Home » Jaggesh Instagram Post : ಜಗ್ಗಣ್ಣ ಸಿಂಪ್ಲಿ ಸೂಪರ್ಬ್‌ ಎಂದ ನೆಟಿಜನ್ಸ್‌, ಪುಟ್ಟ ಅಭಿಮಾನಿಯ ಆಸೆ ನೆರವೇರಿಸಿದ ನವರಸ ನಾಯಕ

Jaggesh Instagram Post : ಜಗ್ಗಣ್ಣ ಸಿಂಪ್ಲಿ ಸೂಪರ್ಬ್‌ ಎಂದ ನೆಟಿಜನ್ಸ್‌, ಪುಟ್ಟ ಅಭಿಮಾನಿಯ ಆಸೆ ನೆರವೇರಿಸಿದ ನವರಸ ನಾಯಕ

by Mallika
0 comments

ಹೃದಯವಂತ, ಭಾವಜೀವಿ ಜಗ್ಗೇಶ್ (Jaggesh) ಸಾಮಾಜಿಕ ಜಾಲತಾಣದ ಮನಸ್ಸು ಗೆದ್ದಿದ್ದಾರೆ. ತಮ್ಮ ಅಭಿಮಾನಿಯತ್ತ ಜಗ್ಗೇಶ್ ಅವರು ಬೀರಿದ ಸರಳತೆಗೆ ಇಂಟರ್ನೆಟ್ ಖುಷಿಪಟ್ಟಿದೆ.(Jaggesh viral)

” ಈತ ಒಳ್ಳೆ ಬಾಸ್ಕೆಟ್‌ ಬಾಲ್‌ ಆಟಗಾರ, ಡಿಯರ್‌ ಸಚಿನ್‌, ನಿನ್ನ ಆಸೆಯನ್ನು ನೆರವೇರಿಸಿದ್ದೇನೆ. ದೇವರು ಒಳ್ಳೆಯದು ಮಾಡಲಿ, ನಿನ್ನ 10ನೇ ತರಗತಿ ಫಲಿತಾಂಶ ಉತ್ತಮವಾಗಿರಲಿ ” ಎಂದು ಜಗ್ಗೇಶ್‌ ತಮ್ಮ ಅಭಿಮಾನಿಗೆ ಶುಭ ಹಾರೈಸಿದ್ದಾರೆ. ಜಗ್ಗೇಶ್‌ ಅವರ ಈ ಸರಳತೆಗೆ ಜಗ್ಗಣ್ಣ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ನವರಸನಾಯಕ ಜಗ್ಗೇಶ್‌ ಅವರ ಚಿತ್ರರಂಗದ ನಂಟು ಬರೋಬ್ಬರಿ 40 ವರ್ಷಕ್ಕೂ ಮಿಗಿಲಾದದ್ದು. 80 ರ ದಶಕದಿಂದಲೂ ಸಿನಿಪ್ರಿಯರನ್ನು ರಂಜಿಸುತ್ತಿದ್ದಾರೆ. ತಲೆಮಾರುಗಳು ಹೋದರು ಇವತ್ತಿಗೂ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದ್ದಾರೆ ಕಾಮಿಡಿ ಕಿಲಾಡಿ ಜಗ್ಗೇಶ್. ಚಿತ್ರರಂಗದಲ್ಲಿ ಅಂದಿಗೂ ಇಂದಿಗೂ ಜಗ್ಗೇಶ್‌ಗೆ ಅದೇ ಬೇಡಿಕೆ ಇದೆ. ಅವರ ಅಭಿಮಾನಿಗಳ ಸಂಖ್ಯೆಯೂ ದಿನೇ ದಿನೇ ಹೆಚ್ಚುತ್ತಿದೆ. ಪ್ರಸಕ್ತ ರಾಜಕೀಯದಲ್ಲಿಯೂ ಅವರು ಸಕ್ರಿಯ. ಬಿಜೆಪಿ ಪಕ್ಷದಿಂದ ಅವರು ರಾಜ್ಯಸಭೆಗೆ ಕೂಡಾ ಇತ್ತೀಚೆಗೆ ಆಯ್ಕೆಯಾಗಿದ್ದಾರೆ. Kutumba- ಸಿನಿಮಾ-ರಾಜಕೀಯ ಮೂರನ್ನೂ ಪರ್ಫೆಕ್ಟ್ ಆಗಿ ಬ್ಯಾಲೆನ್ಸ್‌ ಮಾಡುತ್ತಿರುವ ಜಗ್ಗೇಶ್‌ ತಮ್ಮ ಪುಟಾಣಿ ಅಭಿಮಾನಿಯೊಬ್ಬನ ಆಸೆಯನ್ನು ನೆರವೇರಿಸಿದ್ದಾರೆ.

