Home » ಮಂಗಳೂರು ಜುವೆಲ್ಯರಿ ಸಿಬ್ಬಂದಿ ಹತ್ಯೆ ಪ್ರಕರಣ : ಪೊಲೀಸರಿಂದ ಶಂಕಿತ ಆರೋಪಿಯ ಫೋಟೋ ಬಿಡುಗಡೆ, ಪತ್ತೆಗೆ ಮನವಿ

ಮಂಗಳೂರು ಜುವೆಲ್ಯರಿ ಸಿಬ್ಬಂದಿ ಹತ್ಯೆ ಪ್ರಕರಣ : ಪೊಲೀಸರಿಂದ ಶಂಕಿತ ಆರೋಪಿಯ ಫೋಟೋ ಬಿಡುಗಡೆ, ಪತ್ತೆಗೆ ಮನವಿ

0 comments

ಮಂಗಳೂರಿನ ಹೃದಯಭಾಗವಾದ ಹಂಪನಕಟ್ಟೆಯ ಜ್ಯುವೆಲ್ಲರಿ ಶಾಪೊಂದರಲ್ಲಿ ಹಾಡಹಗಲೇ ವ್ಯಕ್ತಿಯೋರ್ವ ನುಗ್ಗಿ ಅಲ್ಲಿನ ಸಿಬ್ಬಂದಿಯನ್ನು ಕೊಲೆ ಮಾಡಿ, ದರೋಡೆ ಮಾಡಿದ ಪ್ರಕರಣ ನಡೆದಿತ್ತು. ಈಗ ಈ ಪ್ರಕರಣದ ಆರೋಪಿಯ ಚಹರೆ ಪತ್ತೆಯಾಗಿದ್ದು ಸಿಟಿವಿಟಿಯಲ್ಲಿ ದಾಖಲಾದ ಚಹರೆಯ ಆಧಾರದಲ್ಲಿ ಈ ಚಿತ್ರವನ್ನು ಮತ್ತು ವೀಡಿಯೋವನ್ನು ಪೊಲೀಸರು ಸಾರ್ವಜನಿಕಗೊಳಿಸಿದ್ದಾರೆ. ಹಾಗೆನೇ ಈ ಫೋಟೋ ಮತ್ತು ವೀಡಿಯೋ ಆಧರಿಸಿ ಕಂಡು ಬಂದ ಆರೋಪಿಯ ಪತ್ತೆಗೆ ಇಲಾಖೆ ಸಾರ್ವಜನಿಕರಲ್ಲಿ ಕೋರಿದ್ದಾರೆ.

ಅಂದ ಹಾಗೆ ಬಿಡುಗಡೆಯಾದ ಆರೋಪಿಯ ಫೋಟೋ ಹಾಗೂ ವೀಡಿಯೋದಲ್ಲಿ, ಶಂಕಿತ ಆರೋಪಿಯು ಕಪ್ಪು ಬಣ್ಣದ ಜರ್ಕಿನ್, ಜೀನ್ಸ್ ಪ್ಯಾಂಟ್ ಧರಿಸಿ, ಶೂ ಧರಿಸಿದ್ದು, ಹೆಗಲಿನಲ್ಲಿ ಬ್ಯಾಗ್ ಹಾಕಿಕೊಂಡಿದ್ದು ಗುರುತು ಮರೆಮಾಚಲು ಕ್ಯಾಪ್, ಮಾಸ್ಕ್, ಕೂಲಿಂಗ್ ಗ್ಲಾಸ್ ಧರಿಸಿದ್ದಾನೆ. ಈತ ನಗರದ ಬಲ್ಮಠ-ಹಂಪನಕಟ್ಟೆ ರಸ್ತೆಯ ವಿವಿಧ ನಾಲ್ಕು ಸಿಸಿಟಿವಿಗಳಲ್ಲಿ ಈತ ಸಂಚರಿಸುವುದು ಕಂಡು ಬಂದಿದೆ.

ಶಂಕಿತ ಆರೋಪಿಯು ಕಪ್ಪು ಬಣ್ಣದ ಜರ್ಕಿನ್, ಜೀನ್ಸ್ ಪ್ಯಾಂಟ್ ಧರಿಸಿ, ಶೂ ಧರಿಸಿದ್ದು, ಹೆಗಲಿನಲ್ಲಿ ಬ್ಯಾಗ್ ಹಾಕಿಕೊಂಡಿದ್ದು ಗುರುತು ಮರೆಮಾಚಲು ಕ್ಯಾಪ್, ಮಾಸ್ಕ್, ಕೂಲಿಂಗ್ ಗ್ಲಾಸ್ ಧರಿಸಿದ್ದಾನೆ. ನಗರದ ಬಲ್ಮಠ-ಹಂಪನಕಟ್ಟೆ ರಸ್ತೆಯ ವಿವಿಧ ನಾಲ್ಕು ಸಿಸಿಟಿವಿಗಳಲ್ಲಿ ಈತ ಸಂಚರಿಸುವುದು ಪತ್ತೆಯಾಗಿದೆ. ಈತ ಯಾವುದೇ ವಾಹನದಲ್ಲಿ ಬಂದಿರದೇ ನಡೆದುಕೊಂಡು ಬಂದಿರಬಹುದೇ ಎಂಬ ಅನುಮಾನ ವ್ಯಕ್ತವಾಗಿದೆ.

ಈ ವ್ಯಕ್ತಿಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇದ್ದಲ್ಲಿ ಅದನ್ನು ಪೊಲೀಸರಿಗೆ ನೀಡುವಂತೆ ಪೊಲೀಸ್‌ ಇಲಾಖೆ ಕೋರಿದ್ದು ಮಾಹಿತಿದಾರರ ಗೌಪ್ಯತೆ ಕಾಪಾಡಲಾಗುವುದು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಸಾರ್ವಜನಿಕರಿಗೆ ಮಾಹಿತಿ ಇದ್ದಲ್ಲಿ ಸಂಪರ್ಕಿಸಿಬೇಕಾದ ಪೊಲೀಸ್ ಅಧಿಕಾರಿಗಳು: ಪಿ ಎ ಹೆಗಡೆ -ಎಸಿಪಿ ಸಿಸಿಬಿ, ಮಂಗಳೂರು ನಗರ-: 9945054333, ಮಹೇಶ್ ಕುಮಾರ್, ಎಸಿಪಿ ಕೇಂದ್ರ ಉಪವಿಭಾಗ : 9480805320

You may also like

Leave a Comment