Home » Astro Tips : ಮಲಗುವ ದಿಂಬಿನಡಿ ಈ ವಸ್ತುಗಳನ್ನು ಇಟ್ಟು ಅದೃಷ್ಟ ಬದಲಾಯಿಸಿಕೊಳ್ಳಿ!!!

Astro Tips : ಮಲಗುವ ದಿಂಬಿನಡಿ ಈ ವಸ್ತುಗಳನ್ನು ಇಟ್ಟು ಅದೃಷ್ಟ ಬದಲಾಯಿಸಿಕೊಳ್ಳಿ!!!

by Mallika
0 comments

ಆರಾಮದಾಯಕವಾದ ನಿದ್ದೆಯನ್ನು ಪ್ರತಿಯೊಬ್ಬರೂ ಬಯಸುತ್ತಾರೆ. ಸರಿಯಾದ ನಿದ್ದೆ ಇಲ್ಲವಾದರೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಿದ್ದೆ ಹಾಳಾದರೆ ದೈಹಿಕ ಹಾಗೂ ಮಾನಸಿಕ ಆರೋಗ್ಯವು ಹದೆಗೆಡುತ್ತದೆ. ಆದರೆ, ವಿವಿಧ ಕಾರಣಗಳಿಂದ ಸುಖಕರವಾದ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ನೆಮ್ಮದಿಯ ನಿದ್ದೆಗಾಗಿ ಜನರು ಪರದಾಡುತ್ತಾರೆ. ನೀವು ನಿದ್ದೆಯ ಸಮಸ್ಯೆಯನ್ನು ಎದುರಿಸುತ್ತಿದ್ದೀರಾ? ಹಾಗಾದ್ರೆ, ವಾಸ್ತು ಶಾಸ್ತ್ರದ ಕೆಲವು ನಿಯಮಗಳನ್ನು ಪಾಲಿಸಿದ್ರೆ ನೆಮ್ಮದಿಯ ನಿದ್ರೆ ಜೊತೆಗೆ ಅದೃಷ್ಟವು ನಿಮ್ಮ ಪಾಲಿಗೆ ಒಲಿಯುತ್ತದೆ. ಹಾಗದರೆ ಆ ವಸ್ತುಗಳ ಬಗ್ಗೆ ತಿಳಿಯೋಣ ಬನ್ನಿ.

ಚಾಕು:- ನೀವು ನೋಡಿರಬಹುದು. ಸಣ್ಣ ಮಗುವನ್ನು ತೊಟ್ಟಿಲಿನಲ್ಲಿ ಮಲಗಿಸಿದಾಗ ಚಾಕು ಅಥವಾ ಕತ್ತಿಯನ್ನು ಇಡುತ್ತಾರೆ. ಇದರಿಂದ ನಕಾರತ್ಮಕ ಶಕ್ತಿಗಳು ಮಗುವಿನ ಬಳಿ ಸುಳಿಯುವುದಿಲ್ಲ ಎಂಬ ನಂಬಿಕೆಯಿದೆ. ಮಲಗಿದಾಗ ದುಃಸ್ವಪ್ನಗಳು ಬೀಳುತ್ತಿದ್ದರೆ, ಆಘಾತದಿಂದ ಎಚ್ಚರಗೊಂಡಂತೆ ಆದರೆ ನಿಮ್ಮ ದಿಂಬಿನ ಕೆಳಗೆ ಚಾಕು ಇಟ್ಟುಕೊಂಡು ರಾತ್ರಿ ಮಲಗಬಹುದು. ಹೀಗೆ ಮಾಡುವುದರಿಂದ ನಕಾರಾತ್ಮಕತೆ ಶಕ್ತಿ ದೂರವಾಗುತ್ತದೆ. ಇದರೊಂದಿಗೆ ಶನಿ, ರಾಹು, ಕೇತು ದೋಷಗಳಿಂದಲೂ ಪರಿಹಾರ ದೊರೆಯುತ್ತದೆ.

