Home » ವೀಳ್ಯದೆಲೆಗೆ ಸುಣ್ಣವೆಂದು ಇಲಿ ಪಾಷಾಣ ಬೆರೆಸಿ ತಿಂದ ಮಹಿಳೆ | ಅಸ್ವಸ್ಥಗೊಂಡ ಮಹಿಳೆ ಆಸ್ಪತ್ರೆಯಲ್ಲಿ ಸಾವು

ವೀಳ್ಯದೆಲೆಗೆ ಸುಣ್ಣವೆಂದು ಇಲಿ ಪಾಷಾಣ ಬೆರೆಸಿ ತಿಂದ ಮಹಿಳೆ | ಅಸ್ವಸ್ಥಗೊಂಡ ಮಹಿಳೆ ಆಸ್ಪತ್ರೆಯಲ್ಲಿ ಸಾವು

by Praveen Chennavara
0 comments

ಉಡುಪಿ : ವೀಳ್ಯದೆಲೆಗೆ ಸುಣ್ಣವೆಂದು ತಿಳಿದು ಇಲಿ ಪಾಷಾಣ ಬೆರೆಸಿ ತಿಂದು ಅಸ್ವಸ್ಥಗೊಂಡ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬಗ್ಗೆ ವರದಿಯಾಗಿದೆ. ಈ ಘಟನೆ ಉಡುಪಿ ಜಿಲ್ಲೆಯ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಉಡುಪಿ ಜಿಲ್ಲೆಯ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ವೀಳ್ಯದೆಲೆಗೆ ಸುಣ್ಣ ಸವರಿ ದವಡೆಯಲ್ಲಿ ಇಟ್ಟುಕೊಂಡಿದ್ದರು. ವೀಳ್ಯದೆಲೆ ಸುಣ್ಣ ಸವರಿ ತಿಂದ ನಂತರ ಆಕೆ ಅಸ್ವಸ್ಥಳಾಗಿದ್ದಳು. ಆಕೆ ಬೆಳಗ್ಗೆ ವೀಳ್ಯದೆಲೆಗೆ ಸುಣ್ಣವೆಂದು ತಿಳಿದು ಇಲಿ ಪಾಷಾಣವನ್ನು ಸೇರಿಸಿ ತಿಂದಿದ್ದು ಆನಂತರ ಗೊತ್ತಾಗಿತ್ತು. ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತ ಮಹಿಳೆಯನ್ನು ಸಾಧು ಪೂಜಾರ್ತಿ (71) ಎಂದು ಗುರುತಿಸಲಾಗಿದೆ.

ಮಹಿಳೆಯನ್ನು ಮೊದಲು ಅವರನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿಂದ ಬಳಿಕ ಆಕೆಯನ್ನು ಮಂಗಳೂರಿನ ವೆಸ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆತರಲಾಗಿತ್ತು. ಆದರೆ ಆಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದೀಗ ಮೃತರ ಪುತ್ರಿ ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment