Home » UPI LITE- ಪೇಟಿಎಂನ ಯುಪಿಐ ಲೈಟ್ ಬಳಸಿ, ಪೇಮೆಂಟ್‌ ಇನ್ನೂ ಕ್ಷಿಪ್ರ!

UPI LITE- ಪೇಟಿಎಂನ ಯುಪಿಐ ಲೈಟ್ ಬಳಸಿ, ಪೇಮೆಂಟ್‌ ಇನ್ನೂ ಕ್ಷಿಪ್ರ!

0 comments

New Feature in Paytm : ಇತ್ತೀಚೆಗೆ ಯುಪಿಐ (UPI) ವ್ಯವಸ್ಥೆಯ ಹವಾ ಹೆಚ್ಚಿದೆ. ಈ ವ್ಯವಸ್ಥೆಯಿಂದ ಜನರಿಗೆ ಸಾಕಷ್ಟು ಪ್ರಯೋಜನಗಳಾಗಿವೆ. ಇದರ ಸಹಾಯದಿಂದ ಹೋದ ಕಡೆಯೆಲ್ಲಾ ಕೈಯಲ್ಲಿ ಚಿಲ್ಲರೆ, ನೋಟು ಹಿಡಿದುಕೊಂಡು ಹೋಗುವ ಪ್ರಮೇಯವೇ ಬರುವುದಿಲ್ಲ. ಇಂದಿನ ದಿನದಲ್ಲಿ ಸ್ಮಾರ್ಟ್ ಫೋನ್(smartphone) ಬಳಸದವರು ಅತಿ ವಿರಳ. ಬಳಸುವ ಪ್ರತಿಯೊಬ್ಬರು ಯುಪಿಐ ಪೇಮೆಂಟ್ ಸಿಸ್ಟಮ್(UPI Payment System) ಗೆ ಒಳಪಟ್ಟಿದ್ದಾರೆ. ಫೋನ್ ಪೇ(phone pay), ಪೇಟಿಎಂ(patym), ಗೂಗಲ್ ಪೇ(Google pay) ಇತ್ಯಾದಿ ವ್ಯಾಲಟ್ ಆ್ಯಪ್​ಗಳಿಂದ ಸ್ಕ್ಯಾನ್ ಮಾಡಿ, ಹಣ ನಮೂದಿಸಿ, ಬ್ಯಾಂಕ್ ಕೋಡ್ ಹಾಕಿ, ಪಾವತಿ ಮಾಡಿದರೆ ಆಯಿತು ಅಷ್ಟೇ, ಯಾವುದೇ ತೊಂದರೆ ಇಲ್ಲದೇ ಸರಳ, ಸುಲಭವಾಗಿ ಹಣ ಪಾವತಿಸಬಹುದು.

ಆದರೆ ಈ ಪೇಟಿಎಂ ವ್ಯವಸ್ಥೆಯಲ್ಲಿ ಹಣ ಪಾವತಿಸುವುದು ಇನ್ನೂ ಸುಲಭವಾಗಲಿದೆ. ಹೇಗೆ? ಹೇಗೆಂದರೆ, ಪೇಟಿಎಂ ಇದೀಗ ಯುಪಿಐ ಲೈಟ್ ಫೀಚರ್ (UPI LITE) ಅನ್ನು ಬಿಡುಗಡೆ ಮಾಡಿದೆ. ಇದರಲ್ಲಿ 200 ರೂ ಒಳಗಿನ ಪಾವತಿಗಳನ್ನು ಒಮ್ಮೆಗೇ ಹಲವು ಬಾರಿ ಮಾಡಲು ಸಾಧ್ಯವಾಗುತ್ತದೆ. ಹಾಗೆಯೇ ಪೇಟಿಎಂನ ಯುಪಿಐ ಲೈಟ್​ನಿಂದ ಹಣ ಪಾವತಿಸುವಾಗ ಪಿನ್ ನಂಬರ್ ಕೇಳುವುದಿಲ್ಲ. ಹಾಗಾಗಿ, ಬೇಗನೆ ಪೇಮೆಂಟ್ (New Feature in Paytm) ಮಾಡಬಹುದು.

