Home » ಸ್ಯಾಂಡಲ್‌ವುಡ್‌ ನಟಿ ಅಭಿನಯಾಗೆ ಜಾಮೀನು ಮಂಜೂರು | ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ತಾತ್ಕಾಲಿಕ ರಿಲೀಫ್‌ ಪಡೆದ ನಟಿ

ಸ್ಯಾಂಡಲ್‌ವುಡ್‌ ನಟಿ ಅಭಿನಯಾಗೆ ಜಾಮೀನು ಮಂಜೂರು | ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ತಾತ್ಕಾಲಿಕ ರಿಲೀಫ್‌ ಪಡೆದ ನಟಿ

by Mallika
0 comments

ಸ್ಯಾಂಡಲ್‌ವುಡ್‌ ನಟಿ ಅಭಿನಯ ತಮ್ಮ ಅತ್ತಿಗೆಗೆ ವರದಕ್ಷಿಣೆ ಕಿರುಕುಳದಲ್ಲಿ ಜೈಲು ಶಿಕ್ಷೆಯನ್ನು ಕೋರ್ಟ್‌ ನೀಡಿತ್ತು. ಆದರೆ ಅಭಿನಯ ಅವರು ಪೊಲೀಸರ ಕೈಗೆ ದೊರಕದೆ ಪರಾರಿಯಾಗಿದ್ದರು ಎಂದು ವರದಿಯಾಗಿತ್ತು. ಹೀಗಾಗಿ ಪೊಲೀಸರು ಲುಕ್‌ಔಟ್‌ ನೋಟಿಸ್‌ ಕೂಡಾ ಹೊರಡಿಸಿದ್ದರು. ಹಾಗೂ ಸಾರ್ವಜನಿಕರಲ್ಲಿ ಎಲ್ಲಾದರು ಕಂಡರೆ ತಿಳಿಸುವಂತೆ ಕೂಡಾ ಕೇಳಲಾಗಿತ್ತು. ಈಗ ನಟಿ ಅಭಿನಯ ಅವರಿಗೆ ತಾತ್ಕಾಲಿಕ ರಿಲೀಫ್‌ ದೊರಕಿದೆ. ಹೌದು, ಸುಪ್ರೀಂ ಕೋರ್ಟ್‌ನಲ್ಲಿ ಅವರಿಗೆ ಷರತ್ತುಬದ್ಧ ಜಾಮೀನು ದೊರಕಿದೆ. ಇವರ ಜೊತೆಗೆ ಅಭಿನಯ ಅವರ ಅಮ್ಮ ಜಯಮ್ಮ ಮತ್ತು ಸಹೋದರ ಚೆಲುವರಾಜು ಅವರಿಗೆ ಕೂಡಾ ಜಾಮೀನು ದೊರಕಿದೆ.

ನಟಿ ಅಭಿನಯ ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ಪ್ರಕಟವಾಗಿತ್ತು. ಈ ತೀರ್ಪನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದು, ಅವರಿಗೆ ಜಾಮೀನು ದೊರಕಿದೆ.

ಕೌಟುಂಬಿಕ ದೌರ್ಜನ್ಯದ ಹಿನ್ನೆಲೆಯಲ್ಲಿ ತಾಯಿ ಹಾಗೂ ಸಹೋದರನಿಗೆ ಹಾಗೂ ಅಭಿನಯ ಅವರಿಗೆ ಹೈಕೋರ್ಟ್‌ ಜೈಲು ಶಿಕ್ಷೆ ನೀಡಿತ್ತು. ಪೊಲೀಸರು ಅವರನ್ನೆಲ್ಲ ಬಂಧಿಸಿ ಕೋರ್ಟ್‌ಗೆ ಹಾಜರು ಪಡಿಸಬೇಕಿತ್ತು. ಆದರೆ ಇವರೆಲ್ಲ ಕಾಣೆಯಾಗಿದ್ದ ಕಾರಣ, ಲುಕ್‌ಔಟ್‌ ನೋಟಿಸ್‌ ಜಾರಿ ಮಾಡಲಾಗಿತ್ತು. ಪೊಲೀಸರು ಕರಪತ್ರ/ ಪೋಸ್ಟರ್‌ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು. ಆದರೆ ಇದರ ನಡುವೆಯೇ ಅಭಿನಯ ಅವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದು, ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ.

You may also like

Leave a Comment