Home » Ananth Nag: ಬಿಜೆಪಿಯತ್ತ ಮುಖ ಮಾಡಿದ ಹಿರಿಯ ನಟ ಅನಂತ್ ನಾಗ್! ಇಂದು ಸಂಜೆ ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ಅಧಿಕೃತವಾಗಿ ಪಕ್ಷ ಸೇರ್ಪಡೆ!

Ananth Nag: ಬಿಜೆಪಿಯತ್ತ ಮುಖ ಮಾಡಿದ ಹಿರಿಯ ನಟ ಅನಂತ್ ನಾಗ್! ಇಂದು ಸಂಜೆ ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ಅಧಿಕೃತವಾಗಿ ಪಕ್ಷ ಸೇರ್ಪಡೆ!

by ಹೊಸಕನ್ನಡ
0 comments

Ananth Nag: ಕನ್ನಡದ ಹಿರಿಯ ಚಲನಚಿತ್ರ ನಟ ಮತ್ತು ಮಾಜಿ ಸಚಿವ ಅನಂತ್ ನಾಗ್ (Ananth Nag) ಬಿಜೆಪಿ ಸೇರ್ಪಡೆಯಾಗುವುದು ಬಹುತೇಕ ಖಚಿತವಾಗಿದ್ದು, ಪಕ್ಷದ ರಾಜ್ಯಾದಕ್ಷ ನಳೀನ್ ಕುಮಾರ್ ಕಟೀಲ್, ಸಚಿವರಾದ ಸುಧಾಕರ್, ಮುನಿರತ್ನ ಇವರ ಸಮ್ಮುಖದಲ್ಲಿ ಇಂದು (ಫೆಬ್ರವರಿ 22) ಸಂಜೆ 4.30ಕ್ಕೆ ಅಧಿಕೃತವಾಗಿ ಬಿಜೆಪಿ ಸೇರಲಿದ್ದಾರೆ.

ಈ ಹಿಂದೆ ಜೆ.ಎಚ್. ಪಟೇಲ್(J H Patel) ಸರ್ಕಾರದಲ್ಲಿ ಅನಂತ್ ನಾಗ್ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಶಾಸಕ, ಪರಿಷತ್​ ಸದಸ್ಯರಾಗಿ ಕಾರ್ಯನಿರ್ವಹಿಸಿರುವ ಅನಂತ್ ನಾಗ್, ಜೆ.ಎಚ್. ಪಟೇಲ್ ಸರ್ಕಾರದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 2004ರಲ್ಲಿ ಚಾಮರಾಜಪೇಟೆ(Chamarajapete) ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್​​ನಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು.

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಭರ್ಜರಿ ಸಿದ್ಧತೆ ನಡೆಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಕೇಂದ್ರ ನಾಯಕರು ಕರ್ನಾಟಕದಲ್ಲಿ ಭಾರೀ ಪ್ರಚಾರದಲ್ಲಿ ತೊಡಗಿದ್ದಾರೆ. ನಡ್ಡಾ ಅವರು ಮಂಗಳೂರು, ಉಡುಪಿ, ಚಕ್ಕಮಗಳೂರು ಹಾಸನದ ಕಾರ್ಯಕ್ರಮಗಳಲ್ಲಿ ಸೋಮವಾರ ಹಾಗೂ ಮಂಗಳವಾರ ಭಾಗಿಯಾಗಿದ್ದರು. ಮುಂದಿನ ಸೋಮವಾರ ಮೋದಿ ಅವರು ಶಿವಮೊಗ್ಗಕ್ಕೆ ಭೇಟಿ ನೀಡಲಿದ್ದು, ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಲಿದ್ದಾರೆ.

You may also like

Leave a Comment