ರಾತ್ರಿ ಮಲಗಿದ ಸುಖ ನಿದ್ರೆಗೆ ಜಾರಬೇಕು ಎನ್ನುವಾಗ ಗೊರಕೆ ನಿದ್ರಾಭಂಗ ಮಾಡಿ ಬಿಡುತ್ತೆ. ಈ ಗೊರಕೆ ಹೊಡೆಯುವ ಸಮಸ್ಯೆಯಿಂದ ಪಾರಾಗೋದು ಹೇಗಪ್ಪಾ ಅಂತ ಹೆಚ್ಚಿನವರು ತಲೆಕೆಡಿಸಿಕೊಳ್ಳುತ್ತಾರೆ. ಪರಿಹಾರ ಕಂಡುಕೊಳ್ಳಲು ಏನೇನೋ ಪ್ರಯೋಗ ಕೂಡ ಮಾಡೋದಿದೆ. ಗೊರಕೆ ಹೊಡೆಯುವ ಅಭ್ಯಾಸದಿಂದ ಇನ್ನೂ ಮುಂದೆ ಪರಿಹಾರ ಕಂಡುಕೊಳ್ಳಬಹುದು. ಹೇಗೆ ಅಂತೀರಾ??
ಸಾಮಾನ್ಯವಾಗಿ ಗೊರಕೆ ಹೊಡೆಯುವ ಸಮಸ್ಯೆ ಹೆಚ್ಚಿನವರಲ್ಲಿ ಕಂಡು ಬರುತ್ತದೆ. ಇದರಿಂದ ಜೊತೆಗೆ ಮಲಗಿದವರಿಗು ಕೂಡ ಕಿರಿಕಿರಿ ಆಗೋದು ಸಹಜ. ಅಷ್ಟೇ ಅಲ್ಲದೆ, ಅತಿಯಾದ ಗೊರಕೆ ಹೊಡೆಯುವ ಅಭ್ಯಾಸ ಆರೋಗ್ಯಕ್ಕೂ ಕೂಡ ಒಳ್ಳೆಯದಲ್ಲ. ಹಾಗಿದ್ರೆ, ಗೊರಕೆಯಿಂದ ಹೇಗೆ ಪರಿಹಾರ ಪಡೆಯೋದು ಅನ್ನೋರಿಗೆ ಉತ್ತರ ಇಲ್ಲಿದೆ ನೋಡಿ.ಇದೀಗ ಬನಾರಸ್ ಹಿಂದೂ ಯುನಿವರ್ಸಿಟಿ ಮಷಿನ್ ಒಂದನ್ನು ಅನ್ವೇಷಿಸಿದ್ದು, ಗೊರಕೆಯಿಂದ ಪರಿಹಾರ ಕಂಡುಕೊಳ್ಳಬಹುದು.
ಗೊರಕೆ ಸದ್ದಿನಿಂದಾಗಿ ಉಂಟಾಗುವ ಕಿರಿಕಿರಿಯಿಂದ ಪಾರಾಗುವ ನಿಟ್ಟಿನಲ್ಲಿ ಕಾಶಿ ಹಿಂದೂ ವಿಶ್ವವಿದ್ಯಾಲದಯದ ಐಎಮ್ಎಸ್ ಬಿಎಚ್ಯು 7 ವರ್ಷಗಳ ಕಠಿಣ ಅವಿರತ ಪ್ರಯತ್ನ ನಡೆಸಿ ಈ ಯಂತ್ರವನ್ನು ಅನ್ವೇಷಿಸಿದ್ದಾರೆ. ಬನರಾಸ್ ವಿಶ್ವವಿದ್ಯಾಲಯ ಯಂತ್ರವನ್ನು ಕಂಡು ಹಿಡಿದಿದ್ದು, ಇದನ್ನು ರಾತ್ರಿ ವಸಡಿನ ಬಳಿ ಇಟ್ಟು ಮಲಗಬೇಕು. ಇದರಿಂದ,ಗೊರಕೆ ಸದ್ದು ನಿಲ್ಲಲ್ಲಿದೆ.
