Home » ಹಿಟ್ಟು ರುಬ್ಬಲು ಬಂದಿದೆ ಸ್ಪೆಷಲ್‌ ಗ್ರೈಂಡರ್‌ ! ಈ ಗ್ರೈಂಡರ್‌ ಕಂಡು ನೆಟ್ಟಿಗರು ಕಂಪ್ಲೀಟ್‌ ಫಿದಾ!!

ಹಿಟ್ಟು ರುಬ್ಬಲು ಬಂದಿದೆ ಸ್ಪೆಷಲ್‌ ಗ್ರೈಂಡರ್‌ ! ಈ ಗ್ರೈಂಡರ್‌ ಕಂಡು ನೆಟ್ಟಿಗರು ಕಂಪ್ಲೀಟ್‌ ಫಿದಾ!!

0 comments

Desi Jugad : ಬೀಸುವ ಕಲ್ಲಿನಲ್ಲಿ ಅರೆದ ಮಸಾಲೆಗಳಾಗಲಿ, ಇತರ ಧಾನ್ಯಗಳ ಹಿಟ್ಟುಗಳಾಗಲಿ ಇವುಗಳಿಂದ ತಯಾರಿಸಿದ ಖಾದ್ಯದ (food) ರುಚಿಯೇ(taste )ಒಂದು ಪರಮಾನಂದ ನೀಡುತ್ತದೆ. ಹಿಂದಿನ ಕಾಲದಲ್ಲಿ ಚಿಕ್ಕವರಿದ್ದಾಗ ಮಸಾಲೆ ಮತ್ತು ಕಾಳುಗಳನ್ನು ಪುಡಿ ಮಾಡಲು “ಬೀಸುವ ಕಲ್ಲು” ಮಾತ್ರ ಬಳಸಲಾಗುತ್ತಿದ್ದು, ಬಹಳ ರುಚಿ ನೀಡುತ್ತಿರುವುದಕ್ಕೆ ಬೇರೆ ಮಾತಿಲ್ಲ.

ಸದ್ಯ ಈಗಲೂ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಬೀಸುವ ಕಲ್ಲು ನೋಡಲು ಸಿಗಬಹುದು ಆದರೆ ಮಿಕ್ಸಿ, ಗ್ರ್ಯಾಂಡರ್ ಬಂದ ಮೇಲೆ ಅದರ ಉಪಯೋಗ(use )ಮಾಡುವುದು ಬಹಳ ವಿರಳವಾಗಿದೆ. ಸದ್ಯ ಬೀಸುವ ಕಲ್ಲು, ಮಿಕ್ಸಿ, ಗ್ರ್ಯಾಂಡರ್ ಹೊರತಾಗಿ ಈಗ ವ್ಯಕ್ತಿಯೊಬ್ಬರು ತಯಾರಿಸಿರುವ ಜುಗಾಡ್​ ಗ್ರ್ಯಾಂಡರ್​ ಎಲ್ಲೆಡೆ ಸುದ್ದಿಯಲ್ಲಿದೆ.

ಹೌದು ಈಗ ಜುಗಾಡ್​ ಗ್ರ್ಯಾಂಡರ್​ (Desi Jugad) ಬಗ್ಗೆ ವೈರಲ್ ಆಗಿರುವ ವೀಡಿಯೊದಲ್ಲಿ ಕಡಿಯಲು ಬಳಸುತ್ತಿರುವ ಕಲ್ಲನ್ನು ಇಡಲಾಗಿದೆ. ಇದಕ್ಕೆ ಮಧ್ಯದಲ್ಲಿ ಬಾಟಲಿ ಜೋಡಿಸಲಾಗಿದೆ. ಅದನ್ನು ತಿರುಗಿಸಲು ಎರಡು ಗಟ್ಟಿಮುಟ್ಟಾದ ಪೈಪ್‌ಗಳೊಂದಿಗೆ ಮೋಟಾರ್‌ ಜೋಡಿಸಲಾಗಿದೆ. ಅಲ್ಲದೆ, ಸಾಂಪ್ರದಾಯಿಕ ಬೀಸುವ ಕಲ್ಲುಗಳನ್ನು ಕೈಯಾರೆ ತಿರುಗಿಸಲು ಹ್ಯಾಂಡಲ್​ ಇಟ್ಟಿರುವುದನ್ನು ನೋಡಬಹುದು.
ಪೈಪ್​ ತಿರುಗಿದಂತೆ ಹಿಟ್ಟು ಕೆಳಕ್ಕೆ ಇಡುವ ಪಾತ್ರೆಗೆ ಬೀಳುವ ವಿಡಿಯೋ ಇದಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾವಿರಾರು ಜನರ ಮೆಚ್ಚುಗೆಯನ್ನು ಪಡೆದಿದೆ.

ಈ ವಿಡಿಯೋ(Video )ನೋಡಿದಲ್ಲಿ ನೀವು ಸಹ ಬೆರಗಾಗುವುದು ಖಂಡಿತಾ. ಸದ್ಯ ಇಂತಹ ಕಣ್ಮರೆಯಲ್ಲಿರುವ ಪ್ರತಿಭೆಗಳಿಗೆ ಮುಂದೆ ಬೇಡಿಕೆ ಬಂದರೂ ಆಶ್ಚರ್ಯವಿಲ್ಲ.

You may also like

Leave a Comment