Home » Increased temperature: ರಾಜ್ಯದಲ್ಲಿ ಹೆಚ್ಚಾದ ತಾಪಮಾನ! ಶಿವರಾತ್ರಿಗೂ ಮುನ್ನವೇ ಜನರ ನೆತ್ತಿ ಸುಡುತ್ತಿದೆ ಬಿಸಿಲು!

Increased temperature: ರಾಜ್ಯದಲ್ಲಿ ಹೆಚ್ಚಾದ ತಾಪಮಾನ! ಶಿವರಾತ್ರಿಗೂ ಮುನ್ನವೇ ಜನರ ನೆತ್ತಿ ಸುಡುತ್ತಿದೆ ಬಿಸಿಲು!

by Mallika
6 comments
Temperature

Increased temperature: ವರ್ಷದ ಕೊನೆಗೆ ಆರಂಭವಾಗುವ ಚಳಿಗಾಲ ಶಿವರಾತ್ರಿ(Shivaratri) ಮುಗಿಯುವ ತನಕ ಇದ್ದು ಜನರು ಚಳಿಯಿಂದ ನಡುಗುವಂತೆ ಮಾಡುತ್ತದೆ. ಊರುಗಳಲ್ಲೆಲ್ಲ ಹಿರಿಯರು ಅಬ್ಬ! ಶಿವರಾತ್ರಿ ಬಂತು ಇನ್ನು ಚಳಿ ಕಡಿಮೆಯಾಗುತ್ತದೆ, ನಾವಿನ್ನು ಆರಾಮಾಗಿ ಇರಬಹುದು ಎಂದು ಯೋಚಿಸುತ್ತಾರೆ. ಅಂದರೆ ಶಿವರಾತ್ರಿಯ ನಂತರ ಬೇಸಿಗೆಕಾಲ ಆರಂಭವಾಗುತ್ತದೆ ಎಂಬುದನ್ನು ಇದು ಸೂಚಿಸುತ್ತದೆ. ಆದರೀಗ ರಾಜ್ಯದಲ್ಲಿ ಶಿವರಾತ್ರಿಗೂ ಮುನ್ನವೇ ಬೇಸಿಗೆ(Summer) ಶುರುವಾಗಿದ್ದು, ವಾಡಿಕೆಗಿಂತ ಮುನ್ನವೇ ಬೇಸಿಗೆ ಆರಂಭವಾಗಿದೆ. ಬಿಸಿಲ ಬೇಗೆಗೆ (Increased temperature)ಜನರು ತತ್ತರಿಸಿದ್ದಾರೆ.

ಯಾವಾಗಲೂ ಸಾಮಾನ್ಯವಾಗಿ ಮಾರ್ಚ್(March) ಬಳಿಕ ಬಿಸಿಲ ಬೇಗೆ ಹೆಚ್ಚಾಗುತ್ತಿತ್ತು ಆದರೆ, ಫೆಬ್ರವರಿ(February) ಮಧ್ಯಭಾಗದಲ್ಲೇ ತಾಪಮಾನ ಹೆಚ್ಚಾಗುತ್ತಿದೆ. ಏಪ್ರಿಲ್(April) ಅಥವಾ 3ನೇ ವಾರದಲ್ಲಿ ಹೆಚ್ಚಾಗುತ್ತಿದ್ದ ಉಷ್ಣಾಂಶ ಮಾರ್ಚ್ 3ನೇ ವಾರದಲ್ಲಿ ಅಧಿಕವಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್(Celsius)ಇರಲಿದ್ದು, ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಬಾಗಲಕೋಟೆಯಲ್ಲಿ(Bagalakote) ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಹಾಗೆಯೇ ಮಡಿಕೇರಿ(Madikeri)ಯಲ್ಲಿ ಗರಿಷ್ಠ 30 ಡಿಗ್ರಿ ಹಾಗೂ ಕನಿಷ್ಠ 14 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕಳೆದ ವರ್ಷ ಮಳೆಗಾಲ ಮುಗಿದರೂ ಕೂಡ ಮಳೆ ಆರ್ಭಟ ನಿಂತಿರಲಿಲ್ಲ. ಅನೇಕ ವರ್ಷಗಳಿಂದ ಬತ್ತಿ ಹೋಗಿದ್ದಂತಹ ಕೆರೆಗಳು ನಿರಂತರ ಮಳೆಯಿಂದ ತುಂಬಿತುಳುಕುತ್ತಿದ್ದವು. ಹೀಗಾಗಿ ಈ ವರ್ಷವಾದರೂ ನಾವು ತಂಪಾಗಿರಬಹುದು, ಬಿಸಿಲಿನ ಕಾವು ಇರುವುದಿಲ್ಲವೆಂದು ಜನರು ಭಾವಿಸಿದ್ದರು. ಆದರೆ ಅವಧಿಗೂ ಮುನ್ನವೇ ಇದೀಗ ಬಿಸಿಲ ಕಾವು ಎಲ್ಲರನ್ನು ಮೈ ಸುಡುವಂತೆ ಮಾಡಿದೆ.

You may also like

Leave a Comment