ಈ ಯಂತ್ರದ ಅನ್ವೇಷಣೆ ನಡೆಸಲು ಬನರಾಸ್ ಹಿಂದೂ ವಿಶ್ವವಿದ್ಯಾಲಯದ ಟ್ರಾಮಾ ಸೆಂಟರ್ನ ಡೆಂಟಲ್ ಮೆಡಿಸಿನ್ ಡಿಪಾರ್ಟಮೆಂಟ್ ಆಫ್ ಚೆಸ್ಟ್ ಮತ್ತು ಟಿಬಿ ಡೀಸಿಸ್ ಕಳೆದ ಏಳು ವರ್ಷಗಳ ಹಿಂದೆಯೇ ಮುಂದಾಗಿದೆ. ಸದ್ಯ, ಈ ಸಂಶೋಧನಾ ಕಾರ್ಯ ಪೂರ್ಣವಾಗಿದ್ದು, ಇದು ಗೊರಕೆಯ ಶಬ್ಧವನ್ನು ಶೇ 10ರಷ್ಟ ಪ್ರತಿಶತ ಕಡಿಮೆ ಮಾಡಲಿದೆ ಎಂದು ದಂತವೈದ್ಯಕೀಯ ವಿಭಾಗ ಪ್ರೋ. ಟಿಪಿ ಚತುರ್ವೇದಿ ಅವರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಚತುರ್ವೇದಿಯವರು ಈ ಯಂತ್ರದ ಮೂಲಕ ಅನೇಕ ರೋಗಿಗಳ ಮೇಲೆ ಯಶಸ್ವಿಯಾಗಿ ಪ್ರಯೋಗ ನಡೆಸಿರುವ ಬಗ್ಗೆ ಮಾಹಿತಿ ನೀಡಿದ್ದು, ಹೆಚ್ಚಿನವರಿಗೆ ಈ ಯಂತ್ರದ ಮೂಲಕ ಗೊರಕೆ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ. ಈ ಯಂತ್ರವನ್ನು ವಸಡಿನ ಭಾಗ ಇರಿಸಬೇಕಾಗಿದ್ದು, ಹೀಗೆ ಇರಿಸುವುದರಿಂದ ಯಾವುದೇ ಹಾನಿಯಾಗುವುದಿಲ್ಲ ಎಂದು ಕೂಡ ತಿಳಿಸಿದ್ದಾರೆ.
ಮುಂದಿನ ಆರು ತಿಂಗಳಲ್ಲಿ ಈ ಯಂತ್ರದ ನೆರವಿನಿಂದ ರೋಗಿಗಳ ಚಿಕಿತ್ಸೆ ಆರಂಭಿಸುವ ಬಗ್ಗೆ ಮಾಹಿತಿ ನೀಡಿದ್ದು, ಈ ಯಂತ್ರವನ್ನು ಕಡಿಮೆ ವೆಚ್ಚದಲ್ಲಿ ಯಾರು ಬೇಕಾದರೂ ಕೂಡ ಕೊಂಡು ಉಪಯೋಗಿಸಬಹುದು. ಈ ಯಂತ್ರವನ್ನು ಎದೆರೋಗ ವಿಭಾಗದ ವೈದ್ಯರ ಸಹಕಾರದಿಂದ ಮಾಡಲಾಗಿದ್ದು, ಈ ಯಂತ್ರದ ಅನ್ವೇಷಣೆ ನಡೆಸಲು 7ರಿಂದ 8 ವರ್ಷಗಳ ಅವಧಿ ವ್ಯಯಿಸಲಾಗಿದೆ. ಗೊರಕೆ ಸಮಸ್ಯೆಯ ಚಿಕಿತ್ಸಾ ಪರಿಹಾರಕ್ಕೆ ಜನರು 2 ಲಕ್ಷ ರೂವರೆಗೆ ಖರ್ಚು ಮಾಡುತ್ತಾರೆ. ಆದರೆ, ಈ ಯಂತ್ರ ಕೇವಲ 20 ಸಾವಿರಕ್ಕೆ ದೊರೆಯುವ ಬಗ್ಗೆ ಚತುರ್ವೇದಿಯವರು ಮಾಹಿತಿ ನೀಡಿದ್ದಾರೆ.
