90 ರ ದಶಕದ ನಂತರ ಚಿತ್ರರಂಗದಲ್ಲಿ ಸ್ಟಾರ್‌ಗಳಾಗಿದ್ದ ಬಹುತೇಕ ನಟಿಯರು ಸಂಸಾರ ಮತ್ತು ಇತರ ನಾನಾ ಕಾರಣಗಳಿಂದ ಚಿತ್ರರಂಗದ ತೊರೆದಿದ್ದರೆ ಇನ್ನು ಕೆಲವು ನಟಿಯರು ಇಂದಿಗೂ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಅಂದಿನ ಬೇಡಿಕೆಯ ನಟಿಯರಲ್ಲಿ ಭಾನುಪ್ರಿಯಾ ಕೂಡಾ ಒಬ್ಬರು. ಒಂದು ಕಾಲದಲ್ಲಿ ಡಾ. ವಿಷ್ಣುವರ್ಧನ್ ಜೊತೆ ನಾಯಕಿಯಾಗಿ ಮಿಂಚಿದ್ದ ಈ ಸುಂದರ ನಟಿ ಈಗ ಮೆಮೋರಿ ಲಾಸ್‌ನಿಂದ ಚಿತ್ರರಂಗದಿಂದ ದೂರ ಉಳಿದಿದ್ದಾರೇ ಎನ್ನುವ ಶಾಕಿಂಗ್ ನ್ಯೂಸ್ ಬಂದಿದೆ.
ಕನ್ನಡದಲ್ಲಿ ಡಾ. ವಿಷ್ಣುವರ್ಧನ್ ಜೊತೆ ಕದಂಬ, ರವಿಚಂದ್ರನ್ ಜೊತೆ ರಸಿಕ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು ನಟಿ ಭಾನುಪ್ರಿಯಾ. ಯಾವಾಗ ನಾಯಕಿ ಆಗಿ ಬೇಡಿಕೆ ಕಳೆದುಕೊಳ್ಳುತ್ತಿದ್ದಂತೆ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದ ಈ ಬ್ಯೂಟಿ ಈಗ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರಂತೆ. ಹಾಗಂತ ತೆಲುಗು ಒನ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಭಾನುಪ್ರಿಯಾ ಹೇಳಿಕೊಂಡಿದ್ದಾರೆ. ” ನನಗೆ ಇತ್ತೀಚೆಗೆಆರೋಗ್ಯ ಸರಿ ಇಲ್ಲ. ನೆನಪಿನ ಶಕ್ತಿ ಕೂಡಾ ಕಡಿಮೆಯಾಗುತ್ತದೆ. ನಾನು ಕಲಿತ ವಿದ್ಯೆಯನ್ನು ಮರೆಯುತ್ತಿದ್ದೇನೆ. ಅನೇಕ ವಿಷಯಗಳು ನನಗೆ ನೆನಪಿಲ್ಲ. ನನ್ನ ಪತಿ 5 ವರ್ಷಗಳ ಹಿಂದೆ ನಿಧನರಾದರು. ನನಗೆ ಕಳೆದ 2 ವರ್ಷಗಳಿಂದ ಈ ಸಮಸ್ಯೆ ಕಾಡುತ್ತಿದೆ. ಅದಕ್ಕಾಗಿ ಔಷಧ ಕೂಡಾ ತೆಗೆದುಕೊಳ್ಳುತ್ತಿದ್ದೇನೆ.” ಎಂದಿದ್ದಾರೆ ಭಾನುಪ್ರಿಯಾ.
” ನಾನು ಇತ್ತೀಚೆಗೆ ಅಭಿನಯಿಸಿದ್ದ ತಮಿಳು ಚಿತ್ರವೊಂದರಲ್ಲಿ ಆಕ್ಷನ್ ಹೇಳಿದಾಗ ನಾನು ಬ್ಲಾಂಕ್ ಆಗಿದ್ದೆ, ಸಿನಿಮಾಗಳಲ್ಲಿ ನೀಡುವ ಡೈಲಾಗ್‌ಗಳನ್ನು ಮರೆಯುತ್ತಿದ್ದೇನೆ. ಡೈಲಾಗ್ ಮರೆತು ನಟಿಸಲು ಸಾಧ್ಯವಾಗಲಿಲ್ಲ. ನಂತರ ಸುಧಾರಿಸಿಕೊಂಡು ಡೈಲಾಗ್ ಪ್ರಾಕ್ಟೀಸ್ ಮಾಡಿ ಶೂಟಿಂಗ್ ಮುಗಿಸಿದೆ. ನಾನು ಸಿನಿಮಾಗಳಲ್ಲಿ ನಟಿಸುವ ಆಸಕ್ತಿಯನ್ನು ಕೂಡಾ ಕಳೆದುಕೊಳ್ಳುತ್ತಿದ್ದೇನೆ ” – ಭಾನುಪ್ರಿಯಾ ತಮ್ಮ ಆರೋಗ್ಯ ಸಮಸ್ಯೆ ಬಗ್ಗೆ ಚಾನಲ್ ಗೆ ಹೇಳಿಕೊಂಡಿದ್ದಾರೆ.
