Home » Contraceptive pills : ಗರ್ಭ ನಿರೋಧ ಗುಳಿಗೆ ಔಷಧಗಳ ಮಾರಾಟದ ಮೇಲೆ ನಿಷೇಧ

Contraceptive pills : ಗರ್ಭ ನಿರೋಧ ಗುಳಿಗೆ ಔಷಧಗಳ ಮಾರಾಟದ ಮೇಲೆ ನಿಷೇಧ

by Mallika
0 comments
Contraceptive pills

Contraceptive pills: ಅಫ್ಘಾನಿಸ್ತಾನದ (Afghanistan) ಆಡಳಿತದ ನಿಯಂತ್ರಣ ಹಿಡಿದಿರುವ ತಾಲೀಬಾನ್‌(Talinab) ಉಗ್ರರು(Terrorist) ಅಧಿಕಾರಕ್ಕೆ ಬಂದಾಗಿನಿಂದಲು ಮಹಿಳೆಯರ ಹಕ್ಕುಗಳನ್ನು(women’s right) ಹತ್ತಿಕ್ಕುವ ಪ್ರಯತ್ನವನ್ನು ಮಾಡುತ್ತಲೇ ಬಂದಿದ್ದಾರೆ. ಇದೀಗ ಹೊಸದೊಂದು ನಿಯಮ ತಂದಿದ್ದು, ಇನ್ನು ಮುಂದೆ ಮಹಿಳೆಯರು ಗರ್ಭ ನಿರೋಧಕ ಮಾತ್ರೆ ಮತ್ತು ಔಷಧಗಳನ್ನು(Contraceptive pills) ತೆಗೆದುಕೊಳ್ಳಬಾರದು ಎಂದು ಫ‌ರ್ಮಾನು ಹೊರಡಿಸಿದ್ದಾರೆ.

ಅಫ್ಘಾನಿಸ್ತಾನದ ಎರಡು ಪ್ರಮುಖ ನಗರಗಳಲ್ಲಿ, ಗರ್ಭನಿರೋಧಕಗಳ ಮಾರಾಟವನ್ನು ನಿಷೇಧಿಸುವಂತೆ ತಾಲಿಬಾನ್ ಹೋರಾಟಗಾರರು ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿದ್ದಾರೆ. ಇಂಥ ಔಷಧಗಳು, ಮಾತ್ರೆಗಳ ಮೂಲಕ ಪಾಶ್ಚಿಮಾತ್ಯ ದೇಶಗಳು ಮುಸ್ಲಿಂ ಸಮುದಾಯದ (Muslim community) ಜನಸಂಖ್ಯೆಯನ್ನು ಅವನತಿಗೊಳಿಸುವ ಪಿತೂರಿಯನ್ನು ನಡೆಸಿದೆ ಎಂದು ಉಗ್ರರ ಸರ್ಕಾರ ಹೊಸ ವಾದ ಮಂಡಿಸಿದೆ.

ಈ ಬಗ್ಗೆ “ದ ಗಾರ್ಡಿಯನ್‌’ ಪತ್ರಿಕೆ ವರದಿ ಮಾಡಿದೆ. ಕಾಬೂಲ್‌ನಲ್ಲಿ ಇರುವ ಮಳಿಗೆಯ ಮಾಲೀಕ ನೀಡಿದ ಮಾಹಿತಿಯಂತೆ “ಅವರು ಎರಡು ಬಾರಿ ಬಂದೂಕುಗಳೊಂದಿಗೆ ನನ್ನ ಅಂಗಡಿಗೆ ಬಂದು ಗರ್ಭನಿರೋಧಕ ಮಾತ್ರೆಗಳನ್ನು  ಮಾರಾಟಕ್ಕೆ ಇಡದಂತೆ ನನಗೆ ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲದೆ ಅವರು ಕಾಬೂಲ್‌ನಲ್ಲಿರುವ ಪ್ರತಿ ಫಾರ್ಮಸಿಯನ್ನು ನಿಯಮಿತವಾಗಿ ಪರಿಶೀಲಿಸುತ್ತಿದ್ದಾರೆ ಮತ್ತು ನಾವು ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸಿದ್ದೇವೆ’ ಎಂದು ಮೆಡಿಕಲ್ ಶಾಪ್‌ (Medical shop) ಮಾಲೀಕರು ಹೇಳಿದರು.

You may also like

Leave a Comment