ರೈತರೇ ಗಮನಿಸಿ, ನಿಮಗೊಂದು ಸುವರ್ಣ ಅವಕಾಶ ಎದುರು ನೋಡುತ್ತಿದೆ. ರೈತರಿಗೆ ಅದ್ಭುತ ಕೊಡುಗೆ ಲಭ್ಯವಿದ್ದು ಉಚಿತವಾಗಿ ಟ್ರ್ಯಾಕ್ಟರ್ ಗೆಲ್ಲುವ ಬಂಪರ್ ಅವಕಾಶ. ಅಷ್ಟೆ ಅಲ್ಲದೇ, ನೀವು ಉಚಿತ ಚಿನ್ನವನ್ನು ಪಡೆಯಬಹುದು.ಅರೇ ಇದು ಹೇಗೆ ಅಂತೀರಾ?? ರೈತರೇ ನಿಮ್ಮ ಬುದ್ಧಿವಂತಿಕೆಗೆ ಸವಾಲು ಎಸೆಯುವ ಅವಕಾಶವೊಂದು ನಿಮಗಾಗಿ ಕಾದಿದೆ.
ಪ್ರಮುಖ ಟ್ರಾಕ್ಟರ್ ಉತ್ಪಾದನಾ ಕಂಪನಿ ಮಾಸ್ಸೆ ಫರ್ಗುಸನ್ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದಲ್ಲಿ ನಿಮಗೆ ಉಚಿತವಾಗಿ ಟ್ರ್ಯಾಕ್ಟರ್ ಪಡೆಯುವ ಸುವರ್ಣ ಅವಕಾಶ. ಇದಲ್ಲದೇ 8 ಗ್ರಾಂ ಚಿನ್ನವನ್ನು ಉಚಿತವಾಗಿ ಪಡೆಯುವ ಜೊತೆಗೆ ಇನ್ನಿತರ ಬಹುಮಾನ ಪಡೆಯುವ ಬಂಪರ್ ಕೊಡುಗೆ ಲಭ್ಯವಿದೆ.
ಕಂಪನಿ MF ಡೈನಾಟ್ರಾಕ್ ಈ ಸ್ಪರ್ಧೆಯನ್ನು ಏರ್ಪಡಿಸಿದ್ದು, ಮಾಸ್ಸೆ ಫರ್ಗುಸನ್ ಟ್ರಾಕ್ಟರ್ ಬೇರೆ ಏನು ಮಾಡಬಹುದು ಎಂಬ ವಿಷಯದ ಕುರಿತಾಗಿ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಮುಕ್ತ ಅವಕಾಶ. ಒಂದು ವೇಳೆ, ನಿಮ್ಮ ಅನಿಸಿಕೆ ಅಭಿಪ್ರಾಯಗಳು ವಿಶಿಷ್ಟವಾಗಿದ್ದು ಕ್ರಿಯಾತ್ಮಕ ವಾಗಿದ್ದು ಪ್ರಯೋಜನಕಾರಿ ಎಂದು ಕಂಪೆನಿ ಬಯಸಿದರೆ ನೀವು ಖಚಿತ ಬಹುಮಾನ ಪಡೆಯಬಹುದು. ಇಲ್ಲಿ ನೀವು ಗಮನಿಸಬೇಕಾದ ಸಂಗತಿ ಏನಪ್ಪಾ ಅಂದರೆ, ನೀವು ಕಳುಹಿಸುವ ಸಲಹೆಗಳು ಕ್ರಮಬದ್ಧವಾಗಿರಬೇಕಾಗುತ್ತದೆ. ಸಣ್ಣ ಇಲ್ಲವೇ ದೊಡ್ಡ ವ್ಯವಹಾರಗಳಿಗೆ ಸಂಬಂಧಪಟ್ಟಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಕೃಷಿ ಕ್ಷೇತ್ರಕ್ಕೆ ಹೆಚ್ಚು ನೆರವಾಗುವ ಜೊತೆಗೆ ಉತ್ಪಾದಕತೆಯನ್ನು ಹೆಚ್ಚಿಸುವ ಉತ್ತಮ ಆದಾಯ ತರಲು ನೆರವಾಗುವಂತೆ ಇರಬೇಕು.
