Home » Viral Video : ಪ್ರಿಯಕರನ ಮದುವೆಗೆ ಬಂದ ಪ್ರಿಯತಮೆ : ಮುಂದೇನಾಯ್ತು?

Viral Video : ಪ್ರಿಯಕರನ ಮದುವೆಗೆ ಬಂದ ಪ್ರಿಯತಮೆ : ಮುಂದೇನಾಯ್ತು?

0 comments

ಮದುವೆ ಅನ್ನೋದು ಜೀವನದಲ್ಲಿ ಒಂದು ಬಾರಿ ಘಟಿಸುವ ಸುಂದರವಾದ ಘಟನೆ. ಈ ವೇಳೆಯೂ ಅದೆಷ್ಟೋ ಅನಾಹುತ ಸಂಭವಿಸಿದ್ದೂ ಇದೆ. ಅಲ್ಲದೆ ಕೆಲವೊಂದು ಅಚ್ಚರಿ ಮೂಡಿಸುವಂತಹ ಘಟನೆಗಳೂ ನಡೆಯುತ್ತವೆ. ಇನ್ನು ಕೆಲವೊಂದು ಹೀಗೂ ನಡೆಯುತ್ತಾ? ಅಂತ ತಲೆಯಲ್ಲಿ ಪ್ರಶ್ನಾರ್ಥಕ ಚಿಹ್ನೆಯಾಗಿ ಉಳಿದುಹೋಗುವ ಘಟನೆಗಳೂ ನಡೆಯುತ್ತವೆ. ಸದ್ಯ ಇದೀಗ ವೈರಲ್ ಆಗಿರುವ ಘಟನೆಯೂ ಅಂತಹದರಲ್ಲೇ ಒಂದಾಗಿದ್ದು, ಎಲ್ಲರನ್ನೂ ಅಚ್ಚರಿಗೊಳಿಸಿದೆ.

ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಮದುವೆ ಮಂಟಪದಲ್ಲಿ ವರ ಮತ್ತು ವಧು ನಿಂತಿರುತ್ತಾರೆ. ಅದಾಗಲೇ ಬಂದ ಯುವತಿಯೊಬ್ಬಳು ವರನ ಕಾಲನ್ನು ಗಟ್ಟಿಯಾಗಿ ಹಿಡಿದುಕೊಂಡು ಸ್ಟೇಜ್ ಮೇಲೆನೆ ಕುಳಿತುಬಿಡುತ್ತಾಳೆ. ಆಶ್ಚರ್ಯ ಏನಪ್ಪಾ ಅಂದ್ರೆ ವಧು ಏನೂ ಹೇಳೋದೇ ಇಲ್ಲ. ಅವಳ ಮುಖಭಾವ ಹೇಗಿದೆ ಅಂದ್ರೆ ಅದನ್ನು ಕಂಡು ಖುಷಿ ಆಯಿತು ಅನ್ನೋ ಹಾಗೇ. ಆದ್ರೆ ನೆರೆದಿದ್ದ ಎಲ್ಲರಿಗೂ ಈ ದೃಶ್ಯ ಅಚ್ಚರಿ ಉಂಟು ಮಾಡಿದೆ. ಬರೀ ಕಾಲು ಮಾತ್ರ ಹಿಡಿದುಕೊಂಡಿಲ್ಲ ಆ ಹುಡುಗಿ ಜೊತೆಗೆ ವರ ಮತ್ತು ಹುಡುಗಿ ರೊಮ್ಯಾನ್ಸ್ ಮಾಡುತ್ತಿದ್ದಾರೆ. ಅದು ಕೂಡ ವಧುವಿನ ಮುಂದೆಯೇ, ಆಕೆ ನಗುತ್ತಾ ನಿಂತಿದ್ದಾಳೆ. ಯುವತಿ ವರನ ಪ್ರಿಯತಮೆನೇ ಇರಬೇಕು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಸದ್ಯ ಈ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ಎಲ್ಲರೂ ಅಚ್ಚರಿಯಿಂದ ವಿಡಿಯೋ ನೋಡುತ್ತಿದ್ದಾರೆ. ಹಾಗೇ ವಧುವಿನ ರಿಯ್ಯಾಕ್ಷನ್ ಗೆ ದಂಗಾಗಿದ್ದಾರೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ajaysingh2.4 ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋ ಗೆ ಸಾಕಷ್ಟು ಲೈಕ್ಸ್ ಬಂದಿದ್ದು, ಸೋಷಿಯಲ್ಸ್ ವಿಭಿನ್ನ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.

You may also like

Leave a Comment