Home » ಐಫೋನ್‌ 14 ಮತ್ತು ಐಫೋನ್‌ 14 ಪ್ಲಸ್‌ ಭರ್ಜರಿ ರಿಯಾಯಿತಿ | ಪ್ರೇಮಿಗಳ ದಿನದಂದು ಗಿಫ್ಟ್‌ ಕೊಡೋಕೆ ಬೆಸ್ಟ್‌, ಈ ಆಫರ್‌ ಮಿಸ್‌ಮಾಡ್ಬೇಡಿ !!

ಐಫೋನ್‌ 14 ಮತ್ತು ಐಫೋನ್‌ 14 ಪ್ಲಸ್‌ ಭರ್ಜರಿ ರಿಯಾಯಿತಿ | ಪ್ರೇಮಿಗಳ ದಿನದಂದು ಗಿಫ್ಟ್‌ ಕೊಡೋಕೆ ಬೆಸ್ಟ್‌, ಈ ಆಫರ್‌ ಮಿಸ್‌ಮಾಡ್ಬೇಡಿ !!

0 comments

ಆಪಲ್‌ ಸಂಸ್ಥೆಯ ಐಫೋನ್‌ಗಳು ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿವೆ. ಎಲ್ಲರೂ ಅದರ ಖರೀದಿಗೆ ಮುಗಿಬೀಳುತ್ತಿದ್ದಾರೆ. ಆದರೆ ಇದರ ಬೆಲೆ ಕೈಗೆಟುಕದಷ್ಟು ಎತ್ತರದಲ್ಲಿದೆ. ಜನ ಸಾಮಾನ್ಯರಂತೂ ಇದನ್ನು ಕೊಳ್ಳುವ ಕನಸು ಕಾಣಬೇಕೇ ಹೊರತು ಖರೀದಿಸಲು ಸಾಧ್ಯವಾಗೋದಿಲ್ಲ, ಅಷ್ಟು ಬೆಲೆ ಇದೆ. ಆದರೆ ಇದೀಗ ಈ ಐಫೋನ್ ಮೇಲೆ ಭರ್ಜರಿ ಆಫರ್ ನೀಡಿದ್ದು, ಇದರಿಂದ ಜನಸಾಮಾನ್ಯರಿಗೆ ಕೈಗೆಟುಕುವ ಬೆಲೆಯಲ್ಲಿ ಈ ಫೋನ್ ಲಭ್ಯವಾಗಲಿದೆ.

ಆಪಲ್‌ ಉತ್ಪನ್ನಗಳ ಪ್ರಮುಖ ಮಾರಾಟಗಾರ ಎನಿಸಿರುವ ಇಮ್ಯಾಜಿನ್‌ (Imagine) ಸ್ಟೋರ್‌ ಪ್ರೇಮಿಗಳ ದಿನದಂದು (feb.14) ಜನಪ್ರಿಯ ಐಫೋನ್‌ 14 ಮತ್ತು ಐಫೋನ್‌ 14 ಪ್ಲಸ್‌ (iPhone 14 and iPhone 14 Plus) ಮೇಲೆ ಭರ್ಜರಿ ರಿಯಾಯಿತಿ ನೀಡುತ್ತಿದೆ. ಐಫೋನ್‌ 14 ಸ್ಮಾರ್ಟ್ ಫೋನ್ ಗೆ 6,000ರೂ ಮತ್ತು ಐಫೋನ್‌ 14 ಪ್ಲಸ್‌ ಸ್ಮಾರ್ಟ್ ಫೋನ್ 7,000ರೂ. ಗಳ ರಿಯಾಯಿತಿ ತಿಳಿಸಿದೆ. ಇನ್ನು ಹೆಚ್‌ಡಿಎಫ್‌ಸಿ ಬ್ಯಾಂಕ್‌ ಮೂಲಕ ಖರೀದಿಸಿದರೆ, 4,000ರೂ. ಕ್ಯಾಶ್‌ಬ್ಯಾಕ್‌ ದೊರೆಯುತ್ತದೆ. ಈ ಐಫೋನ್‌ 14 ಸರಣಿಯ ಫೀಚರ್ಸ್ ಹೇಗಿದೆ ? ನೋಡೋಣ.

