Home » ದಕ್ಷಿಣ ಕನ್ನಡ: ನಿಲ್ಲದ ಕಾಡಾನೆ ಹಾವಳಿ, ಮತ್ತೆ 7 ಕಾಡಾನೆಗಳು ಪ್ರತ್ಯಕ್ಷ ,ಜನತೆಗೆ ಆತಂಕ

ದಕ್ಷಿಣ ಕನ್ನಡ: ನಿಲ್ಲದ ಕಾಡಾನೆ ಹಾವಳಿ, ಮತ್ತೆ 7 ಕಾಡಾನೆಗಳು ಪ್ರತ್ಯಕ್ಷ ,ಜನತೆಗೆ ಆತಂಕ

by Praveen Chennavara
0 comments

Elephant in Mangalore : ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಸಾಕೋಟೆ ಜಾಲು ಪ್ರದೇಶದಲ್ಲಿ ಮತ್ತೆ 7 ಕಾಡಾನೆ(Elephant in Mangalore)ಗಳು ಜನರಿಗೆ ಕಾಣಸಿಕ್ಕಿದೆ.ಇದರಿಂದ ಜನರ ಆತಂಕ ಮತ್ತೆ ಹೆಚ್ಚಳವಾಗಿದೆ.

ಕಾಡಾನೆ ಹಿಂಡಿನಲ್ಲಿ 7 ಆನೆಗಳು ಇರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ನಾಲ್ಕು ದೊಡ್ಡ ಆನೆಗಳು ಹಾಗೂ ಮೂರು ಮರಿ ಆನೆಗಳು ಹಿಂಡಿನಲ್ಲಿವೆ ಎಂದು ತಿಳಿದುಬಂದಿದೆ.

ಘಟನೆಯ ಕುರಿತು ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು,ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಅಲ್ಲದೇ ರೆಂಜಿಲಾಡಿ ಗ್ರಾಮದ ಖಂಡಿಗ ಎಂಬಲ್ಲಿಯೂ ಒಂಟಿ ಕಾಡಾನೆ ಇತ್ತು ಎಂದು ಮಾಹಿತಿ ಲಭ್ಯವಾಗಿದೆ.

ಕಾಡಾನೆಗಳನ್ನು ಹಿಡಿದು ಸ್ಥಳಾಂತರಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.ರೆಂಜಿಲಾಡಿ ಗ್ರಾಮದ ನೈಲದಲ್ಲಿ ಕಳೆದ ವಾರ ಕಾಡಾನೆ ಇಬ್ಬರನ್ನು ಕೊಂದು ಹಾಕಿತ್ತು.ಬಳಿಕ ಕಾರ್ಯಾಚರಣೆ ನಡೆಸಿ ಒಂದು ಕಾಡಾನೆಯನ್ನು ಸೆರೆ ಹಿಡಿದು ಆನೆ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ.

You may also like

Leave a Comment