Home » Optical Illussion : ಈ ರಾಶಿ ರಾಶಿ ಆಕ್ಟೋಪಸ್‌ಗಳ ಮಧ್ಯೆ ಒಂದು ಮೀನು ಅಡಗಿದೆ | ಇದೊಂದು ಚಾಲೆಂಜ್‌ ನಿಮಗೆ ಓದುಗರೇ, ಹುಡುಕುವಿರಾ?

Optical Illussion : ಈ ರಾಶಿ ರಾಶಿ ಆಕ್ಟೋಪಸ್‌ಗಳ ಮಧ್ಯೆ ಒಂದು ಮೀನು ಅಡಗಿದೆ | ಇದೊಂದು ಚಾಲೆಂಜ್‌ ನಿಮಗೆ ಓದುಗರೇ, ಹುಡುಕುವಿರಾ?

0 comments

ಆಪ್ಟಿಕಲ್ ಭ್ರಮೆಗಳು ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಇದನ್ನು ಪರಿಹರಿಸುವುದರಿಂದ ಮೆದುಳು ಚುರುಕಾಗುತ್ತದೆ ಮತ್ತು ದೃಷ್ಠಿ ತೀಕ್ಷ್ಣವಾಗುತ್ತದೆ. ನೀವು ಈಗಾಗಲೇ ಹಲವು ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ನೋಡಿರುತ್ತೀರಿ. ಇತ್ತೀಚೆಗೆ ಇದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೆ ಇದೇ ಸೈಟ್ ನಲ್ಲಿ ಇಂತಹ ಹಲವು ಸವಾಲನ್ನು ಪರಿಹರಿಸಿರುತ್ತೀರಿ. ಆದರೆ ಈ ಬಾರಿ ಹೊಸ ಟಾಸ್ಕ್ ನಿಮಗಾಗಿ ಇಲ್ಲಿದೆ. ಅದೇನೆಂದರೆ, ಈ ರಾಶಿ ರಾಶಿ ಆಕ್ಟೋಪಸ್‌ಗಳ ಮಧ್ಯೆ ಒಂದು ಮೀನು ಅಡಗಿದೆ ಅದನ್ನು ಹುಡುಕಬೇಕು, ಹುಡುಕುವಿರಲ್ಲಾ ಓದುಗರೇ!!.

ಇಲ್ಲಿ ನೀಡಿರುವ ಸಮುದ್ರದ ಚಿತ್ರದಲ್ಲಿ ನೂರಾರು ಆಕ್ಟೋಪಸ್​​ಗಳು ಇವೆ. ಆದರೆ ಇವುಗಳ ನಡುವೆಯೇ ಒಂದು ಮೀನು ಅಡಗಿದೆ. ನೀವು ಈ ಅಡಗಿರುವ ಮೀನನ್ನು ಪತ್ತೆ ಹಚ್ಚಬೇಕು. ಅದು ಕೂಡ ತುಂಬಾ ಸಮಯ ತೆಗೆದುಕೊಳ್ಳುವ ಹಾಗಿಲ್ಲ. ಆದರೆ ಈ ಮೀನು ಅಷ್ಟು ಸುಲಭವಾಗಿ ನಿಮ್ಮ ಕಣ್ಣಿಗೆ ಗೋಚರಿಸೋದಿಲ್ಲ. ನಿಮ್ಮ ಮೆದುಳಿಗೆ ಕೆಲಸ ಕೊಡಿ, ಸೂಕ್ಷ್ಮವಾಗಿ ಗಮನಿಸಿ, ನೇರಳೆಬಣ್ಣದ ಈ ಆಕ್ಟೋಪಸ್​​ಗಳಲ್ಲಿ ಅಡಗಿರುವ ಮೀನು ಕೂಡ ನೇರಳೆ ಬಣ್ಣವನ್ನೇ ಹೊಂದಿದೆ. ನೀವು ಈ ಸವಾಲನ್ನು ಪರಿಹರಿಸುತ್ತೀರಾ ಅಲ್ವಾ??

ಎಷ್ಟು ಹುಡುಕಿದರೂ ಮೀನು ಸಿಗಲಿಲ್ಲವೇ? ಎಲ್ಲವೂ ನೇರಳೆಮಯವಾಗಿದೆ ಅಲ್ವಾ?? ಇಲ್ಲಿದೆ ನೋಡಿ ಉತ್ತರ. ಇದು ಹುಡುಕಿ ಹುಡುಕಿ ಸಿಗದೆ ಬೇಸತ್ತವರಿಗೆ ಮಾತ್ರ. ಯಾರಾದರೂ ಈ ಸವಾಲನ್ನು ಪರಿಹರಿಸಿದ್ದರೆ ನಿಮ್ಮ ಕಣ್ಣಿನ ದೃಷ್ಟಿ, ಸಾಮರ್ಥ್ಯಕ್ಕೆ ನೀವೇ ಫುಲ್ ಮಾಕ್ಸ್ ಕೊಟ್ಟು ಬಿಡಿ. ಇನ್ನು ಮೀನು ಸಿಗದೇ ಇದ್ದವರಿಗೆ ಇಲ್ಲಿದೆ ಉತ್ತರ. ಈ ಕೆಳಗಿನ ಚಿತ್ರದಲ್ಲಿ ಉತ್ತರ ನೀಡಲಾಗಿದೆ. ಆದರೆ ನೀವು ಈ ಬಾರಿ ಸವಾಲಿನಲ್ಲಿ ಗೆದ್ದಿಲ್ಲ. ಮುಂದಿನ ಬಾರಿ ಖಂಡಿತ ಗೆಲ್ಲಲೇಬೇಕು.

You may also like

Leave a Comment