Home » ಶೋಲೆ ಪಾರ್ಟ್‌ 2 ಅತೀ ಶೀಘ್ರದಲ್ಲಿ | ಜೈ ವೀರು ಪಾತ್ರದಲ್ಲಿ ಎಂ.ಎಸ್‌.ಧೋನಿ ಮತ್ತು ಹಾರ್ದಿಕ್‌ ಪಾಂಡ್ಯ ಮಿಂಚಿಂಗ್‌!

ಶೋಲೆ ಪಾರ್ಟ್‌ 2 ಅತೀ ಶೀಘ್ರದಲ್ಲಿ | ಜೈ ವೀರು ಪಾತ್ರದಲ್ಲಿ ಎಂ.ಎಸ್‌.ಧೋನಿ ಮತ್ತು ಹಾರ್ದಿಕ್‌ ಪಾಂಡ್ಯ ಮಿಂಚಿಂಗ್‌!

0 comments

ಮಹೇಂದ್ರ ಸಿಂಗ್‌ ಧೋನಿ ಟೀಮ್ ಇಂಡಿಯಾದ ಕ್ಯಾಪ್ಟನ್ ಕೂಲ್ ಅಂತಾನೆ ಫೇಮಸ್. ವಿಶ್ವ ಕ್ರಿಕೆಟ್‌ ಕಂಡ ಅಪ್ರತಿಮ ಆಟಗಾರ ಮಾತ್ರವಲ್ಲ ಎಷ್ಟೇ ಒತ್ತಡದ ಪರಿಸ್ಥಿತಿಯಲ್ಲಿಯೂ ಶಾಂತ ಚಿತ್ತತೆಯಿಂದ ಗಮನ ಸೆಳೆದ ಟೀಮ್‌ ಇಂಡಿಯಾ ಸೋಲಬೇಕಿದ್ದ ಅದೆಷ್ಟೋ ಪಂದ್ಯಗಳನ್ನು ಗೆದ್ದುಕೊಟ್ಟು ಸಾರ್ವಕಾಲಿಕ ಶ್ರೇಷ್ಠ ಫಿನಿಷರ್‌ ಎಂದೇ ಖ್ಯಾತಿ ಪಡೆದ ನಾಯಕ.

ಇದೀಗ ಎಂಎಸ್ ಧೋನಿ ಮತ್ತು ಹಾರ್ದಿಕ್ ಪಾಂಡ್ಯ ಅವರ ಸೌಹಾರ್ದತೆಯ ಸಣ್ಣ ಝಲಕ್ ಹೊರಗೆ ಅನಾವರಣ ಗೊಂಡ ಅಪರೂಪದ ಘಟನೆ ಬೆಳಕಿಗೆ ಬಂದಿದೆ. ಎಂಎಸ್ ಧೋನಿ ಮೈದಾನದ ಒಳಗೆ ಅಷ್ಟೆ ಅಲ್ಲದೆ ಹೊರಗೆ ಸೌಹಾರ್ದತೆ ಕಾಯ್ದುಕೊಳ್ಳುವುದು ಹೊಸತಲ್ಲ. ಆದರೆ, ಗುರುವಾರ, ಉದ್ವಿಗ್ನ ಪರಿಸ್ಥಿತಿಯಲ್ಲಿಯೂ ಕೂಡ ಧೋನಿಯಲ್ಲಿ ಶಾಂತತೆಯ ಭಾವವನ್ನು ತುಂಬಿದ ಅಪೂರ್ವ ಕ್ಷಣದ ಸವಿ ನೆನಪಿನ ಮೆಲುಕು ಹಾಕಿಕೊಳ್ಳುವ ನಿಟ್ಟಿನಲ್ಲಿ ಪಾಂಡ್ಯ ಅವರು ಸೈಡ್‌ಕಾರ್‌ನೊಂದಿಗೆ ಹಳೆಯ ಬೈಕ್‌ನಲ್ಲಿ ಭಾರತದ ದಂತಕಥೆಯೊಂದಿಗೆ ಫೋಟೋವನ್ನು ಹಂಚಿಕೊಂಡಿದ್ದಾರೆ.ಪಾಂಡ್ಯ ಟ್ವಿಟರ್‌ನಲ್ಲಿ ಈ ಫೋಟೋವನ್ನು ಪೋಸ್ಟ್ ಮಾಡಿದ್ದು, “ಶೋಲೆ 2 ಶೀಘ್ರದಲ್ಲೇ ಬರಲಿದೆ” ಎಂದು ಶೀರ್ಷಿಕೆ ಕೂಡ ನೀಡಿದ್ದಾರೆ.

https://twitter.com/hardikpandya7/status/1618463312781672448?ref_src=twsrc%5Etfw%7Ctwcamp%5Etweetembed%7Ctwterm%5E1618463312781672448%7Ctwgr%5E3c11b35dbce96bc4ac35e10a74e8cc94eb2c5d28%7Ctwcon%5Es1_c10&ref_url=https%3A%2F%2Fm.timesofindia.com%2Fsports%2Foff-the-field%2Fms-dhoni-and-hardik-pandya-turn-jai-viru-sholay-2-coming-soon%2Farticleshow%2F97339125.cms

ಅಂದ ಹಾಗೆ ಈ ಉಲ್ಲೇಖವನ್ನು ಕಂಡ ಪ್ರತಿಯೊಬ್ಬ ಭಾರತೀಯ ಸಿನಿಮಾ ಅಭಿಮಾನಿಗೂ ಕೂಡ ಇದರ ಒಳಾರ್ಥ ಅರಿಯದೇ ಇರಲು ಸಾಧ್ಯವೇ ಇಲ್ಲ. ಅಮಿತಾಭ್ ಬಚ್ಚನ್ ಮತ್ತು ಧರ್ಮೇಂದ್ರ ಅವರು ಸೈಡ್‌ಕಾರ್‌ನೊಂದಿಗೆ ಮೋಟಾರ್‌ಬೈಕ್‌ನಲ್ಲಿ ಕಾಣಿಸಿಕೊಂಡು ಎಲ್ಲ ಅಭಿಮಾನಿಗಳ ರಂಜಿಸಿದ ಹಾಡಿನ ದೃಶ್ಯವು ಹಿಂದಿ ಚಲನಚಿತ್ರ ಅಪ್ರತಿಮ ದೃಶ್ಯಗಳಲ್ಲಿ ಒಂದಾಗಿ ಖ್ಯಾತಿ ಪಡೆದು ಜನ ಮಾನಸದಲ್ಲಿ ಅಚ್ಚಳಿಯದೆ ಉಳಿದುಕೊಂಡಿದೆ.

ಸೈಡ್‌ಕಾರ್ ಹೊಂದಿರುವ ಇದೇ ರೀತಿಯ ಬೈಕು ಬಾಲಿವುಡ್ ಇತಿಹಾಸದಲ್ಲಿ ಅತಿದೊಡ್ಡ ಬ್ಲಾಕ್‌ಬಸ್ಟರ್‌ ಹಿಟ್ ಲಿಸ್ಟ್ ನಲ್ಲಿ ಗುರುತಿಸಿಕೊಂಡ ಜನಪ್ರಿಯ ಚಲನಚಿತ್ರ ‘ಶೋಲೆ’ ಮೂಲಕ ಫೇಮಸ್ ಆಗಿ ಟ್ರೆಂಡ್ ಸೃಷ್ಟಿಸಿತ್ತು. ಸದ್ಯ ಪಾಂಡ್ಯರವರು, ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ T20I ಸರಣಿಯಲ್ಲಿ ಭಾರತವನ್ನು ಮುನ್ನಡೆಸಲಿದ್ದು, ಜನವರಿ 27 (ಶುಕ್ರವಾರ) ರಂದು ಧೋನಿಯ ತವರು ರಾಂಚಿಯ JSCA ಇಂಟರ್ನ್ಯಾಷನಲ್ ಸ್ಟೇಡಿಯಂ ಕಾಂಪ್ಲೆಕ್ಸ್‌ನಲ್ಲಿ ಪಂದ್ಯ ಆರಂಭವಾಗಲಿದೆ ಎಂದು ತಿಳಿದುಬಂದಿದೆ.

You may also like

Leave a Comment