ಈ ಸ್ಪರ್ಧೆಯು ಸೀಮಿತ ಅವಧಿಗೆ ಮಾತ್ರ ಇರಲಿದ್ದು, ಹೀಗಾಗಿ, ನೀವು ಕೂಡ ಈ ಸ್ಪರ್ಧೆಯಲ್ಲಿ ಭಾಗವಹಿಸಬೇಕಾದಲ್ಲಿ ಕೂಡಲೇ ಭಾಗವಹಿಸಿ ನಿಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಬಹುದು. ನಿಮ್ಮ ಆಲೋಚನೆ , ಸಲಹೆಗಳನ್ನು ನೀವು ವೀಡಿಯೊ ಇಲ್ಲವೇ ಡಾಕ್ಯುಮೆಂಟ್ ರೂಪದಲ್ಲಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ವಿಜೇತರಿಗೆ ಉಚಿತ ಟ್ರ್ಯಾಕ್ಟರ್ ಪಡೆಯುವ ಬೊಂಬಾಟ್ ಅವಕಾಶ. ಇದರ ದರ ಬರೋಬ್ಬರಿ 7ಲಕ್ಷ. ಯಾರಿಗುಂಟು ಯಾರಿಗಿಲ್ಲ ಅನ್ನೋ ಹಾಗೇ ಈ ಅವಕಾಶ ಮಿಸ್ ಮಾಡ್ಕೋಬೇಡಿ!!!! ನಿಮ್ಮ ಅನುಭವ , ಬುದ್ದಿವಂತಿಕೆ ಬಳಸಿ ಬಹುಮಾನ ನಿಮ್ಮದಾಗಿಸಿಕೊಳ್ಳಿ.
ಪ್ರಥಮ ಬಹುಮಾನದ ಅಡಿಯಲ್ಲಿ ಟ್ರ್ಯಾಕ್ಟರ್ ಪಡೆಯಬಹುದು. ಸ್ಪರ್ಧೆಯಲ್ಲಿ ಭಾಗವಹಿಸುವ ಮೊದಲ 100 ಮಾನ್ಯ ನಮೂದುಗಳಿಗೆ ವಿಶೇಷ ಆರಂಭಿಕ ಬಹುಮಾನಗಳು ಇರುತ್ತವೆ ಎಂಬುದನ್ನು ಗಮನಿಸಬೇಕು. ನೀವು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸಿದರೆ, ಮೊದಲು ಮಾಸ್ಸೆ ಫರ್ಗುಸನ್ ಇಂಡಿಯಾ ವೆಬ್‌ಸೈಟ್‌ಗೆ ಭೇಟಿ ನೀಡಿ. ಅಲ್ಲಿ ನೀವು ಸ್ಪರ್ಧೆಯ ಬಗ್ಗೆ ಬ್ಯಾನರ್ ಅನ್ನು ನೋಡಬಹುದು. ಇಲ್ಲಿ ನೀವು ಕೆಲ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ನಂತರ ನಿಮ್ಮ ವಿವರಗಳನ್ನು ಒದಗಿಸಿದ ಬಳಿಕ ನೋಂದಾಯಿಸಲು ಕ್ಲಿಕ್ ಮಾಡಿಕೊಳ್ಳಬೇಕು.
ಇದರಲ್ಲಿ ಭಾಗವಹಿಸಿ ವಿಜೇತರಾದವರಿಗೆ ಸಿಗುವ ಕೊಡುಗೆ ಬಗ್ಗೆ ನಿಮಗೆ ಗೊತ್ತಾಗಿದೆ. ಇನ್ನೂ ಎರಡನೇ ವಿಜೇತರಿಗೆ 8 ಗ್ರಾಂ ಚಿನ್ನದ ನಾಣ್ಯ ಸಿಗಲಿದ್ದು, ಮೂರನೇ ವಿಜೇತರಿಗೆ 8 ಗ್ರಾಂ ಚಿನ್ನ ಲಭ್ಯವಾಗಲಿದೆ. ಇಷ್ಟೇ ಅಲ್ಲ ಕಣ್ರೀ!! ಟಾಪ್ 20 ಫೈನಲಿಸ್ಟ್‌ಗಳಿಗೆ ರೂ. 5 ಸಾವಿರ ಮೌಲ್ಯದ ಗಿಫ್ಟ್ ಹ್ಯಾಂಪರ್ ದೊರೆಯಲಿದ್ದು, ಮೂರು ಅತ್ಯುತ್ತಮ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ರೂ.2 ಸಾವಿರ ಗಿಫ್ಟ್ ವೋಚರ್ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಈ ಸ್ಪರ್ಧೆಯಲ್ಲಿ ರೈತರು, ಉದ್ಯಮಿಗಳು, ಸ್ಟಾರ್ಟಪ್‌ಗಳು ಯಾರು ಬೇಕಾದರೂ ಭಾಗವಹಿಸಬಹುದು. ಮತ್ತೇಕೆ ತಡ!! ಮಿಸ್ ಮಾಡದೇ ನೀವು ಪಾಲ್ಗೊಂಡು ಬಹುಮಾನ ನಿಮ್ಮದಾಗಿಸಿಕೊಳ್ಳಿ.
