ಶಿಕ್ಷಣವು ಅತ್ಯಂತ ಶಕ್ತಿಶಾಲಿ ಅಸ್ತ್ರಗಳಲ್ಲಿ ಒಂದಾಗಿದೆ. ಆರ್ಥಿಕ ನೆರವಿನ ಕೊರತೆಯಿಂದ ಅನೇಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ. ಆದರೆ ಅನೇಕ ಖಾಸಗಿ ಬ್ಯಾಂಕ್‌ಗಳು ಮತ್ತು ಸರ್ಕಾರಿ ಬ್ಯಾಂಕ್‌ಗಳಿವೆ ನೀಡುತ್ತಿದೆ ವಿದ್ಯಾರ್ಥಿ ಸಾಲಗಳು ಇದರಿಂದ ವಿದ್ಯಾರ್ಥಿಯು ಉನ್ನತ ಶಿಕ್ಷಣವನ್ನು ಸುಲಭವಾಗಿ ಮುಂದುವರಿಸಬಹುದು. ಬಡ್ಡಿದರ ಮತ್ತು ಸಾಲದ ಮೊತ್ತವು ಸಾಲದಾತನಿಗೆ ಅನುಗುಣವಾಗಿ ಬದಲಾಗುತ್ತದೆ. ಪ್ರಸ್ತುತ ಅದೆಷ್ಟೊ ಕುಟುಂಬ ತಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡುವ ಪ್ರಯತ್ನದಲ್ಲಿ ತಮ್ಮ ಚಿನ್ನ, ಮನೆ, ಆಸ್ತಿಯನ್ನು ಮಾರಾಟ ಮಾಡುತ್ತಾರೆ. ಸದ್ಯ ಈಗ ಶಿಕ್ಷಣಕ್ಕಾಗಿ ಸಾಲ ಲಭ್ಯವಿರುವಾಗ ಕುಟುಂಬವು ಯಾವುದೇ ಸೊತ್ತನ್ನು ಮಾರಾಟ ಮಾಡಬೇಕಾದ ಅಗತ್ಯ ಬರುವುದಿಲ್ಲ. ಶಿಕ್ಷಣ ಸಾಲವನ್ನು ಪಡೆದು ಪದವಿ ಪಡೆದು, ಉದ್ಯೋಗ ಮಾಡುವಾಗ ಸಾಲವನ್ನು ಮರುಪಾವತಿ ಮಾಡುವ ಆಯ್ಕೆ ಇರುತ್ತದೆ.
ಹೌದು ದೇಶದ ಟಾಪ್ ಬ್ಯಾಂಕ್‌ಗಳು ಶಿಕ್ಷಣ ಸಾಲವನ್ನು ನೀಡುತ್ತದೆ. ಬೇರೆ ಬೇರೆ ಕೋರ್ಸ್‌ಗಳಿಗೆ ಶಿಕ್ಷಣ ಸಾಲವನ್ನು ನೀಡುತ್ತದೆ. ನೀವು ಯಾವ ರೀತಿಯ ಶಿಕ್ಷಣ ಸಾಲವನ್ನು ಪಡೆಯುತ್ತೀರೋ ಅದರ ಆಧಾರದಲ್ಲಿ ಮರುಪಾವತಿ ಅವಧಿ ನಿರ್ಧಾರವಾಗುತ್ತದೆ.
