Home » ಜೈಲಲ್ಲಿರುವ ಖೈದಿಗಳಿಗೂ ಸಂತಸ ತಂದ ಕೇಂದ್ರ ಬಜೆಟ್! ದಂಡ ಮತ್ತು ಜಾಮೀನು ಮೊತ್ತ ಪಾವತಿಸಲು ಸರ್ಕಾರವೇ ಕೊಡಮಾಡುತ್ತೆ ಆರ್ಥಿಕ ಬೆಂಬಲ!!

ಜೈಲಲ್ಲಿರುವ ಖೈದಿಗಳಿಗೂ ಸಂತಸ ತಂದ ಕೇಂದ್ರ ಬಜೆಟ್! ದಂಡ ಮತ್ತು ಜಾಮೀನು ಮೊತ್ತ ಪಾವತಿಸಲು ಸರ್ಕಾರವೇ ಕೊಡಮಾಡುತ್ತೆ ಆರ್ಥಿಕ ಬೆಂಬಲ!!

by ಹೊಸಕನ್ನಡ
0 comments

ಇಂದು ಮಂಡಿಸಲ್ಪಟ್ಟ 2023ರ ಕೇಂದ್ರ ಬಜೆಟ್ ನಲ್ಲಿ ಇನ್ ಕಮ್ ಟ್ಯಾಕ್ಸ್ ನಿಂದ ಹಿಡಿದು, ನೀರಾವರಿ, ಉದ್ಯೋಗ, ಕೃಷಿ ಎಂಬಂತೆ ಹಲವಾರು ಕ್ಷೇತ್ರಗಳಿಗೆ ಭರ್ಜರಿ ಕೊಡುಗೆ ಸಿಕ್ಕಿದೆ. ಅಂತೆಯೇ ಈ ಸಲದ ಬಜೆಟ್, ಜೈಲು ಪಾಲಾಗಿರುವ ಖೈದಿಗಳಿಗೂ ಸಂತೋಷ ತಂದಿದೆ. ಹೌದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಖೈದಿಗಳಿಗೆ ಗುಡ್ ನ್ಯೂಸ್ ಒಂದನ್ನು ಕೊಟ್ಟಿದ್ದಾರೆ.

ಅನೇಕ ವರ್ಷಗಳಿಂದ ಜೈಲಿನಲ್ಲಿದ್ದು, ಬಿಡುಗಡೆ ಹೊಂದಲು ದಂಡ ಹಾಗೂ ಜಾಮೀನು ಮೊತ್ತಗಳನ್ನು ಪಾವತಿಸಲು ಅಸಮರ್ಥರಾಗಿರುವ ಹಲವಾರು ಖೈದಿಗಳಿದ್ದಾರೆ. ಇಂತಹ ಬಡ ಖೈದಿಗಳ ನೆರವಿಗೆ ಮುಂದಾಗಿಯೋ ಸರ್ಕಾರ, ಅವರಿಗೆ ಆರ್ಥಿಕ ಬೆಂಬಲವೊದಗಿಸಲಾಗುವುದು ಎಂದು ಇಂದು ಕೇಂದ್ರ ಬಜೆಟ್‌ ಮಂಡನೆ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು.

ಕಳೆದ ವಾರ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಹೈಕೋರ್ಟುಗಳ ನ್ಯಾಯಮೂರ್ತಿಗಳ ಜಂಟಿ ಸಮ್ಮೇಳನ ನಡೆದಿತ್ತು. ಇದರಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿಯವರು, ಜೈಲುಗಳಲ್ಲಿ ದೀರ್ಘ ಕಾಲದಿಂದ ಉಳಿದಿರುವ ವಿಚಾರಾಣಾಧಿನ ಕೈದಿಗಳ ಬಿಡುಗಡೆಗೆ ಕಾನೂನಿನ ಅನುಸಾರ ಮತ್ತು ಮಾನವೀಯ ನೆಲೆಯಲ್ಲಿ ಆದ್ಯತೆ ನೀಡಬೇಕೆಂದು ಎಂದು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಎಲ್ಲಾ ರೀತಿಯಲ್ಲೂ ಚರ್ಚಿಸಿ ಇಂದು ಈ ಘೋಷಣೆ ಮಾಡಲಾಗಿದೆ.

ಸಮ್ಮೇಳನದಲ್ಲಿ ಮಾತನಾಡಿದ್ದ ಮೋದಿಯವರು ‘ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ಕಾರ್ಯನಿರ್ವಹಿಸುವ ಸಮಿತಿಯೊಂದಿದೆ. ಈ ಸಮಿತಿಯು ಧೀರ್ಘಕಾಲದಿಂದ ಜೈಲಿನಲ್ಲಿ ಇರುವಂತಹ ಖೈದಿಗಳ ಪ್ರಕರಣಗಳನ್ನು ಪರಿಶೀಲಿಸಬಹುದು ಹಾಗೂ ಒಂದು ವೇಳೆ ಸಾಧ್ಯವಿದ್ದಲ್ಲಿ ಖೈದಿಗಳು ಜಾಮೀನಿನ ಮೇಲೆ ಬಿಡುಗಡೆಯಾಗುವಂತೆ ಮಾಡಬಹುದು. ಅದಕ್ಕೆ ಯಾವೆಲ್ಲಾ ಸೂಕ್ತ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದಾಗಿ ಚರ್ಚಿಸಿ ಎಂದು ಪ್ರಧಾನಿ ಹೇಳಿದ್ದರು.

You may also like

Leave a Comment