Home » SSLC Preparatory Exam 2023 : ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಪ್ರಕಟ!

SSLC Preparatory Exam 2023 : ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಪ್ರಕಟ!

0 comments

ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ ಲಭ್ಯವಾಗಿದೆ. 2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆಯ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದೆ.


2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದ್ದು, ಈ ವೇಳಾಪಟ್ಟಿಯ ಅನುಸಾರ ಫೆಬ್ರವರಿ 23 ರಿಂದ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆಗಳು ನಡೆಯಲಿವೆ. ಫೆಬ್ರವರಿ 23 ರಿಂದ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆಗಳು ಪ್ರಾರಂಭವಾಗಲಿದ್ದು, ಮಾರ್ಚ್ 01, 2023 ರಂದು ಕೊನೆಗೊಳ್ಳಲಿದೆ. ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆಯ ಸಂಪೂರ್ಣ ವೇಳಾಪಟ್ಟಿ ಹೀಗಿದೆ:

ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆಯ ವೇಳಾಪಟ್ಟಿ
23-02-2023 -ಪ್ರಥಮ ಭಾಷೆ- ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು , ಉರ್ದು, ಇಂಗ್ಲಿಷ್, ಇಂಗ್ಲಿಷ್ (NCERT), ಸಂಸ್ಕೃತ.
24-02-2023 – ದ್ವಿತೀಯ ಭಾಷೆ -ಇಂಗ್ಲಿಷ್, ಕನ್ನಡ.
25-02-2023 – ತೃತೀಯ ಭಾಷೆ- ಹಿಂದಿ, ಕನ್ನಡ, ಇಂಗ್ಲಿಷ್, ತುಳು, ಕೊಂಕಣಿ, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ.
26-02-2023 – ಭಾನುವಾರ ರಜೆ.
27-02-2023 – ಗಣಿತ .
28-02-2023 – ವಿಜ್ಞಾನ.
01-02-2023 – ಸಮಾಜ

ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಎಂಬ ವಿಚಾರ ಮುಖ್ಯ ಪಾತ್ರ ವಹಿಸುತ್ತದೆ. ತಮ್ಮ ಭವಿಷ್ಯದ ಮುಂದಿನ ಆಯ್ಕೆಯನ್ನು ಮಾಡಿಕೊಳ್ಳಲು ಪರೀಕ್ಷೆಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಹೀಗಾಗಿ, ಯುದ್ದ ಕಾಲೇ ಶಸ್ತ್ರಾಭ್ಯಾಸ ಎಂಬ ನಿಯಮವನ್ನು ಪಾಲಿಸದೇ ಪರೀಕ್ಷೆಗೆ ಮೊದಲೇ ಪೂರ್ವ ತಯಾರಿ ನಡೆಸಬೇಕಾಗಿರುವುದು ಅವಶ್ಯ. ಈಗಾಗಲೇ ಎಲ್ಲಾ ಶಾಲೆ-ಕಾಲೇಜುಗಳಲ್ಲಿ ಪಠ್ಯಗಳು ಮುಗಿದಿರುವ ಹಿನ್ನೆಲೆ ಓದಲು ಒಳ್ಳೆಯ ಅವಕಾಶ ದೊರೆಯಲಿದ್ದು, ಈ ನಡುವೆ ನಡೆಯುವ ಪೂರ್ವ ಸಿದ್ಧತಾ ಪರೀಕ್ಷೆಗಳಲ್ಲಿ ಅಭ್ಯಾಸ ನಡೆಸಿ ಸಿದ್ಧತೆ ನಡೆಸುವುದು ಉತ್ತಮ.

ವಿದ್ಯಾರ್ಥಿಗಳು ಯಾವ ಕಾರಣಕ್ಕೂ ಈ ಪರೀಕ್ಷೆಗಳನ್ನು ತಪ್ಪಿಸಿಕೊಳ್ಳದಿರುವುದು ಒಳ್ಳೆಯದು. ಮುಖ್ಯ ಪರೀಕ್ಷೆಗೆ ನಡೆಸುವ ಪೂರ್ವ ಸಿದ್ಧತೆಯಾಗಿರುವ ಕಾರಣ ನಿಮ್ಮ ತಪ್ಪುಗಳನ್ನು ಸುಧಾರಿಸಿಕೊಳ್ಳಲು ದೊರೆಯುವ ಉತ್ತಮ ಅವಕಾಶ ಎಂದರೆ ತಪ್ಪಾಗದು. ಶಾಲಾ-ಕಾಲೇಜುಗಳಲ್ಲಿ ನಡೆಸುವ ಪೂರ್ವ ಸಿದ್ಧತಾ ಪರೀಕ್ಷೆ ಜೊತೆಗೆ ಸ್ವತಃ ಮನೆಯಲ್ಲಿ ಅಣಕು ಪರೀಕ್ಷೆಗಳನ್ನು ತಯಾರಿಸಿಕೊಳ್ಳಿ. ಅಣಕು ಪರೀಕ್ಷೆಯನ್ನು ಬರೆದ ಬಳಿಕ ನಿಮ್ಮ ಉತ್ತರಗಳನ್ನು ನೀವೇ ಅವಲೋಕಿಸಿಕೊಳ್ಳಬಹುದು.

You may also like

Leave a Comment