Home » Viral Video : ಮದುವೆ ದಿನ ಊಟ ಮಾಡುವಾಗ ವಧುವಿನ ವಿಚಿತ್ರ ನಡೆ, ಪೇಚಿಗೆ ಸಿಲುಕಿದ ವರ!

Viral Video : ಮದುವೆ ದಿನ ಊಟ ಮಾಡುವಾಗ ವಧುವಿನ ವಿಚಿತ್ರ ನಡೆ, ಪೇಚಿಗೆ ಸಿಲುಕಿದ ವರ!

0 comments

ಮದುವೆ ಯಾವ ಕ್ಷಣದಲ್ಲಿ ಯಾವ ಕಾರಣಕ್ಕೆ ನಿಲ್ಲಬಹುದು ಎಂಬುದು ಊಹಿಸಲು ಸಹ ಸಾಧ್ಯ ಇಲ್ಲ. ಅದೇ ರೀತಿ ಇಲ್ಲೊಂದು ಮದುವೆಯಲ್ಲಿ ವಿಚಿತ್ರ ಸಂಗತಿ ನಡೆದಿದೆ. ಮದುವೆಗೆ ಸಂಬಂಧಿಸಿದ ಹಲವು ರೀತಿಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುದನ್ನು ಕೇಳಿದ್ದೇವೆ ಮತ್ತು ನೋಡಿರುತ್ತೇವೆ. ಇದೀಗ ಮದುವೆಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸದ್ಯ ಮದುವೆ ಅದ್ದೂರಿಯಾಗಿ ನಡೆದು ನಂತರ ವಧು-ವರರು ಊಟದ ಮೇಜಿನ ಬಳಿ ವಿಧಿವಿಧಾನಗಳನ್ನು ಪೂರೈಸಿ ಕುಳಿತುಕೊಂಡಿದ್ದಾರೆ. ವರ, ಆಕೆ ತನ್ನ ಕೈಯಿಂದಲೇ ಮೊದಲ ತುತ್ತು ತಿನ್ನಿಸಲಿದ್ದಾಳೆ ಎಂದು ಕಾಯುತ್ತಿದ್ದಾನೆ. ಛಾಯಾಗ್ರಾಹಕರು ಈ ಸುಂದರ ಕ್ಷಣವನ್ನು ಸೆರೆಹಿಡಿಯಲೆಂದು ಕಾದು ಕುಳಿತಿದ್ದಾರೆ. ವರನು ತುಂಬಾ ಸಂತೋಷದಿಂದ ಕಾಣುತ್ತಿದ್ದಾನೆ. ಇದೇ ವೇಳೆ ವರನಿಗೆ ವಧು ಕೈ ತುತ್ತು ತಿನ್ನಿಸುತ್ತಿದ್ದಾಳೆ. ಆದರೆ ಮುಂದೆ ನಡೆದ ಘಟನೆ ನೆನದರೆ ನೋವಾಗುತ್ತದೆ. ಕೈ ತುತ್ತು ನೀಡಿದ ಬಳಿಕ ಆಕೆ ವರನ ಮೇಲೆ ಅಸಡ್ಡೆ ತೋರುತ್ತಾಳೆ.

ವರನು ವಧುವಿನ ಈ ಕೆಲಸದಿಂದ ಸಂಪೂರ್ಣವಾಗಿ ಆಘಾತಕ್ಕೊಳಗಾಗುತ್ತಾನೆ. ನೋವಿನ ಹೃದಯದಿಂದ ಕ್ಯಾಮರಾಮನ್ ಅನ್ನು ನೋಡಲಾರಂಭಿಸುತ್ತಾನೆ. ಒಟ್ಟಿನಲ್ಲಿ ಈ ಮದುವೆಯಲ್ಲಿ ವಧು ಸಂತೋಷವಾಗಿಲ್ಲ ಎಂದು ಭಾವಿಸಬಹುದು.

ಈ ವೀಡಿಯೊವನ್ನು memecentral.teb ಹೆಸರಿನ Instagram ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ.ಸದ್ಯ ಈ ವಿಡಿಯೋ ನೋಡಿದಾಗ ಆಶ್ಚರ್ಯ ಆಗುವುದು ಖಂಡಿತ. ಮದುವೆ ಅನ್ನೋದು ಒಂದು ಕೆಲವೊಮ್ಮೆ ವಿಚಿತ್ರ ಘಟನೆಗಳಿಂದ ಅಂತ್ಯಗೊಳ್ಳುತ್ತವೆ ಎನ್ನುವುದು ನಾವು ಇಲ್ಲಿ ನೋಡಬಹುದು.

You may also like

Leave a Comment