ಜಗ್ಗೇಶ್ ಅಂದರೆ. ಮಾತು ನಗು ಹರಟೆ ಎಲ್ಲವೂ ಇರುತ್ತೆ. ಅವರು ತಮ್ಮ ವೈಯಕ್ತಿಕ, ಸಿನಿಮಾ, ರಾಜಕೀಯ ವಿಚಾರಗಳ ಬಗ್ಗೆ ಆಗಾಗ ಅಪ್‌ಡೇಟ್‌ ನೀಡುತ್ತಾರೆ. ಇತ್ತೀಚೆಗೆ ಜಗ್ಗೇಶ್‌ ಹಂಚಿಕೊಂಡಿದ್ದ ಪೋಸ್ಟ್‌ಗೆ ಅಭಿಮಾನಿಯೊಬ್ಬ ಕಮೆಂಟ್‌ ಮಾಡಿ ”ನೀವು ಹಾಕಿರುವ ರುದ್ರಾಕ್ಷಿ ಮಾಲೆ ಎಲ್ಲಿ ದೊರೆಯುತ್ತದೆ ?” ಎಂದು ಪ್ರಶ್ನಿಸಿದ್ದ. ಇದಕ್ಕೆ ಉತ್ತರಿಸಿದ್ದ ಜಗ್ಗೇಶ್‌ ”ಕೇದಾರಪೀಠ ನೀಡಿದ್ದು” ಎಂದು ಉತ್ತರಿಸಿದ್ದರು. ಮತ್ತೊಬ್ಬರು ಅಭಿಮಾನಿ, ”ಜಗ್ಗಣ್ಣ ನಿಮ್ಮನ್ನು ಭೇಟಿ ಆಗುವುದು ಹೇಗೆ ?” ಎಂದು ಕೇಳಿದ್ದರ. ”ಈ ಅಲೆಮಾರಿಯ ಹುಡುಕಿ ಹಿಡಿಯಬೇಕು” ಎಂದು ಜಗ್ಗೇಶ್‌ ಮಸ್ತ್ ರಿಪ್ಲೈ ನೀಡಿದ್ದರು.

ಇದೀಗ ತಮ್ಮ ಪುಟ್ಟ ಅಭಿಮಾನಿಯೊಬ್ಬರ ಬಹಳ ದಿನಗಳ ಆಸೆಯನ್ನು ಈಡೇರಿಸಿದ್ದಾರೆ. ಆ ಅಭಿಮಾನಿಯ ಜೊತೆಗಿರುವ ಫೋಟೋವನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ಜಗ್ಗೇಶ್‌ ”ಪುಟ್ಟ ಅಭಿಮಾನಿ ಸಚಿನ್ ಬಯಕೆ ಇದು. ಈತನ ಫೋಟೋವನ್ನು ನನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಬೇಕು ಅನ್ನೋದು ಆತನ ಆಸೆಯಾಗಿತ್ತು. ಈತ ಒಳ್ಳೆ ಬಾಸ್ಕೆಟ್‌ ಬಾಲ್‌ ಆಟಗಾರ, ಡಿಯರ್‌ ಸಚಿನ್‌, ನಿನ್ನ ಆಸೆಯನ್ನು ನೆರವೇರಿಸಿದ್ದೇನೆ. ದೇವರು ಒಳ್ಳೆಯದು ಮಾಡಲಿ, ನಿನ್ನ 10ನೇ ತರಗತಿ ಫಲಿತಾಂಶ ಉತ್ತಮವಾಗಿರಲಿ” ಎಂದು ಜಗ್ಗೇಶ್‌ ತಮ್ಮ ಅಭಿಮಾನಿಗೆ ಶುಭ ಹಾರೈಸಿದ್ದಾರೆ. ಜಗ್ಗೇಶ್‌ ಅವರ ಈ ಸರಳತೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ರಾಜ್ಯಸಭೆಯಲ್ಲಿ ಕನ್ನಡದಲ್ಲಿ ಭಾಷಣ ಮಾಡಿ ಗಮನ ಸೆಳೆದಿದ್ದರು. ಜಗ್ಗೇಶ್ ಅವರ ರಾಜ್ಯಸಭೆಯ ಭಾಷಣವನ್ನು ಪ್ರಧಾನಿ ಮೋದಿ ಅವರು ಶ್ಲಾಘಿಸಿದ್ದರು. ಜಗ್ಗೇಶ್‌ ಅವರು ಅದಕ್ಕೂ ಮುನ್ನ, ರಾಘವೇಂದ್ರ ಸ್ವಾಮಿಗಳ ಹೆಸರಿನಲ್ಲಿ ಪ್ರಮಾಣವಚನವನ್ನು ಕನ್ನಡದಲ್ಲಿ ಸ್ವೀಕರಿಸಿದ್ದರು.

ಜಗ್ಗೇಶ್ ನಟನೆಯ ರಾಘವೇಂದ್ರ ಸ್ಟೋರ್ಸ್‌ ಚಿತ್ರಕ್ಕಾಗಿ ಜಗ್ಗೇಶ್‌ ಅಭಿಮಾನಿಗಳು ಕಾಯುತ್ತಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ‘ತೋತಾಪುರಿ 2’ ಹಿಡಿದುಕೊಂಡು ಜಗ್ಗೇಶ್ ಬಂದಿದ್ದರು. ನಂತ್ರ ‘ರಂಗನಾಯಕ’ ಹಾಗೂ ‘ರಾಘವೇಂದ್ರ ಸ್ಟೋರ್ಸ್‌’ ಸಿನಿಮಾಗಳು ಶೂಟಿಂಗ್‌ ಹಂತದಲ್ಲಿವೆ. ‘ರಂಗನಾಯಕ’ ಚಿತ್ರವನ್ನು ಮಠ ಖ್ಯಾತಿಯ ಗುರುಪ್ರಸಾದ್‌ ನಿರ್ದೇಶಿಸುತ್ತಿದ್ದಾರೆ. ‘ರಾಘವೇಂದ್ರ ಸ್ಟೋರ್ಸ್‌’ ಚಿತ್ರಕ್ಕೆ ಸಂತೋಷ್‌ ಆನಂದ್‌ ರಾಮ್‌ ಆಕ್ಷನ್‌ ಕಟ್‌ ಹೇಳಿದ್ದು ಚಿತ್ರವನ್ನು ಕಾಂತಾರ ಮತ್ತು ಕೆಜಿಎಫ್ ( Kantara – KGF ) ಖ್ಯಾತಿಯ ಹೊಂಬಾಳೆ ಫಿಲ್ಮ್ಸ್‌ ನಿರ್ಮಿಸಿದೆ. 2023 ರಲ್ಲಿ ಖಂಡಿತ ಸಿನಿಮಾ ನಿಮ್ಮನ್ನು ರಂಜಿಸಲಿದೆ ಎಂದು ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌ ಹೇಳಿದ್ದು, ‘ ಸ್ಟೋರ್ ‘ ಓಪನ್ ಆಗೊದನ್ನು, ರಂಗನಾಯಕ ಬರೋದನ್ನು ಜಗ್ಗಣ್ಣ ಅಭಿಮಾನಿಗಳು ಕಾಯುತ್ತಿದ್ದಾರೆ.

https://www.instagram.com/p/Coq1QLyqBm1/?utm_source=ig_web_copy_link

 

You may also like

Leave a Comment