ಐಫೋನ್ 14 ಸ್ಮಾರ್ಟ್ ಫೋನ್ ಫೀಚರ್ಸ್‌ :

ಐಫೋನ್ 14 ಸ್ಮಾರ್ಟ್ ಫೋನ್ 6.1 ಇಂಚಿನ FHD+ ಡಿಸ್‌ಪ್ಲೇ ಹೊಂದಿದೆ. 1200nits ಬ್ರೈಟ್ನಸ್‌ ಬೆಂಬಲದೊಂದಿಗೆ ಈ ಫೋನ್ ಡ್ಯುಯಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದೆ‌. ಮುಖ್ಯ ಕ್ಯಾಮೆರಾ 12 ಮೆಗಾ ಪಿಕ್ಸಲ್‌ ಸೆನ್ಸಾರ್‌ ಹಾಗೂ 12 ಮೆಗಾ ಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಐಫೋನ್ 14 ಸ್ಮಾರ್ಟ್ ಫೋನ್ 128GB, 256GB ಮತ್ತು 512GB ಸ್ಟೋರೇಜ್‌ ಆಯ್ಕೆಗಳನ್ನು ಪಡೆದಿದೆ. ಅಲ್ಲದೆ, ಈ ಸ್ಮಾರ್ಟ್ ಫೋನ್ 5G ಕನೆಕ್ಟಿವಿಟಿ ಸೌಲಭ್ಯ ಪಡೆದಿದ್ದು, ಇದು ಇ-ಸಿಮ್ ಆಯ್ಕೆಯನ್ನು ಹೊಂದಿದೆ.

ಐಫೋನ್ 14 ಪ್ಲಸ್‌ ಸ್ಮಾರ್ಟ್ ಫೋನ್ ಫೀಚರ್ಸ್‌ :

ಈ ಸ್ಮಾರ್ಟ್ ಫೋನ್ 6.7 ಇಂಚಿನ OLED ಡಿಸ್‌ಪ್ಲೇ ಹೊಂದಿದ್ದು, 1200nits ಬ್ರೈಟ್ನಸ್‌ ಬೆಂಬಲದ ಜೊತೆಗೆ ಡ್ಯುಯಲ್ ಕ್ಯಾಮೆರಾ ಸೆಟಪ್ ಇದೆ. ಈ ಸ್ಮಾರ್ಟ್ ಫೋನ್ ನ ಮುಖ್ಯ ಕ್ಯಾಮೆರಾ 12 ಮೆಗಾ ಪಿಕ್ಸಲ್‌ ಸೆನ್ಸಾರ್‌ ಹಾಗೂ 12 ಮೆಗಾ ಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಸ್ಟೋರೇಜ್ ಸಾಮರ್ಥ್ಯ, 128GB, 256GB ಮತ್ತು 512GB ಆಯ್ಕೆಗಳೊಂದಿಗೆ ಲಭ್ಯವಾಗಲಿದೆ. ಐಫೋನ್‌ 14 ಸ್ಮಾರ್ಟ್ ಫೋನ್ ಗೆ ಹೋಲಿಸಿದರೆ, ಈ ಫೋನ್ ದೀರ್ಘ ಬ್ಯಾಟರಿ ಸಾಮರ್ಥ್ಯವನ್ನು ಪಡೆದಿದೆ. ಹಾಗೇ 5G ಕನೆಕ್ಟಿವಿಟಿ ಸೌಲಭ್ಯ ಪಡೆದಿದ್ದು, ಇ-ಸಿಮ್ ಬೆಂಬಲ ಹೊಂದಿದೆ.

ಪ್ರೇಮಿಗಳು ದಿನದಂದೇ ಈ ಎರಡೂ ಐಫೋನ್‌ 14 ಮತ್ತು ಐಫೋನ್‌ 14 ಪ್ಲಸ್‌ ಮೇಲೆ ಭರ್ಜರಿ ರಿಯಾಯಿತಿ ಲಭ್ಯವಿದ್ದು, ಅಂದು ತಮ್ಮ ಪ್ರೀತಿ ಪಾತ್ರರಿಗೆ ಗಿಫ್ಟ್‌ ಕೊಡೋಕೆ ಬೆಸ್ಟ್‌ ಎಂದೇ ಹೇಳಬಹುದು. ಇಂತಹ ಅದ್ಭುತ ಆಫರ್‌ ಮಿಸ್‌ಮಾಡ್ಬೇಡಿ. ಐಫೋನ್ ಖರೀದಿದಾರರಿಗೆ ಉತ್ತಮ ಅವಕಾಶ.

You may also like

Leave a Comment