Home » ಅಣ್ಣನ ಹೆಂಡತಿಯ ಜೊತೆ ತಮ್ಮನ ಅನೈತಿಕ ಸಂಬಂಧ ಶಂಕೆ! ಪಂಚಾಯಿತಿ ನೀಡಿತು ಯುವಕನಿಗೆ ಅಗ್ನಿಪರೀಕ್ಷೆ, ನಡೆಯಿತೊಂದು ವಿಲಕ್ಷಣ ಸನ್ನಿವೇಶ!!!

ಅಣ್ಣನ ಹೆಂಡತಿಯ ಜೊತೆ ತಮ್ಮನ ಅನೈತಿಕ ಸಂಬಂಧ ಶಂಕೆ! ಪಂಚಾಯಿತಿ ನೀಡಿತು ಯುವಕನಿಗೆ ಅಗ್ನಿಪರೀಕ್ಷೆ, ನಡೆಯಿತೊಂದು ವಿಲಕ್ಷಣ ಸನ್ನಿವೇಶ!!!

by Mallika
0 comments
Telangana

Telangana :ಹೈದರಾಬಾದ್, ತೆಲಂಗಾಣದಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ಒಬ್ಬ ವ್ಯಕ್ತಿಯು ತನ್ನ ವಿರುದ್ಧದ ಆರೋಪವನ್ನು ಸುಳ್ಳು ಎಂದು ಸಾಬೀತುಪಡಿಸಲು ಉರಿಯುತ್ತಿರುವ ಬೆಂಕಿಯ ಜೊತೆ ಅಗ್ನಿ ಪರೀಕ್ಷೆ ಮಾಡಬೇಕಾಯಿತು. ಅಂದ ಹಾಗೆ ಈ ವ್ಯಕ್ತಿಯ ವಿರುದ್ಧದ ಆರೋಪಗಳು ತುಂಬಾ ಗಂಭೀರತೆಯಿಂದ ಕೂಡಿತ್ತು. ಈತ ತನ್ನ ಸಹೋದರನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಆರೋಪ ಕೇಳಿಬಂದ ಕಾರಣ, ಈ ಬಗ್ಗೆ ಅಣ್ಣ ತನ್ನ ಕಿರಿಯ ಸಹೋದರನ ಮೇಲೆ ಆರೋಪ ಮಾಡಿದ್ದಾನೆ. ಹಾಗಾಗಿ ಈ ವಿಷಯ ಗ್ರಾಮ ಪಂಚಾಯಿತಿ ಮೆಟ್ಟಿಲೇರಿತ್ತು. ಆ ವ್ಯಕ್ತಿಗೆ ತನ್ನ ನಿರಪರಾಧಿ ಎಂದು ಸಾಬೀತುಪಡಿಸಲು ಪಂಚಾಯತಿಯು ಅಗ್ನಿಪರೀಕ್ಷೆಯನ್ನು ನೀಡಿದೆ ಎಂದು ವರದಿಯಾಗಿದೆ. ಹಾಗೆನೇ ಈ ಅಗ್ನಿಪರೀಕ್ಷೆ ವೀಡಿಯೋ ವೈರಲ್‌ ಕೂಡಾ ಆಗಿದೆ.

ಈ ಘಟನೆ ತೆಲಂಗಾಣದ (Telangana) ಬಂಜಾರುಪಲ್ಲಿ ಗ್ರಾಮದಲ್ಲಿ ನಡೆದಿದೆ. ಇಲ್ಲಿ ಪಂಚಾಯತಿ ಆರೋಪಿ ಯುವಕನಿಗೆ ಮೊದಲು ಈ ಅಗ್ನಿಪರೀಕ್ಷೆ ನೀಡಿದೆ. ಇದರೊಂದಿಗೆ ಬೆಂಕಿಯಲ್ಲಿ ಇರಿಸಲಾದ ಬಿಸಿ ರಾಡ್ ಅನ್ನು ಎತ್ತುವಂತೆಯೂ ಆದೇಶ ನೀಡಲಾಯಿತು. ಎಲ್ಲರ ಮುಂದೆ ತಾನು ನಿರಪರಾಧಿ ಎಂದು ಸಾಬೀತುಪಡಿಸಲು ಯುವಕ ಕೂಡಾ ಈ ಅಗ್ನಿಪರೀಕ್ಷೆ ಮಾಡಿದ್ದಾನೆ.

ಈ ವಿಷಯಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವೀಡಿಯೊದಲ್ಲಿ, ಯುವಕನು ಹೊಗೆಯಾಡುತ್ತಿರುವ ಕಲ್ಲಿದ್ದಲಿನ ಸುತ್ತಲೂ ಪ್ರದಕ್ಷಿಣೆ ಹಾಕುತ್ತಿರುವುದನ್ನು ಕಾಣಬಹುದು. ಇದರ ನಂತರ ಅವನು ಬೆಂಕಿಗೆ ಇಳಿಯುತ್ತಿರುವುದನ್ನು ಕಾಣಬಹುದು. ಇದಾದ ನಂತರ, ಯುವಕನು ತನ್ನ ಕೈಗಳಿಂದ ಬೆಂಕಿಗಳ ನಡುವೆ ಇಟ್ಟುಕೊಂಡಿದ್ದ ಬಿಸಿ ಕೆಂಪು ರಾಡ್ ಅನ್ನು ತನ್ನ ಕೈಯಿಂದ ಎತ್ತಿಕೊಂಡು ಬೆಂಕಿಯ ಹೊರಗೆ ಎಸೆದಿರುವುದನ್ನು ಕೂಡಾ ಕಾಣಬಹುದು.

ಅಷ್ಟೇ ಅಲ್ಲ, ಅಗ್ನಿ ಪರೀಕ್ಷೆಯ ನಂತರವೂ ಯುವಕನನ್ನು ತಪ್ಪಿತಸ್ಥ ಎಂದು ಪಂಚಾಯತ್ ಪರಿಗಣಿಸಿದೆ ಎಂದು ಮೂಲಗಳು ತಿಳಿಸಿವೆ. ನಂತರ ಪಂಚಾಯತ್ ಯುವಕನನ್ನು ತನ್ನ ‘ತಪ್ಪು’ ಒಪ್ಪಿಕೊಳ್ಳುವಂತೆ ಒತ್ತಾಯ ಮಾಡಲಾಗಿದೆ ಎಂದು ಹೇಳಲಾಗಿದೆ. ಇದಾದ ನಂತರ, ಯುವಕನ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾಳೆ. ಸದ್ಯ ಈ ವಿಚಾರದಲ್ಲಿ ಹೆಚ್ಚಿನ ಮಾಹಿತಿ ಬರಬೇಕಿದೆ.

You may also like

Leave a Comment