Home » Banking Jobs : ಕೆನರಾ ಬ್ಯಾಂಕ್‌ನಲ್ಲಿ ಉದ್ಯೋಗವಕಾಶ ! ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

Banking Jobs : ಕೆನರಾ ಬ್ಯಾಂಕ್‌ನಲ್ಲಿ ಉದ್ಯೋಗವಕಾಶ ! ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

0 comments
Canara bank

Canara Bank Recruitment 2023 : ಕೆನರಾ ಬ್ಯಾಂಕ್ ( Canara Bank) ಅಧಿಕೃತ ಅಧಿಸೂಚನೆಯ ಮೂಲಕ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಸದ್ಯ ಬ್ಯಾಂಕಿಂಗ್ ಉದ್ಯೋಗ(Banking Job)ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ಇಲ್ಲಿದೆ. ಕೆನರಾ ಬ್ಯಾಂಕ್(Canara Bank Recruitment 2023) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು ಒಟ್ಟು 3 ಚೀಫ್ ಡಿಜಿಟಲ್ ಆಫೀಸರ್, ಚೀಫ್​ ಟೆಕ್ನಾಲಜಿ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಯ ವಿವರಗಳು :

ಸಂಸ್ಥೆ : ಕೆನರಾ ಬ್ಯಾಂಕ್
ಹುದ್ದೆ : ಚೀಫ್ ಡಿಜಿಟಲ್ ಆಫೀಸರ್, ಚೀಫ್​ ಟೆಕ್ನಾಲಜಿ ಆಫೀಸರ್
ಒಟ್ಟು ಹುದ್ದೆ : 3
ವಿದ್ಯಾರ್ಹತೆ : ಪದವಿ, ಸ್ನಾತಕೋತ್ತರ ಪದವಿ, ಬಿಇ/ಬಿ.ಟೆಕ್​
ವೇತನ : ನಿಯಮಾನುಸಾರ
ಉದ್ಯೋಗದ ಸ್ಥಳ : ಬೆಂಗಳೂರು(bengaluru )

ಹುದ್ದೆಯ ಮಾಹಿತಿ:
ಗ್ರೂಪ್ ಚೀಫ್ ರಿಸ್ಕ್ ಆಫೀಸರ್(GCRO)- 1
ಚೀಫ್ ಡಿಜಿಟಲ್ ಆಫೀಸರ್(CDO)- 1
ಚೀಫ್ ಟೆಕ್ನಾಲಜಿ ಆಫೀಸರ್(CTO)- 1

ವಿದ್ಯಾರ್ಹತೆ:
ಗ್ರೂಪ್ ಚೀಫ್ ರಿಸ್ಕ್ ಆಫೀಸರ್(GCRO) : ಪದವಿ, ಸ್ನಾತಕೋತ್ತರ ಪದವಿ
ಚೀಫ್ ಡಿಜಿಟಲ್ ಆಫೀಸರ್(CDO): ಬಿಇ/ಬಿ.ಟೆಕ್, ಎಂಸಿಎ
ಚೀಫ್ ಟೆಕ್ನಾಲಜಿ ಆಫೀಸರ್(CTO): ಪದವಿ, ಬಿಇ/ಬಿ.ಟೆಕ್, ಎಂಸಿಎ

ವಯೋಮಿತಿ:
ಗ್ರೂಪ್ ಚೀಫ್ ರಿಸ್ಕ್ ಆಫೀಸರ್(GCRO): 55 ವರ್ಷದೊಳಗಿರಬೇಕು
ಚೀಫ್ ಡಿಜಿಟಲ್ ಆಫೀಸರ್(CDO): 40 ರಿಂದ 50 ವರ್ಷ
ಚೀಫ್ ಟೆಕ್ನಾಲಜಿ ಆಫೀಸರ್(CTO): 40 ರಿಂದ 50 ವರ್ಷ
ಜೊತೆಗೆ ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಸದ್ಯ ಆಯ್ಕೆ ಪ್ರಕ್ರಿಯೆಯು ಸ್ಕ್ರೀನಿಂಗ್, ಶಾರ್ಟ್​​​ಲಿಸ್ಟಿಂಗ್, ಇಂಟರ್​ಯಾಕ್ಷನ್, ಸಂದರ್ಶನ (interview)ರೀತಿಯಲ್ಲಿ ಇರುತ್ತವೆ.

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 15/02/2023 ಆಗಿರುತ್ತದೆ.
ಅರ್ಜಿ ಸಲ್ಲಿಸಲು ಇದೇ ಮಾರ್ಚ್​ 6, 2023 ಕೊನೆಯ ದಿನವಾಗಿದೆ (Last Date). ಆಸಕ್ತರು ಆನ್​ಲೈನ್ (Online) ಮೂಲಕ ಅರ್ಜಿ ಸಲ್ಲಿಸಬೇಕು.

ಈ ಮೇಲಿನ ಹುದ್ದೆಗೆ ಅರ್ಜಿ ಹಾಕಲು ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಹಾಕುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಈ ಮೇಲೆ ಮಾಹಿತಿ ತಿಳಿಸಲಾಗಿದ್ದು ಮತ್ತು ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ 08022116922 ಗೆ ಕರೆ ಮಾಡಿ ಮಾಹಿತಿ ತಿಳಿದುಕೊಳ್ಳಬಹುದು ಎಂದು ಮಾಹಿತಿ ನೀಡಲಾಗಿದೆ.

You may also like

Leave a Comment