ಸದ್ಯ ಯಾವ ಬ್ಯಾಂಕ್ ಎಷ್ಟು ಬಡ್ಡಿದರಕ್ಕೆ ಶಿಕ್ಷಣ ಸಾಲವನ್ನು ನೀಡುತ್ತದೆ, ಅರ್ಹತಾ ಮಾನದಂಡವೇನು ಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ :
• ಆಕ್ಸಿಸ್ ಬ್ಯಾಂಕ್ ಶಿಕ್ಷಣ ಸಾಲ:
ಈ ಬ್ಯಾಂಕಿನಲ್ಲಿ 4 ಲಕ್ಷದವರೆಗಿನ ಸಾಲಕ್ಕೆ ಬಡ್ಡಿದರ ಶೇಕಡ 6.25 ಆಗಿದೆ. ಭಾರತದಲ್ಲಿ ಮತ್ತು ವಿದೇಶದಲ್ಲಿ ಶಿಕ್ಷಣವನ್ನು ಪಡೆಯಲು ಆಕ್ಸಿಸ್ ಬ್ಯಾಂಕ್ ಸಾಲವನ್ನು ನೀಡುತ್ತದೆ. ಆಕ್ಸಿಸ್ ಬ್ಯಾಂಕ್ ಶಿಕ್ಷಣ ಸಾಲವು 50 ಸಾವಿರ ರೂಪಾಯಿಯಿಂದ ಆರಂಭವಾಗುತ್ತದೆ. ಬೇರೆ ಬೇರೆ ಬಡ್ಡಿದರ ಇರುತ್ತದೆ. ಆಕ್ಸಿಸ್ ಬ್ಯಾಂಕ್‌ನಲ್ಲಿ ಶಿಕ್ಷಣ ಸಾಲ ಪಡೆಯುವುದು ಸುಲಭವಾಗಿದೆ. ಸರಳವಾಗಿ ದಾಖಲೆಗಳನ್ನು ಪ್ರಸ್ತುತಪಡಿಸುವುದು, ಶೀಘ್ರ ಸಾಲ ಪಡೆಯುವುದು, ಆದಾಯ ತೆರಿಗೆ ಕಾಯ್ದೆ 80(E) ಅಡಿಯಲ್ಲಿ ತೆರಿಗೆ ಪ್ರಯೋಜನ, ದೀರ್ಘ ಮರುಪಾವತಿ ಅವಧಿ ಮೊದಲಾದ ಲಾಭವನ್ನು ನಾವು ಈ ಬ್ಯಾಂಕ್‌ನಲ್ಲಿ ಪಡೆಯಬಹುದು.
• ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಿಕ್ಷಣ ಸಾಲ:
ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಿಕ್ಷಣ ಸಾಲವನ್ನು ನೀಡುತ್ತಿದೆ. ಬೇರೆ ಬೇರೆ ವಿಧದ ಶಿಕ್ಷಣ ಸಾಲವನ್ನು ನಾವು ಪಡೆಯಲು ಸಾಧ್ಯವಾಗುತ್ತದೆ. ಬಡ್ಡಿದರವು ಯೋಜನೆಯ ಮೇಲೆ ಅವಲಂಭಿತವಾಗಿದೆ. ಪಿಎನ್‌ಬಿಯಲ್ಲಿ 7.5 ಲಕ್ಷ ರೂಪಾಯಿ ಸಾಲಕ್ಕೆ ಗರಿಷ್ಠ ಅವಧಿ 15 ವರ್ಷವಾಗಿದೆ. 7.5 ಲಕ್ಷ ರೂಪಾಯಿವರೆಗೆ ಯಾವುದೇ ಸೆಕ್ಯೂರಿಟಿ ನೀಡಬೇಕಾಗಿಲ್ಲ. ಅದಕ್ಕೂ ಅಧಿಕ ಸಾಲಕ್ಕೆ ಮೇಲಾಧಾರ ನೀಡಬೇಕಾಗಬಹುದು.
• ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಿಕ್ಷಣ ಸಾಲ:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬೇರೆ ಬೇರೆ ವಿಧದ ಶಿಕ್ಷಣ ಸಾಲವನ್ನು ನೀಡುತ್ತದೆ. ಬೇರೆ ಬೇರೆ ಕೋರ್ಸ್‌ಗಳಿಗೆ ಶಿಕ್ಷಣ ಸಾಲವನ್ನು ಎಸ್‌ಬಿಐ ನೀಡುತ್ತದೆ. 7.5 ಲಕ್ಷ ರೂಪಾಯಿಗೆ ಸಾಲಕ್ಕೆ ಯಾವುದೇ ಗ್ಯಾರಂಟಿ ಬೇಕಾಗಿಲ್ಲ. ಕೋರ್ಸ್ ಅಂತ್ಯವಾದ ಒಂದು ವರ್ಷದ ಬಳಿಕ ಸಾಲವನ್ನು ಮರುಪಾವತಿ ಮಾಡುವ ಅವಧಿ ಆರಂಭವಾಗುತ್ತದೆ. 20 ಲಕ್ಷ ರೂಪಾಯಿ ಸಾಲಕ್ಕೆ ಮರುಪಾವತಿ ಅವಧಿ 15 ವರ್ಷವಾಗಿದೆ. ಕೋರ್ಸ್ ಅಂತ್ಯವಾದ ಬಳಿಕ 15 ವರ್ಷದ ಮರುಪಾವತಿ ಅವಧಿಯಾಗಿದೆ. 12 ವರ್ಷದ ಪ್ರೋಸೆಸಿಂಗ್ ಶುಲ್ಕವನ್ನು ಮನ್ನಾ ಮಾಡಲಾಗುತ್ತದೆ. ಬಡ್ಡಿದರ ಶೇಕಡ 8.30ರಿಂದ ಆರಂಭವಾಗುತ್ತದೆ.
