Home » Anant Ambani Weight Gain : 200 ಕೆಜಿ ತೂಕ ಇದ್ದ ಅನಂತ್‌ ಅಂಬಾನಿ 100 ಕೆಜಿ ಕಡಿಮೆ ಆಗಿದ್ದು, ನಂತರ ಮತ್ತೆ ತೂಕ ಹೆಚ್ಚಿದ್ದು ಹೇಗೆ ? ಇದಕ್ಕೆ ನಿರ್ದಿಷ್ಟ ಕಾರಣವೇನು ಎಂದು ಹೇಳಿದ ತಾಯಿ ನೀತಾ ಅಂಬಾನಿ!

Anant Ambani Weight Gain : 200 ಕೆಜಿ ತೂಕ ಇದ್ದ ಅನಂತ್‌ ಅಂಬಾನಿ 100 ಕೆಜಿ ಕಡಿಮೆ ಆಗಿದ್ದು, ನಂತರ ಮತ್ತೆ ತೂಕ ಹೆಚ್ಚಿದ್ದು ಹೇಗೆ ? ಇದಕ್ಕೆ ನಿರ್ದಿಷ್ಟ ಕಾರಣವೇನು ಎಂದು ಹೇಳಿದ ತಾಯಿ ನೀತಾ ಅಂಬಾನಿ!

0 comments

ಇತ್ತೀಚೆಗಷ್ಟೇ ಮುಕೇಶ್ ಅಂಬಾನಿ (Mukesh Ambani) ಮತ್ತು ನೀತಾ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ (Anant Ambani) ಅವರ ನಿಶ್ಚಿತಾರ್ಥ ರಾಧಿಕಾ ಮರ್ಚೆಂಟ್ ಜೊತೆಗೆ ಅದ್ದೂರಿಯಾಗಿ ನಡೆದಿದ್ದು, ಸದ್ಯ ನಿಶ್ಚಿತಾರ್ಥದ ಹಲವಾರು ಫೋಟೋ, ವೀಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಜೊತೆಗೆ ಅನಂತ್ ಅಂಬಾನಿಯವರ ತೂಕದಲ್ಲಿ ಮತ್ತೆ ಹೆಚ್ಚಳಗೊಂಡ ವಿಚಾರವೂ ವೈರಲ್ ಆಗುತ್ತಿದೆ. ಮಗನ ದೇಹದ ತೂಕ ಮತ್ತೆ ಹೆಚ್ಚಾಗಿರುವ ಬಗ್ಗೆ ನೀತಾ ಅಂಬಾನಿ ಮಾತನಾಡಿದ್ದು, ಇದರ ಹಿಂದಿರುವ ಕಾರಣವನ್ನು ತಿಳಿಸಿದ್ದಾರೆ.

2016 ರಲ್ಲಿ ಅನಂತ್ ಅಂಬಾನಿ ತಮ್ಮ ದೇಹದ ತೂಕ ಇಳಿಸಿಕೊಂಡು ಎಲ್ಲರಿಗೂ ಮಾದರಿಯಾಗಿದ್ದರು. ಬರೋಬ್ಬರಿ 200 ರಿಂದ 100 ಕೆಜಿಯಷ್ಟು ತೂಕ ಕಳೆದುಕೊಂಡಿದ್ದ ಅನಂತ್ ಅಂಬಾನಿ ಅವರ ತೂಕ ಈಗ ಮತ್ತೆ ಅದೇ ರೀತಿ ಹೆಚ್ಚಾಗಿದೆ. ಆದರೆ ಇದಕ್ಕೆ ಕಾರಣವಿದ್ದು, ಅನಂತ್ ಅಂಬಾನಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಹಾಗಾಗಿ ಸ್ಥೂಲಕಾಯತೆಯಿಂದ ಬಳಲುತ್ತಿದ್ದಾನೆ ಎಂದು ತಾಯಿ ನೀತಾ ಅಂಬಾನಿ ತಿಳಿಸಿದ್ದಾರೆ.

ಒಂದು ಸಮಯದಲ್ಲಿ ಕೇಜಿಗಟ್ಟಲೆ ತೂಕ ಇಳಿಸಿಕೊಂಡು ಎಲ್ಲರಿಗೂ ಮಾದರಿಯಾಗಿದ್ದ ಅನಂತ್ ನಂತರ ಉಬ್ಬಸದಿಂದ ಬಳಲುತ್ತಿದ್ದರು. ಆ ಸಮಯದಲ್ಲಿ ಸಾಕಷ್ಟು ಔಷದಿಗಳನ್ನು ಸೇವಿಸಿದ್ದ ಕಾರಣ, ಈ ಸ್ಟೀರಾಯ್ಡ್ ಗಳ ಅಡ್ಡ ಪರಿಣಾಮದಿಂದಾಗಿ ಸ್ಥೂಲಕಾಯತೆಯಿಂದ ಬಳಲುತ್ತಿದ್ದಾರೆ. ಅಲ್ಲದೆ, ಆಸ್ತಮಾ ಚಿಕಿತ್ಸೆಯು ಬಹಳಷ್ಟು ತೂಕವನ್ನು ಹೆಚ್ಚಿಸಿತು ಎಂದು ಮಗನ ಆರೋಗ್ಯದ ಕುರಿತು ನೀತಾ ಅಂಬಾನಿ ಹೇಳಿಕೊಂಡಿದ್ದಾರೆ.

ಅನಂತ್ ಅಂಬಾನಿ ಪ್ರತಿದಿನ ಐದು-ಆರು ಗಂಟೆಗಳ ಕಾಲ ವ್ಯಾಯಾಮ ಮಾಡುತ್ತಾರೆ ಮತ್ತು ಅವರ ವ್ಯಾಯಾಮದ ನಿಯಮವು 21 ಕಿಮೀ ನಡಿಗೆ ನಂತರ ಯೋಗ, ತೂಕ ತರಬೇತಿ, ಕ್ರಿಯಾತ್ಮಕ ತರಬೇತಿ ಮತ್ತು ಹೆಚ್ಚಿನ ತೀವ್ರತೆಯ ಕಾರ್ಡಿಯೋ ವ್ಯಾಯಾಮಗಳನ್ನು ಒಳಗೊಂಡಿದೆ. ತನ್ನ ಮಗ ಸ್ಥೂಲಕಾಯತೆಯ ವಿರುದ್ಧ ಹೋರಾಡುತ್ತಿದ್ದು, ಇಂತಹ ಸಮಸ್ಯೆಯನ್ನು ಹೊಂದಿರುವವರು ಅನೇಕರಿದ್ದಾರೆ. ಹಾಗಾಗಿ ಯಾರೂ ಕೂಡ ತಮ್ಮ ದೇಹದ ಬಗ್ಗೆ ಅಸಮಾಧಾನ ಪಟ್ಟುಕೊಳ್ಳಬೇಡಿ. ಅಲ್ಲದೆ, ಇಂತಹ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರಿಗೆ ಕುಟುಂಬಸ್ಥರು ಸಕಾರಾತ್ಮಕ ಯೋಚನೆಗಳನ್ನು ಅವರಲ್ಲಿ ತುಂಬಬೇಕು ಎಂದು ನೀತಾ ಅಂಬಾನಿ ಹೇಳಿದರು.

You may also like

Leave a Comment