ಮೊನ್ನೆಯ ಸಂದರ್ಶನದಲ್ಲಿ ಮನ ಬಿಚ್ಚಿ ಮಾತಾಡಿದ್ದಾರೆ. ಭಾನುಪ್ರಿಯ ಶಾಸ್ತ್ರೀಯ ನೃತ್ಯ ಪಟು. ಹಾಗಾಗಿ ಆಕೆಗೆ ಒಂದು ಡ್ಯಾನ್ಸ್ ಸ್ಕೂಲ್ ಆರಂಭಿಸಬೇಕು ಎನ್ನುವುದು ಬಹಳ ದಿನಗಳ ಕನಸು. ಆದರೆ ಈಗ ಆರೋಗ್ಯ ಸಮಸ್ಯೆ ಎಷ್ಟು ಇದೆ ಅಂದ್ರೆ ಆಕೆ ತಾನು ಬಾಲ್ಯದಲ್ಲಿ ಕಲಿತ ಡ್ಯಾನ್ಸ್ ಸ್ಟೆಪ್‌ಗಳನ್ನು ಕೂಡಾ ಮರೆತಿದ್ದಾರಂತೆ. ಆಕೆ ತಮ್ಮ ಪತಿ ಬಗ್ಗೆ ಕೂಡಾ ಭಾನುಪ್ರಿಯಾ ಮಾತನಾಡಿದ್ದಾರೆ. ಪತಿಯಿಂದ ನಾನು ಡಿವೋರ್ಸ್ ಪಡೆದಿದ್ದೇನೆ ಎಂಬುದು ಸುಳ್ಳುಸುದ್ದಿ. ಕೆಲಸದ ಕಾರಣದಿಂದ ಅವರು ಹೈದರಾಬಾದ್‌ನಲ್ಲಿ ವಾಸಿಸುತ್ತಿದ್ದರು. ನಾನು ಚೆನ್ನೈನಲ್ಲಿದ್ದೆ. ಅವಕಾಶ ಸಿಕ್ಕಾಗಲೆಲ್ಲ ಇಲ್ಲಿಗೆ ಬಂದು ನಟಿಸುತ್ತಿದ್ದೆ. ನಮ್ಮಿಬ್ಬರ ನಡುವೆ ಉತ್ತಮ ಬಾಂಧವ್ಯ ಇತ್ತು ಎಂದು ಭಾನುಪ್ರಿಯಾ ವಿವರಿಸಿದ್ದಾರೆ. 1998ರಲ್ಲಿ ಭಾನುಪ್ರಿಯಾ ಆದರ್ಶ್ ಕೌಶಲ್ ಎಂಬುವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಒಬ್ಬರು ಪುತ್ರಿ ಇದ್ದಾರೆ. 2018ರಲ್ಲಿ ಆದರ್ಶ್ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಭಾನುಪ್ರಿಯಾ ಆಂಧ್ರಪ್ರದೇಶದ ರಾಜಮುಂಡ್ರಿಯವರು. ತಮಿಳು ಚಿತ್ರದ ಮೂಲಕ 1983ರಲ್ಲಿ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ತೆಲುಗು, ತಮಿಳು, ಕನ್ನಡ, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ನಟಿಸಿದ್ದಾರೆ. ತಮ್ಮ ಪುತ್ರಿ ಬಗ್ಗೆ ಕೂಡಾ ಭಾನುಪ್ರಿಯಾ ಹೇಳಿಕೊಂಡಿದ್ದಾರೆ. ಮಗಳು ಅಭಿನಯಗೆ 27 ವರ್ಷ. ಲಂಡನ್‌ನ ಲೌಬರೋ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಳೆ. ರಜೆಗೆ ಇಲ್ಲಿ ಬಂದು ಹೋಗುತ್ತಾಳೆ ಎಂದಿದ್ದಾರೆ. ಮಗಳು ಸಿನಿಮಾವನ್ನು ವೀಕ್ಷಿಸುತ್ತಾಳೆ. ಆದರೆ ಆಕೆಗೆ ಸಿನಿಮಾಗಳಲ್ಲಿ ಆಸಕ್ತಿ ಇಲ್ಲ ಎಂದು ಭಾನುಪ್ರಿಯಾ ಹೇಳಿದ್ದಾರೆ.
ಭಾನುಪ್ರಿಯಾ ಅವರ ಸಂದರ್ಶನ ನೋಡಿದವರು ಬೇಸರ ವ್ಯಕ್ತಪಡಿಸಿದ್ದಾರೆ. ಒಂದು ಕಾಲದಲ್ಲಿ ತಮ್ಮ ಚೆಲುವು ಹಾಗೂ ನಟನೆಯಿಂದಲೇ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದ ಈ ಚೆಲುವೆ ಈಗ ಮೊಮೋರಿ ಲಾಸ್‌ನಿಂದ ಬಳಲುತ್ತಿರುವ ವಿಚಾರ ಕೇಳಿ ಆದಷ್ಟು ಬೇಗ ನೀವು ಮೊದಲಿನಂತಾಗಿ ಸಿನಿಮಾಗಳಲ್ಲಿ ನಟಿಸಿ ಎಂದು ಹಾರೈಸುತ್ತಿದ್ದಾರೆ.
