Home » ಧರ್ಮಸ್ಥಳ : ಅಪರಿಚಿತ ವೃದ್ಧೆ ಮೃತ | ಗುರುತು ಪತ್ತೆಗೆ ವಾರೀಸುದಾರರಿಗೆ ಮನವಿ

ಧರ್ಮಸ್ಥಳ : ಅಪರಿಚಿತ ವೃದ್ಧೆ ಮೃತ | ಗುರುತು ಪತ್ತೆಗೆ ವಾರೀಸುದಾರರಿಗೆ ಮನವಿ

0 comments

ಹಲವು ದಿನಗಳ ಹಿಂದೆ ಧರ್ಮಸ್ಥಳ ದ್ವಾರದ ಬಳಿ ವೃದ್ಧೆಯೊಬ್ಬರು ಬಿದ್ದುಕೊಂಡಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯನ್ನು ಸ್ಥಳಿಯರು ಮತ್ತು ಪೋಲೀಸರು ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ವೃದ್ಧೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮೃತರನ್ನು ಸಣ್ಣಮ್ಮ (70) ಎಂದು ಗುರುತಿಸಲಾಗಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ ಈಕೆಯನ್ನು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಸದ್ಯ ಚಿಕಿತ್ಸೆ ಫಲಿಸದೆ ಮಹಿಳೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಸನ್ನಮ್ಮ ಮೂಲತಃ ಚಿಕ್ಕಮಗಳೂರಿನವರು. ಗಂಡ ಬೆಳ್ಳಯ್ಯ ಎಂಬವರಾಗಿದ್ದು, ಈಕೆ ಹಲವು ದಿನಗಳ ಹಿಂದೆ ಧರ್ಮಸ್ಥಳ ದ್ವಾರದ ಬಳಿ ಮಲಗಿಕೊಂಡಿದ್ದರು. ಅಲ್ಲೇ ದಿನವಿಡೀ ಇರುತ್ತಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧೆಯನ್ನು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಆಂಬುಲೆನ್ಸ್ ಮೂಲಕ ಕರೆದೊಯ್ದು, ದಾಖಲಿಸಲಾಗಿತ್ತು.

ಈಕೆ ಫೆ.2 ರಂದು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದು, ಸಣ್ಣಮ್ಮ ಅವರಿಗೆ ಸಂಬಂಧಪಟ್ಟವರು ಅಥವಾ ಈ ವೃದ್ಧೆಯ ಬಗ್ಗೆ ಯಾರಿಗಾದರೂ ಮಾಹಿತಿ ಪತ್ತೆಯಾದಲ್ಲಿ ಧರ್ಮಸ್ಥಳ ಠಾಣೆಗೆ
ಮಾಹಿತಿ ನೀಡುವಂತೆ ತಿಳಿಸಲಾಗಿದೆ.

You may also like

Leave a Comment