• ಬ್ಯಾಂಕ್ ಆಫ್ ಬರೋಡಾ ಶಿಕ್ಷಣ ಸಾಲ:
ಬ್ಯಾಂಕ್ ಆಫ್ ಬರೋಡಾದಲ್ಲಿ ನಾವು ಹಲವಾರು ವಿಧದ ಶಿಕ್ಷಣ ಸಾಲವನ್ನು ಪಡೆಯಲು ಸಾಧ್ಯವಿದೆ. 4 ಲಕ್ಷ ರೂಪಾಯಿವರೆಗೆ ಯಾವುದೇ ಮೇಲಾಧಾರವನ್ನು ನೀಡದೆ ಸಾಲವನ್ನು ಪಡೆಯಬಹುದು. ಆದಾಯ ತೆರಿಗೆಯ ಸೆಕ್ಷನ್ 80E ಅಡಿಯಲ್ಲಿ ಈ ಸಾಲಕ್ಕೆ ಪಾವತಿಸಿದ ಬಡ್ಡಿದರದ ಮೇಲೆ ತೆರಿಗೆ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತದೆ. ಗರಿಷ್ಠ ಅವಧಿ 10-15 ವರ್ಷವಾಗಿದೆ. 7.5 ಲಕ್ಷ ರೂಪಾಯಿವರೆಗಿನ ಸಾಲಕ್ಕೆ ಯಾವುದೇ ಸೆಕ್ಯೂರಿಟಿಯನ್ನು ಒದಗಿಸಬೇಕಾಗಿಲ್ಲ. ಪ್ರೋಸೆಸಿಂಗ್ ಹಾಗೂ ದಾಖಲೀಕರಣಕ್ಕೆ ಶುಲ್ಕವಿಲ್ಲ. ಬಡ್ಡಿದರವು ಶೇಕಡ 8.85ರಿಂದ ಆರಂಭವಾಗುತ್ತದೆ.
ಈ ಮೇಲಿನಂತೆ ಶಿಕ್ಷಣ ಸಾಲವನ್ನು ಪಡೆದಲ್ಲಿ ನೀವು ಕೋರ್ಸ್ ಪೂರ್ಣಗೊಂಡಾಗ ಮತ್ತು ನೀವು ಉದ್ಯೋಗವನ್ನು ಪಡೆದ ನಂತರ ಸಾಲ ಮರುಪಾವತಿ ಪ್ರಾರಂಭವಾಗುತ್ತದೆ. ಪ್ರತಿ ಸಾಲದಾತನು ಸಾಲವನ್ನು ಮರುಪಾವತಿಸಲು ವಿಭಿನ್ನ ಮೊರಟೋರಿಯಂ ಅವಧಿಯನ್ನು ಹೊಂದಿರುತ್ತಾನೆ. ಅಲ್ಲದೆ ಸಾಲವನ್ನು ಮರುಪಾವತಿಸಲು ವಿವಿಧ ಮಾರ್ಗಗಳಿವೆ ಅದಕ್ಕಾಗಿ ನೀವು ಮೊದಲೇ ಬ್ಯಾಂಕ್ ನಲ್ಲಿ ವಿಚಾರಿಸಬೇಕು.
