ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ಅದ್ಭುತವಾದ ಚಿತ್ರ ‘ಕಾಂತಾರ’
ಇದೀಗ ರಿಲೀಸ್ ಆಗುತ್ತಿದೆ. ಒಮ್ಮೆ ರಿಲೀಸ್ ಅಗಿದೆ ಇದೇನಿದು ಮತ್ತೆ ರಿಲೀಸ್ ಆಗೋದು? ಏನು ಅಂದ್ರೆ ಕಾಂತಾರ ಬೇರೆ ರಾಜ್ಯಗಳಲ್ಲಿ ಮರು ಬಿಡುಗಡೆಯಾಗುತ್ತಿದೆ. ಅದ್ಭುತ ಕಲಾವಿದರನ್ನು ಒಳಗೊಂಡ ಕಾಂತಾರ ಎಲ್ಲೆಡೆ ಸಂಚಲನ ಮೂಡಿಸಿದ್ದು, ತುಳುನಾಡ ಮಣ್ಣಿನ ಕತೆಯನ್ನಾಧರಿಸಿ, ಕಾಡಿನ ಕತೆಯನ್ನೊಳಗೊಂಡ ಅದ್ಭುತ ಚಿತ್ರವಾಗಿದೆ. ಅಲ್ಲದೆ, ಹಲವು ಪ್ರಶಸ್ತಿ, ದಾಖಲೆಗಳನ್ನು ಮುಡಿಗೇರಿಸಿಕೊಂಡಿದೆ. ಜನರು ಮೆಚ್ಚಿ, ಮನದಲ್ಲಿ ಅಚ್ಚೊತ್ತಿರುವ ಸಿನಿಮಾವಾಗಿದೆ. ಸದ್ಯ ಡಿವೈನ್ ಬ್ಲಾಕ್ ಬಸ್ಟರ್ ಸಿನಿಮಾ ʼಕಾಂತಾರʼ ರಿ ರಿಲೀಸ್ ಆಗಲಿದೆ. ಯಾವತ್ತು? ಯಾವ ರಾಜ್ಯದಲ್ಲಿ? ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಸಾಮಾನ್ಯವಾಗಿ ಪ್ರತೀ ವರ್ಷ ಶಿವರಾತ್ರಿ ವೇಳೆ ಭಕ್ತಾದಿಗಳು ರಾತ್ರಿಯಿಡೀ ಜಾಗರಣೆ ಮಾಡಿ ಭಕ್ತಿಯಿಂದ ಶಿವನ ನಾಮಸ್ಮರಣೆ ಮಾಡುತ್ತಾರೆ. ಸಿನಿಪ್ರೇಮಿಗಳು ಈ ವೇಳೆ ಸಿನಿಮಾ ನೋಡುತ್ತಾರೆ.
ಈ ಶಿವರಾತ್ರಿಯನ್ನು ಕರ್ನಾಟಕ, ತೆಲುಗು ಹಾಗೂ ತಮಿಳುನಾಡಿನಲ್ಲಿ
ವಿಶೇಷವಾಗಿ ಆಚರಿಸುತ್ತಾರೆ. ಅಲ್ಲದೆ, ತೆಲುಗು ರಾಜ್ಯಗಳಲ್ಲಿ ಜಾಗರಣೆಗಾಗಿ ಚಿತ್ರಮಂದಿರಗಳಲ್ಲಿ ಭಕ್ತಿ ಪ್ರಧಾನ ಸಿನಿಮಾ ಪ್ರದರ್ಶನ ಮಾಡಲಾಗುತ್ತದೆ. ಈ ವರ್ಷದ ಶಿವರಾತ್ರಿಯಂದು ದೈವದ ಕತೆಯನ್ನೊಳಗಂಡ, ಬ್ಲಾಕ್ಬಸ್ಟರ್ ‘ಕಾಂತಾರ’ ಸಿನಿಮಾ ಪ್ರದರ್ಶನ ಮಾಡಲಾಗುತ್ತದೆ.
ಕಾಂತಾರ ಕರ್ನಾಟಕದಲ್ಲಿ ರಿ ರಿಲೀಸ್ ಆಗುತ್ತಿಲ್ಲ. ಬದಲಾಗಿ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಕನ್ನಡದ ‘ಕಾಂತಾರ’ ಮರು ಬಿಡುಗಡೆ ಆಗುತ್ತಿದೆ. ಪ್ರತಿವರ್ಷವೂ ಶಿವರಾತ್ರಿಯ ದಿನದಂದು ತೆಲುಗು ರಾಜ್ಯದಲ್ಲಿ ಆ ವರ್ಷ ಸೂಪರ್ ಹಿಟ್ ಸಿನಿಮಾ ಎನಿಸಿಕೊಂಡಿರುವ ಮೂರು ತೆಲುಗು ಸಿನಿಮಾಗಳನ್ನು ರಾತ್ರಿಯಿಡಿ ಪ್ರದರ್ಶನ ಮಾಡಲಾಗುತ್ತದೆ. ಆದರೆ ಈ ಬಾರಿ ಡಿವೈನ್ ಸಿನಿಮಾ ಕಾಂತಾರ ಚಿತ್ರವನ್ನು ಮತ್ತೊಮ್ಮೆ ಬಿಡುಗಡೆ ಮಾಡಲಾಗುತ್ತಿದೆ.
ಈ ಸಿನಿಮಾ ಒಟಿಟಿಯಲ್ಲಿ ಲಭ್ಯವಿದ್ದು, ಟಿವಿಯಲ್ಲೂ ಪ್ರಸಾರವಾಗಿದ್ದು, ಶಿವರಾತ್ರಿಯಂದು ಸಿನಿ ಪ್ರೇಕ್ಷಕರ ಮುಂದೆ ಬರಲಿದೆ. ಕರಾವಳಿಯ ಕಲೆಯನ್ನೊಳಗೊಂಡ ಈ ಸಿನಿಮಾ ಅದ್ಭುತ ಪ್ರದರ್ಶನ ಕಂಡಿದ್ದು, ದೇಶಾದ್ಯಂತ ಮೆಚ್ಚಿಕೊಂಡಿದ್ದಾರೆ. ಇನ್ನು ಕಾಂತಾರ -2 ಸಿನಿಮಾದ ಸಿದ್ಧತೆ ನಡೆಯುತ್ತಿದ್ದು, ರಿಷಬ್ ಸಿನಿಮಾದ ತಯಾರಿಯಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಹಾಗೇ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುತ್ತಿದ್ದಾರೆ. ಇನ್ನು ನಟಿ ಸಪ್ತಮಿ ಗೌಡ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
