Home » BSNL ನೀಡುತ್ತಿದೆ 365 ದಿನಗಳ 1095GB ಡೇಟಾ ; ಭರ್ಜರಿ ಆಫರ್‌ ಬಿಡುಗಡೆ ಮಾಡಿದ ಕಂಪನಿ

BSNL ನೀಡುತ್ತಿದೆ 365 ದಿನಗಳ 1095GB ಡೇಟಾ ; ಭರ್ಜರಿ ಆಫರ್‌ ಬಿಡುಗಡೆ ಮಾಡಿದ ಕಂಪನಿ

0 comments

BSNL 1095 GB : ಹಿಂದಿನಿಂದಲೂ ಭಾರೀ ಜನಪ್ರಿಯತೆಯನ್ನು ಪಡೆದ ಟೆಲಿಕಾಂ ಕಂಪನಿಯೆಂದರೆ ಅದು ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಆಗಿದೆ. ಇಲ್ಲಿವರೆಗೂ ಬಿಎಸ್ ಎನ್ ಎಲ್(BSNL) ತನ್ನ ಗ್ರಾಹಕರಿಗೆ ನೂತನ ಆಫರ್ ಗಳನ್ನು ನೀಡುತ್ತಲೇ ಬಂದಿದೆ. ಅತಿ ಕಡಿಮೆ ಬೆಲೆಗೆ ಅತ್ಯುತ್ತಮ ರೀಚಾರ್ಜ್ ಪ್ಲ್ಯಾನ್ ಗಳನ್ನು(Bsnl recharge plans) ಬಿಡುಗಡೆ ಮಾಡುತ್ತಿದೆ.

ಟೆಲಿಕಾಮ್ ಕಂಪನಿಗಳಲ್ಲಿ (Telicom Company)ತನ್ನ ಮುನ್ನಡೆ ಕಾಯ್ದುಕೊಂಡು ದೇಶದ ನಂಬರ್‌ ಒನ್‌ ಸಂಸ್ಥೆಯಾಗಿರುವ ರಿಲಯನ್ಸ್‌ ಜಿಯೋ (Reliance Jio) ಹಾಗೂ ಏರ್ಟೆಲ್( Airtel) ಕೂಡ ಹೊಸ ಹೊಸ ಆಫರ್ ಮೂಲಕ ಗ್ರಾಹಕರ ಮನ ಸೆಳೆಯುತ್ತಿವೆ. ಸದ್ಯ ಬಿಎಸ್ಎನ್ಎಲ್ ಕೂಡ ಅವುಗಳಿಗೆ ಪೈಪೋಟಿ ನೀಡಲು ಅಣಿಯಾಗಿದ್ದು, ಇದೀಗ ಬಿಎಸ್ಎನ್ಎಲ್ ಹೊಸ ಪ್ಲಾನ್ ಅನ್ನು ತನ್ನ ಬಳಕೆದಾರರಿಗೆ ಪರಿಚಯಿಸಿದೆ. ಯಾವೆಲ್ಲಾ ರೀಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡಿದೆ ಎಂಬುದರ ಕಂಪ್ಲೀಟ್ ವಿವರ ಇಲ್ಲಿದೆ.

2999 ರೂ. ರೀಚಾರ್ಜ್ ಪ್ಲ್ಯಾನ್:
ಈ ರೀಚಾರ್ಜ್ ಯೋಜನೆಯ ವ್ಯಾಲಿಡಿಟಿ 395 ದಿನಗಳು ಆಗಿದ್ದು, ಬಳಕೆದಾರರು 3GB ದೈನಂದಿನ ಇಂಟರ್ನೆಟ್ ಡೇಟಾ ಸೇವೆಯನ್ನು ಪಡೆಯುತ್ತೀರಿ. ಅಂದರೆ ಒಟ್ಟು 1095GB ಇಂಟರ್ನೆಟ್ (BSNL 1095 GB) ಬಳಕೆಗೆ ಲಭ್ಯ. ಹಾಗೆಯೇ ಅನಿಯಮಿತ ಧ್ವನಿ ಕರೆ ಸೌಲಭ್ಯ ಹಾಗೂ ಪ್ರತಿದಿನ 100 SMS ಸೌಲಭ್ಯವೂ ಲಭ್ಯವಾಗುತ್ತದೆ. ಅಲ್ಲದೆ, ಈ ಯೋಜನೆಯಲ್ಲಿ PRBT ಮತ್ತು Eros Now 30 ದಿನಗಳವರೆಗೆ ಉಚಿತ ಪ್ರವೇಶವನ್ನು ಪಡೆಯುತ್ತಿದೆ.

2399 ರೂ. ರೀಚಾರ್ಜ್ ಪ್ಲ್ಯಾನ್ :
2399 ರೂ. ಪ್ರಿಪೇಯ್ಡ್ ಯೋಜನೆಯು 365 ದಿನಗಳ ಅವಧಿ ಹೊಂದಿದ್ದು, ಈ ಯೋಜನೆಯಲ್ಲಿ ಬಳಕೆದಾರರು 1 ವರ್ಷದವರೆಗೆ ರೀಚಾರ್ಜ್ ಮಾಡುವ ಅಗತ್ಯವಿಲ್ಲ. ಒಂದು ವರ್ಷದವರೆಗೆ ಈ ರೀಚಾರ್ಜ್ ಪ್ಲ್ಯಾನ್ ನ ಸೌಲಭ್ಯ ಸಿಗುತ್ತದೆ. ಪ್ರತಿದಿನ 2GB ಇಂಟರ್ನೆಟ್ ಡೇಟಾ, ಅನಿಯಮಿತ ಧ್ವನಿ ಕರೆ ಮತ್ತು ಪ್ರತಿದಿನ 100 SMS ಪ್ರಯೋಜನವೂ ಲಭ್ಯವಾಗುತ್ತದೆ. ಅಲ್ಲದೆ, ಈ ಯೋಜನೆಯಲ್ಲಿ ಬಳಕೆದಾರರು 74GB ಹೆಚ್ಚುವರಿ ಡೇಟಾವನ್ನು ಸಹ ಪಡೆಯಲಿದ್ದೀರಿ. ಅಂದ್ರೆ ಒಟ್ಟು 802 GB ಡೇಟಾ ಸೌಲಭ್ಯ ಲಭ್ಯವಾಗುತ್ತದೆ.

1198ರೂ. ರೀಚಾರ್ಜ್ ಪ್ಲ್ಯಾನ್ :
1198ರೂ. ರೀಚಾರ್ಜ್ ಪ್ಲ್ಯಾನ್ ವ್ಯಾಲಿಡಿಟಿ 365 ದಿನಗಳು ಆಗಿದ್ದು,
ಈ ಯೋಜನೆಯಲ್ಲಿ ಬಳಕೆದಾರರಿಗೆ ಪ್ರತಿ ತಿಂಗಳು 3GB ಇಂಟರ್ನೆಟ್ ಸೌಲಭ್ಯ ಲಭ್ಯವಾಗಲಿದೆ. ಧ್ವನಿ ಕರೆ ಮಾಡಲು 300 ನಿಮಿಷಗಳು ಲಭ್ಯವಿದ್ದು, ಪ್ರತಿ ತಿಂಗಳು 30 SMS ಮಾಡಬಹುದಾಗಿದೆ. ಇದು ದೀರ್ಘಾವಧಿಯ ಯೋಜನೆಯಾಗಿದೆ.

You may also like

Leave a Comment