ಮೂಲಂಗಿ:- ಮೂಲಂಗಿ ಬರೀ ತರಕಾರಿಯಲ್ಲ. ಇದರಲ್ಲಿ ಅಡಗಿದೆ ಅದ್ಭುತ ಶಕ್ತಿ. ನಿದ್ದೆಯ ಸಮಸ್ಯೆಯನ್ನು ಓಡಿಸುತ್ತದೆ. ನಿದ್ರೆಯ ಸಮಸ್ಯೆ ತುಂಬಾ ಹೆಚ್ಚಿದ್ದರೆ, ಮೂಲಂಗಿಯಿಂದ ಪರಿಹಾರ ಕಂಡುಕೊಳ್ಳಬಹುದು. ರಾತ್ರಿ ಮಲಗುವಾಗ ಮೂಲಂಗಿಯನ್ನು ನಿಮ್ಮ ದಿಂಬಿನ ಕೆಳಗೆ ಇಟ್ಟು ಮಲಗಬೇಕು. ಬೆಳಗ್ಗೆ ಎದ್ದು ಸ್ನಾನ ಮಾಡಿದ ನಂತರ ಆ ಮೂಲಂಗಿಯನ್ನು ಶಿವಲಿಂಗದ ಮೇಲೆ ಇಡಬೇಕು. ಹೀಗೆ ಮಾಡುವುದರಿಂದ ನಿದ್ರಾಹೀನತೆಯ ಸಮಸ್ಯೆ ಮಾಯವಾಗುವುದಲ್ಲದೇ ನಿಮ್ಮ ರಾಹುದೋಷವೂ ದೂರವಾಗುತ್ತದೆ.

ಗೀತಾ ಅಥವಾ ಸುಂದರಕಾಂಡ:- ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಿರುವ ಪ್ರಕಾರ, ಮಲಗುವಾಗ ದಿಂಬಿನ ಕೆಳಗೆ ಗೀತಾ ಅಥವಾ ಸುಂದರಕಾಂಡವನ್ನು ಇಟ್ಟುಕೊಳ್ಳುವುದರಿಂದ ಮನಸ್ಸು ಶಾಂತವಾಗುತ್ತದೆ. ಹೀಗೆ ಮಾಡುವುದರಿಂದ ಕೆಲಸದಲ್ಲಿ ಕಾರ್ಯಕ್ಷಮತೆಯೂ ಹೆಚ್ಚುತ್ತದೆ.

ತಾಮ್ರದ ಪಾತ್ರೆ:- ವಾಸ್ತು ಶಾಸ್ತ್ರದ ಪ್ರಕಾರ, ನಿದ್ದೆಯ ಸಮಸ್ಯೆಯನ್ನು ಹೋಗಲಾಡಿಸಬೇಕೆಂದರೆ ರಾತ್ರಿ ಹೊತ್ತು ತಾಮ್ರದ ಪಾತ್ರೆಯಲ್ಲಿ ನೀರನ್ನು ತುಂಬಿಸಿ ಮಲಗಬೇಕು. ಈ ರೀತಿ ಮಾಡುವುದರಿಂದ ಸೂರ್ಯನೂ ಬಲಶಾಲಿಯಾಗುತ್ತಾನೆ. ಇದರಿಂದಾಗಿ ನೆಮ್ಮದಿಯ ನಿದ್ರೆ ಪ್ರಾಪ್ತಿಯಾಗುವುದಲ್ಲದೆ, ವೃತ್ತಿಯಲ್ಲಿ ಪ್ರಗತಿಯುಂಟಾಗುತ್ತದೆ.
ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ತಾಮ್ರದಲ್ಲಿ ಶೇಖರಿಸಿಟ್ಟ ನೀರನ್ನು ಮುಂಜಾನೆ ಹೊತ್ತು ಕುಡಿಯುವುದರಿಂದ ಚರ್ಮದ ಸಮಸ್ಯೆಗೆ, ಜೀರ್ಣಕ್ರಿಯೆಗೆ ಹೀಗೆ ಹಲವಾರು ಸಮಸ್ಯೆಗೆ ಉಪಯುಕ್ತವಾಗಿದೆ.

You may also like

Leave a Comment