೋತ್ಸವವಾಗಿ ಮಾಡಿಕೊಂಡು ಸಂಭ್ರಮಿಸಿರ ಆಚರಿಸಿದ ಘಟನೆಯೊಂದು ನಡೆದಿದೆ.

ಅನೇಕ ಕಾರಣಗಳಿಂದ ದಂಪತಿಗಳು ವಿಚ್ಛೇದನ ಪಡೆಯುತ್ತಾರೆ. ಪಡೆದವರು ಆ ದಿನವನ್ನು ಆಚರಿಸುವುದು ಬಿಡಿ, ಅದನ್ನು ನೆನಪು ಮಾಡಿಕೊಳ್ಳಲು ಇಷ್ಟಪಡಲ್ಲ. ಆದರೆ ಇಲ್ಲೊಬ್ಬ ಮಹಿಳೆ ತನ್ನ 4 ವರ್ಷದ ವಿಚ್ಛೇದನ ದಿನವನ್ನು ಆಚರಿಸುತ್ತಿದ್ದಾಳೆ. ಹೌದು, ಶಾಶ್ವತಿ ಶಿವಾ ಎಂಬಾಕೆ ತನ್ನ 4ನೇ ವರ್ಷದ ವಿಚ್ಛೇದನ ದಿನವನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾಳೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾಳೆ.

ಪಾರ್ಕ್‍ನಲ್ಲಿ ಕುಳಿತು ಕಾಫಿ ಕುಡಿಯುತ್ತಿರುವ ಫೋಟೋವೊಂದನ್ನು ಪೋಸ್ಟ್ ಮಾಡಿರು ಈ ಶಾಶ್ವತಿ ಅವರು ‘ಇದು ನನಗೆ ಸ್ವಾತಂತ್ರ್ಯ ದೊರೆತ 4ನೇ ವರ್ಷ. ಹಾಗಾಗಿ ಇಂದು ನನ್ನ ವಿಚ್ಛೇದನ ದಿನದ 4ನೇ ವಾರ್ಷಿಕೋತ್ಸವವಾಗಿದೆ. ಇದನ್ನು ಒಂದು ದಿನವು ನಾನು ಲಘುವಾಗಿ ತೆಗೆದುಕೊಂಡಿಲ್ಲ. ಯಾಕೆಂದರೆ ನನಗಿದು ಸಂತೋಷದ ದಿನ’ ಎಂದು ಬರೆದುಕೊಂಡಿದ್ದಾಳೆ.

ಜೊತೆಗೆ 4 ವರ್ಷಗಳ ಹಿಂದೆ ನಾನು ವಿಚ್ಛೇದನ ಪಡೆದಿದ್ದೇನೆ. ನಾನು ಪ್ರತಿವರ್ಷ ಈ ದಿನವನ್ನು ನನ್ನ ಸ್ವಾತಂತ್ರ್ಯದ ದಿನವೆಂದು ಆಚರಿಸುತ್ತೇನೆ. ವಿಚ್ಛೇದನ ಪಡೆದಿದ್ದೇನೆ ಎಂಬುದನ್ನು ಒಪ್ಪಿಕೊಳ್ಳುವುದು ನನಗೆ ನಿಜವಾಗಿಯೂ ಮುಖ್ಯವಾದ ಹಾಗೂ ಸಂತೋಷದ ವಿಚಾರ. ಕಳೆದ 1,460 ದಿನಗಳಲ್ಲಿ ಪ್ರತಿದಿನವೂ ಖುಷಿಯಿಂದ ಜೀವಿಸಿದ್ದೇನೆ. ಇದೆಲ್ಲದರಿಂದ ಈ ಆಚರಣೆ ಮಹತ್ವದ್ದಾಗಿದೆ ಎಂದು ಹೇಳಿದ್ದಾಳೆ.

You may also like

Leave a Comment