Home » ಹಾಡುಹಗಲೇ ಲಾಂಗ್,ಮಚ್ಚು ಹಿಡಿದು ಯುವಕರ ಅಟ್ಟಹಾಸ ,ಕಾನೂನಿನ ಭಯ ಇಲ್ಲದೇ ಪುಂಡಾಟ

ಹಾಡುಹಗಲೇ ಲಾಂಗ್,ಮಚ್ಚು ಹಿಡಿದು ಯುವಕರ ಅಟ್ಟಹಾಸ ,ಕಾನೂನಿನ ಭಯ ಇಲ್ಲದೇ ಪುಂಡಾಟ

by Praveen Chennavara
0 comments

Crime News : ಬೆಂಗಳೂರು : ಜನನಿಬಿಡ ಪ್ರದೇಶದಲ್ಲಿ ಯುವಕರು ಹಾಡುಹಗಲೇ ಲಾಂಗ್‌ ಮಚ್ಚು (Crime News)ಗಳನ್ನು ಹಿಡಿದುಕೊಂಡು ಪುಂಡಾಟ ನಡೆಸುತ್ತಿರುವ ಘಟನೆ ನೆಲಮಂಗಲ ತಾಲೂಕಿನ ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯ ಇಸ್ಲಾಂಪುರ ಗ್ರಾಮದಲ್ಲಿ ನಡೆದಿದೆ.

ಇಸ್ಲಾಂಪುರದ ಅತುಬ್‌ ಎಂಬಾತ ತನ್ನೊಂದಿಗೆ ಮೂರು ಮಂದಿಯನ್ನು ಸೇರಿಸಿಕೊಂಡು ಆತನದೇ ಸಂಬಂಧಿ ಯುವಕನೊಬ್ಬನ ಮೇಲೆ ಮಚ್ಚು,ಲಾಂಗ್ ಬೀಸಿದ್ದಾನೆ.

ಹತ್ತು ಸಾವಿರ ರೂಪಾಯಿಗಳ ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದು ಅದು ಅತಿರೇಕಕ್ಕೆ ಹೋಗಿದೆ.ಇದರಿಂದ ಕುಪಿತಗೊಂಡ ಅತುಬ್‌ ಮತ್ತು ಆತನ ಸ್ನೇಹಿತರು ಹಾಡಹಗಲಲ್ಲೇ ಮಚ್ಚು, ಲಾಂಗ್‌ ಹಿಡಿದು ಅಟ್ಟಹಾಸವನ್ನು ಮೆರೆದಿದ್ದಾರೆ.ಇದು ಸಾರ್ವಜನಿಕರಲ್ಲಿ ಭಯವನ್ನು ಸೃಷ್ಟಿಸಿದೆ.

ಘಟನೆ ಕುರಿತಂತೆ ನೆಲಮಂಗಲ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment