Home » Keerthy Suresh Marriage : ಬಾಲ್ಯದ ಗೆಳೆಯನ ಜೊತೆ ʼಮಹಾನಟಿʼ ಮದುವೆ

Keerthy Suresh Marriage : ಬಾಲ್ಯದ ಗೆಳೆಯನ ಜೊತೆ ʼಮಹಾನಟಿʼ ಮದುವೆ

0 comments

ಮಲಯಾಳಂ ಬೆಡಗಿ ಕೀರ್ತಿ ಸುರೇಶ್ ತೆಲುಗು ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳ ಪಾಲಿನ ಎವರ್ ಗ್ರೀನ್ ಕ್ಯೂಟ್ ಆಂಡ್ ನ್ಯಾಚುರಲ್ ಲುಕ್ ಮೂಲಕ ಹೆಚ್ಚು ಪ್ರಸಿದ್ಧಿ ಪಡೆದಿದ್ದಾರೆ. ಮಲಯಾಳಂ ʼಗೀತಾಂಜಲಿʼ ಎಂಬ ಚಿತ್ರದ ಮೂಲಕ ನಾಯಕಿಯಾಗಿ ಗ್ರಾಂಡ್ ಎಂಟ್ರಿ ಕೊಟ್ಟು ಮತ್ತೆ ಹಿಟ್ ಲಿಸ್ಟ್ ಸಿನಿಮಾ ಗಳಲ್ಲಿ ನಟಿಸಿ ಟಾಲಿವುಡ್‌ನಲ್ಲಿ ʼನೇನು ಶೈಲಜಾʼ ಸಿನಿಮಾದ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿ ಗೋಲ್ಡನ್ ಗರ್ಲ್‌ ಆಗಿ ಟ್ರೆಂಡ್ ಸೃಷ್ಟಿಸಿದ ಬೆಡಗಿ ಕೀರ್ತಿ ಸುರೇಶ್ ಮದುವೆ ಸುದ್ದಿ ಈಗ ಹೆಚ್ಚು ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ. ನಟಿ ಕೀರ್ತಿ ಸುರೇಶ್ (Keerthy Suresh) ದಳಪತಿ ಅವರ ಜೊತೆಗೆ ಹಸೆಮಣೆ ಏರುವ ಕುರಿತು ಗಾಳಿ ಸುದ್ದಿಗಳು ಎಲ್ಲೆಡೆ ಜೋರಾಗಿ ಹಬ್ಬುತ್ತಿದೆ.

ಈ ಸುದ್ದಿ ಕೇಳಿ ದಳಪತಿ ಹಾಗೂ ಕೀರ್ತಿ ಸುರೇಶ್ ಅಭಿಮಾನಿಗಳು ದಂಗಾಗಿದ್ದರು. ಇದೀಗ, ಕೀರ್ತಿ ಸುರೇಶ್ ತನ್ನ ಬಾಲ್ಯದ ಗೆಳೆಯನ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಕೇರಳದಲ್ಲಿ ರೆಸಾರ್ಟ್ ಅನ್ನು ಒಳಗೊಂಡ ತನ್ನ ಬಾಲ್ಯದ ಗೆಳೆಯನ ಜೊತೆಗೆ ಕೀರ್ತಿ ಸುರೇಶ್ ಸಪ್ತಪದಿ ತುಳಿಯಲಿದ್ದು 10 ವರ್ಷಗಳಿಂದ ರಿಲೇಶನ್‌ಶಿಪ್‌ನಲ್ಲಿರುವ ಬಗ್ಗೆ ವದಂತಿಗಳು ಜೋರಾಗಿ ಸದ್ದು ಮಾಡುತ್ತಿದೆ. ಇಷ್ಟೇ ಸಾಲದು ಎಂಬಂತೆ ಕೀರ್ತಿ ಹಾಗೂ ಬಾಲ್ಯದ ಗೆಳೆಯನ ಮನೆಯವರ ಒಪ್ಪಿಗೆಯ ಬಳಿಕ ವಿವಾಹ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಲಾಗುತ್ತಿತ್ತು. ಆದ್ರೆ, ತಮ್ಮ ಮಗಳ ಮದುವೆಯ ಕುರಿತು ಇದೀಗ ಕೀರ್ತಿ ಸುರೇಶ್, ತಾಯಿ ಮೇನಕಾ Menaka) ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.ಸದ್ಯ ಮಗಳ ಮದುವೆ ವಿಚಾರದ ಬಗ್ಗೆ ಸ್ವತಃ ಮೇನಕಾ ಅವರು ಸ್ಪಷ್ಟನೆ ನೀಡಿ ಊಹಾಪೋಹಗಳಿಗೆ ತೆರೆ ಎಳೆಯಲು ಮುಂದಾಗಿದ್ದಾರೆ.

ಕೀರ್ತಿ ಅವರ ಮದುವೆಯ ಕುರಿತು ಹರಿದಾಡುತ್ತಿರುವ ಸುದ್ದಿಗಳೆಲ್ಲವು ಸತ್ಯಕ್ಕೆ ದೂರವಾದ ಮಾತು. ಈ ವಿಷಯದ ಬಗ್ಗೆ ಹೆಚ್ಚು ವಿವರಣೆ ನೀಡಲು ಇಚ್ಛಿಸುವುದಿಲ್ಲ . ಇವೆಲ್ಲ ಗಾಳಿ ಸುದ್ದಿಗಳು ಎಂದು ಹೇಳಿ ಮೇನಕಾ ಮಗಳ ಮದುವೆ ಕುರಿತ ಸುದ್ದಿಗಳಿಗೆ ಬ್ರೇಕ್ ನೀಡಿದ್ದು, ಈ ಮಾತನ್ನು ಕೇಳಿ ಕೀರ್ತಿ ಸುರೇಶ್ ಅಭಿಮಾನಿಗಳು ರಿಲ್ಯಾಕ್ಸ್ ಆಗಿದ್ದಾರೆ. ಸದ್ಯ ಕೀರ್ತಿ ಸುರೇಶ್ ಪ್ಯಾನ್‌ ಇಂಡಿಯಾ ಸಿನಿಮಾ ʼದಸರಾದಲ್ಲಿ ನಾನಿ ಜೊತೆಗೆ ತೆರೆ ಮೇಲೆ ಮಿಂಚಿದ್ದು, ಇದಲ್ಲದೆ, ಮೆಗಾಸ್ಟಾರ್ ಚಿರಂಜೀವಿ ಜೊತೆ ʼಭೋಲಾ ಶಂಕರ್‌ʼದಲ್ಲಿ ನಟಿಸಿ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ಏನೇ ಆದರೂ ಕೀರ್ತಿ ಸುರೇಶ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೇಳಿ ಶಾಕ್ ಆಗಿದ್ದ ಅಭಿಮಾನಿಗಳು ಮೇನಕಾ ಅವರ ಸ್ಪಷ್ಟನೆ ಕೇಳಿ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದು, ಆದರೂ ಕೀರ್ತಿ ಸುರೇಶ್ ಹಸೆಮಣೆ ಏರುವ ಗುಡ್ ನ್ಯೂಸ್ ಕೊಡೋದು ಯಾವಾಗ ಅನ್ನೋ ಕುರಿತು ಅಭಿಮಾನಿಗಳ ನಡುವೆ ಚರ್ಚೆ ಈಗಲೂ ನಡೆಯುತ್ತಿದೆ.

You may also like

Leave a Comment