ಈ ಯುಪಿಐ ಲೈಟ್ ವ್ಯವಸ್ಥೆಯನ್ನು ಪೇಟಿಎಂನಲ್ಲಿ ಮಾತ್ರವೇ ಅಳವಡಿಸಲಾಗಿದೆ. ಇನ್ನುಳಿದ ಫೋನ್ ಪೇ ಹಾಗೂ ಇತರ ಆ್ಯಪ್​ಗಳಲ್ಲೂ ಶೀಘ್ರದಲ್ಲೇ ಈ ಫೀಚರ್ ಲಭ್ಯವಾಗುತ್ತದೆ. ಆದರೆ, ಕೆಲವು ಬ್ಯಾಂಕು(bank)ಗಳು ಮಾತ್ರವೆ ಈ ಯುಪಿಐ ಲೈಟ್​ಗೆ ಬೆಂಬಲ ಕೊಡುತ್ತಿವೆ. ಮುಂದಿನ ದಿನಗಳಲ್ಲಿ ಯುಪಿಐ ವ್ಯವಸ್ಥೆ ಇರುವ ಎಲ್ಲಾ ಬ್ಯಾಂಕುಗಳು ಕೂಡ ಯುಪಿಐ ಲೈಟ್​ಗೂ ತೆರೆದುಕೊಳ್ಳಬಹುದು ಎನ್ನಲಾಗಿದೆ.

ಯುಪಿಐ ಲೈಟ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದರೆ, ಇದು ಸ್ವಲ್ಪ
ಪೇಮೆಂಟ್ ಆ್ಯಪ್​ಗಳ ವ್ಯಾಲಟ್ ಅಕೌಂಟ್ ರೀತಿಯೇ ಕಾರ್ಯನಿರ್ವಹಿಸುತ್ತವೆ. ಯುಪಿಐ ವ್ಯಾಲಟ್​ಗಳಲ್ಲಿ ನೀವು ಎಷ್ಟು ಬೇಕಾದರೂ ಹಣ ಹಾಕಬಹುದು. ಹೆಚ್ಚು ಮೊತ್ತದ ಹಣದ ಪಾವತಿ ಮಾಡಬಹುದು. ಆದರೆ, ಯುಪಿಐ ಲೈಟ್ ವ್ಯಾಲಟ್​ಗೆ ನೀವು ಒಮ್ಮೆ ಗರಿಷ್ಠ 2 ಸಾವಿರ ರೂ ಮಾತ್ರ ಹಾಕಬಹುದು. ದಿನದಲ್ಲಿ ಒಟ್ಟು 4 ಸಾವಿರ ರೂ ಮಾತ್ರ ಈ ವ್ಯಾಲಟ್​ಗೆ ಹಣ ಹಾಕಬಹುದು. ಹಾಗೆಯೇ 200 ರೂಗಿಂತ ಅಧಿಕ ಮೊತ್ತದ ಪೇಮೆಂಟ್ ಮಾಡಲಾಗುವುದಿಲ್ಲ, ಪೇಮೆಂಟ್ ಮೊತ್ತ 200 ರೂ ಮೀರಬಾರದು.

ನೀವು ಪೇಟಿಎಂ ಆ್ಯಪ್ ತೆರೆದರೆ ಅಲ್ಲಿ ಮಧ್ಯದಲ್ಲಿ ಯುಪಿಐ ಲೈಟ್ ಫೀಚರ್ ಇರುತ್ತದೆ. ನೀವು ಆ್ಯಪ್ ಅಪ್​ಡೇಟ್ ಮಾಡಬೇಕು. ಆಗ
ಯುಪಿಐ ಲೈಟ್ ಆಕ್ಟಿವೇಶನ್​ಗೆ ಕೇಳುತ್ತದೆ. ನಂತರ ನೀವು ಸುಲಭವಾಗಿ ಆ್ಯಕ್ಟಿವೇಟ್ ಮಾಡಬಹುದು.

You may also like

Leave a Comment