Home » ಬಂಟ್ವಾಳ : ವ್ಯಕ್ತಿ ಆತ್ಮಹತ್ಯೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್‌, ಮಡದಿಯಿಂದಲೇ ನಡೆಯಿತು ಮಾಸ್ಟರ್‌ ಪ್ಲ್ಯಾನ್‌ ; ಇಲ್ಲಿದೆ ಕಂಪ್ಲೀಟ್‌ ವಿವರ

ಬಂಟ್ವಾಳ : ವ್ಯಕ್ತಿ ಆತ್ಮಹತ್ಯೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್‌, ಮಡದಿಯಿಂದಲೇ ನಡೆಯಿತು ಮಾಸ್ಟರ್‌ ಪ್ಲ್ಯಾನ್‌ ; ಇಲ್ಲಿದೆ ಕಂಪ್ಲೀಟ್‌ ವಿವರ

0 comments

Bantwala : ಬಂಟ್ವಾಳ : ಇಲ್ಲಿನ ಇಡ್ಕಿದು ಕುಮೇರು ಎಂಬಲ್ಲಿ ವ್ಯಕ್ತಿಯೋರ್ವರು ಅನುಮಾನಾಸ್ಪದವಾಗಿ ಸಾವಿಗೀಡಾದ ಘಟನೆಯೊಂದು ಇತ್ತೀಚೆಗೆ ನಡೆದಿತ್ತು. ಇದನ್ನು ಮೊದಲಿಗೆ ಆತ್ಮಹತ್ಯೆ ಎಂದು ಬಿಂಬಿಸಲಾಗಿತ್ತಾದರೂ ಈಗ ಪೊಲೀಸರ ತನಿಖೆಯಲ್ಲಿ ಇದೊಂದು ಅನೈತಿಕ ಸಂಬಂಧದ ಕಾರಣದಿಂದ ನಡೆದ ಕೊಲೆ ಎಂದು ತಿಳಿದು ಬಂದಿದೆ. ಮೃತ ವ್ಯಕ್ತಿಯ ಪತ್ನಿ ತನ್ನ ಪ್ರಿಯಕರನ ಜೊತೆ ಸೇರಿ ಕೊಲೆ ಷಡ್ಯಂತ್ರ ನಡೆಸಿ, ಕೊಲೆ ಮಾಡಿ, ನಂತರ ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನ ಪಟ್ಟಿದ್ದಾಗಿ ತಿಳಿದು ಬಂದಿದೆ.

ಬಂಟ್ವಾಳ (Bantwala)  ತಾಲೂಕಿನ ವಿಟ್ಲ ಸಮೀಪದ  ಇಡ್ಕಿದು ಕುಮೇರು ಎಂಬಲ್ಲಿ ಅರವಿಂದ ಭಾಸ್ಕರ್‌ (39ವರ್ಷ) ಎಂಬ ವ್ಯಕ್ತಿಯೋರ್ವರೇ ಕೊಲೆಗೀಡಾದ ವ್ಯಕ್ತಿ. ಇವರು ಮಲಗಿದ್ದಲ್ಲೇ ಸಾವಿಗೀಡಾದ ಘಟನೆ ನಡೆದಿತ್ತು. ಈ ಕೃತ್ಯ ಪ್ರಕರಣ ಕಳೆದ 26ರಂದು ನಡೆದಿದ್ದು, ತನ್ನ ಪತಿ ಮೇಲೆ ಏಳುತ್ತಿಲ್ಲ ಎಂದು ಬೆಳಗ್ಗೆ ಸುಮಾರು ಎಂಟರ ಸುಮಾರಿಗೆ ಕರೆ ಮಾಡಿದ ಪತ್ನಿ, ನಂತರ ಆಂಬುಲೆನ್ಸ್‌ ಮೂಲಕ ವಿಟ್ಲ  ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಆಸ್ಪತ್ರೆಗೆ ದಾಖಲು ಮಾಡಿದಾಗ, ಪರಿಶೀಲನೆ ನಡೆಸಿದ ವೈದ್ಯರು ವ್ಯಕ್ತಿ ಮೃತರಾಗಿದ್ದಾರೆ ಎಂದು ಹೇಳಿದ್ದರು. ಆದರೆ ಈ ಸಾವಿನ ಸುತ್ತ ಅನುಮಾನ ಇದ್ದಿದ್ದರಿಂದ, ಸಮಗ್ರ ತನಿಖೆ ನಡೆಸಿದ ಪೊಲೀಸರು ಈಗ ಪತ್ನಿ ಹಾಗೂ ಆಕೆಯ ಪ್ರಿಯಕರ ಯೋಗೀಶ್‌ ಗೌಡ ಎಂಬಾತ ಸೇರಿ ಮಾಡಿದ ಕೊಲೆ ಕೃತ್ಯ ಎಂದು ತಿಳಿದು ಬಂದಿದೆ.

ಮೃತ ಅರವಿಂದ್‌ ಭಾಸ್ಕರ್‌ ಅವರ ಮನೆಗೆ ಆರೋಪಿ ಯೋಗೀಶ್‌ ಗೌಡ ಕೆಲ ಸಮಯಗಳ ಹಿಂದೆ ಸೆಂಟ್ರಿಂಗ್‌ ಕೆಲಸಕ್ಕೆಂದು ಬಂದಿದ್ದ. ಈ ಸಮಯದಲ್ಲಿ ಮೃತರ ಪತ್ನಿ ಜೊತೆ ಆತನಿಗೆ ಸಲುಗೆ ಬೆಳೆದಿತ್ತು ಎನ್ನಲಾಗಿದೆ. ಘಟನೆ ನಡೆದ ದಿನ ಆಶಾಳ ಪ್ರಿಯಕರ ಮನೆಗೆ ಬಂದಿದ್ದು, ಈ ಸಂಬಂಧ ಭಾಸ್ಕರ್‌ ಅಡ್ಡಿಯಾಗುತ್ತಾನೆಂದು ಆತನ ಕತ್ತು ಹಿಸುಕಿ ಕೊಲೆ ಮಾಡಿ, ನಂತರ ಆತ್ಮಹತ್ಯೆ ಎಂದು ಹೇಳಿ, ಜನರನ್ನು ನಂಬಿಸೋಕೆ ಪ್ರಯತ್ನ ಪಟ್ಟಿದ್ದರು. ಪೊಲೀಸರ ನಿಷ್ಪಕ್ಷಪಾತ ತನಿಖೆಯಿಂದ ಹಾಗೂ ವೈದ್ಯರ ವರದಿ ಪ್ರಕಾರ, ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ವರದಿಯಾಗಿದೆ.

 

 

You may also like

Leave a Comment