ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಮಗಳು ನಟಿ ಆಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆಎಲ್ ರಾಹುಲ್ ಜನವರಿ 23 ರಂದು ಖಂಡಾಲಾದಲ್ಲಿ ವಿವಾಹವಾಗಿದ್ದಾರೆ. ಹಲವು ವರ್ಷಗಳಿಂದ ಪ್ರಣಯ ಹಕ್ಕಿಗಳಾಗಿ ತೇಲಾಡುತ್ತಿದ್ದ ಈ ಜೋಡಿ ಈಗ ತಮ್ಮ ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಸಪ್ತಪದಿ ತುಳಿದು ಈಗ ಗಂಡ ಹೆಂಡತಿಯಾಗಿ ಭಡ್ತಿ ಪಡೆದಿದ್ದಾರೆ. ಈ ವಿವಾಹ ಸಂದರ್ಭದಲ್ಲಿ ಈ ಇಬ್ಬರು ಸ್ಟಾರ್ ಆಟಗಾರ ಹಾಗೂ ನಟಿಗೆ ದೊರಕಿದ ಉಡುಗೊರೆಗಳ ಬಗ್ಗೆ ಎಲ್ಲೆಡೆ ಭಾರೀ ಚರ್ಚೆಯಾಗುತ್ತಿದೆ. ತಮ್ಮ ಕುಟುಂಬದ ಸದಸ್ಯರು, ಸಂಬಂಧಿಕರಿಂದ, ಸ್ನೇಹಿತರಿಂದ ದೊರಕಿದ ಭರ್ಜರಿ ಗಿಫ್ಟ್‌ಗಳ ಬಗ್ಗೆ ಈಗ ವರದಿಯೊಂದು ಪ್ರಕಟ ಮಾಡಿದೆ. ಈ ಭರ್ಜರಿ ಗಿಫ್ಟ್‌ಗಳನ್ನು ನೀವು ಗಮನಿಸಿದರೆ ಹುಬ್ಬೇರಿಸುವುದಂತು ಖಂಡಿತ ಪಕ್ಕಾ.
ಹಲವಾರು ಮಾಧ್ಯಮಗಳ ವರದಿಗಳ ಪ್ರಕಾರ, ಅಥಿಯಾ ಅವರ ತಂದೆ, ನಟ ಸುನೀಲ್ ಶೆಟ್ಟಿ ಅವರು ಮುಂಬೈನಲ್ಲಿ 50 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಅಪಾರ್ಟ್ಮೆಂಟ್ ಅನ್ನು ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ, ಸುನೀಲ್ ಶೆಟ್ಟಿ ಅವರ ಆಪ್ತರಾಗಿರುವ ನಟ ಸಲ್ಮಾನ್ ಖಾನ್ ಅವರು ಅಥಿಯಾಗೆ ಸುಮಾರು 1.64 ಕೋಟಿ ರೂಪಾಯಿ ಮೌಲ್ಯದ ಆಡಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.
ನಟ ಜಾಕಿ ಶ್ರಾಫ್ ಅಥಿಯಾ ಅವರಿಗೆ ಚೋಪರ್ಡ್ ವಾಚಸ್‌ನಿಂದ 30 ಲಕ್ಷ ರೂಪಾಯಿ ಮೌಲ್ಯದ ವಾಚ್ ಅನ್ನು ಉಡುಗೊರೆಯಾಗಿ ನೀಡಿದರೆ, ಅರ್ಜುನ್ ಕಪೂರ್ ಅವರಿಗೆ 1.5 ಕೋಟಿ ರೂಪಾಯಿ ಮೌಲ್ಯದ ಡೈಮಂಡ್ ಬ್ರೇಸ್ಲೆಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳಲ್ಲದೆ, ಹಲವಾರು ಕ್ರಿಕೆಟಿಗರು ನವವಿವಾಹಿತರಿಗೆ ದುಬಾರಿ ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ವಿರಾಟ್ ಕೊಹ್ಲಿ ರಾಹುಲ್‌ಗೆ 2.17 ಕೋಟಿ ರೂಪಾಯಿ ಮೌಲ್ಯದ ಬಿಎಂಡಬ್ಲ್ಯು ಕಾರನ್ನು ಉಡುಗೊರೆಯಾಗಿ ನೀಡಿದ್ದರೆ, ಎಂಎಸ್ ಧೋನಿ ರಾಹುಲ್‌ಗೆ 80,00,000 ರೂಪಾಯಿ ಮೌಲ್ಯದ ಕವಾಸಕಿ ನಿಂಜಾ ಬೈಕ್‌ನ್ನು ಉಡುಗೊರೆಯಾಗಿ ನೀಡಿದ್ದಾರೆ.
