Weird Places : ಹಿಂದಿನ ಕಾಲದಲ್ಲಿ ಹೆಣ್ಣುಮಕ್ಕಳು ಹೊರಗೆ ಹೋಗುವಂತಿರಲಿಲ್ಲ. ಕೆಲಸಕ್ಕೆ ಹೋಗೋದು ಇಲ್ಲವೇ ಇಲ್ಲ. ಕಾಲಕ್ರಮೇಣ ಮಹಿಳೆಯರು(women) ನಾಲ್ಕು ಗೋಡೆಗಳಿಂದ ಹೊರಬಂದು ತಮ್ಮನ್ನು ತಾವು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡರು. ಸರ್ಕಾರ ಕೂಡ ಹೆಣ್ಣು ಮಕ್ಕಳಿಗೆ ಪುರುಷರಷ್ಟೆ ಸಮಾನ ಸ್ಥಾನ ದೊರಕಲು ಹಲವು ಯೋಜನೆ, ನಿಯಮಗಳನ್ನು ಜಾರಿಗೆ ತಂದಿದೆ. ಪ್ರಪಂಚದ ಎಲ್ಲಾ ಪ್ರದೇಶಕ್ಕೂ ಮಹಿಳೆಯರು ಬೇಟಿ ನೀಡುತ್ತಾರೆ. ಆದರೆ, ಮಹಿಳೆಯರಿಗೆ ಈ ಸ್ಥಳಗಳಿಗೆ (Weird Places) ಮಾತ್ರ ನೋ ಎಂಟ್ರೀ!!. ಯಾವುದು ಆ ಸ್ಥಳಗಳು? ಏಕೆ ಎಂಟ್ರಿ ಇಲ್ಲ?
ರಾಜಸ್ಥಾನದ ಕಾರ್ತಿಕೇಯ ದೇವಾಲಯ: ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ದೇವಾಲಯಗಳಿಗೂ ವಿಶೇಷವಾದ ಮಹತ್ವವಿದೆ. ಪ್ರತಿಯೊಂದು ದೇಗುಲಗಳಿಗೂ ಅದರದೇ ಆದ ಹಿನ್ನೆಲೆ ಇದೆ. ಹಾಗೆಯೇ ರಾಜಸ್ಥಾನದ ಕಾರ್ತಿಕೇಯ ದೇವಾಲಯದ(temple) ಬಗ್ಗೆಯೂ ಕೆಲವೊಂದು ನಂಬಿಕೆ ಇದೆ. ಇದು ಅತ್ಯಂತ ವಿಶೇಷವಾದ ದೇವಸ್ಥಾನವಾಗಿದೆ. ಇಲ್ಲಿ ನೆಲೆಸಿರುವ ಕಾರ್ತಿಕೇಯ, ಬ್ರಹ್ಮಚರ್ಯದ ರೂಪವನ್ನು ಇಲ್ಲಿ ಚಿತ್ರಿಸಲಾಗಿದೆ. ದಂತಕಥೆಯ ಪ್ರಕಾರ, ಈ ದೇವಾಲಯಕ್ಕೆ ಮಹಿಳೆ ಪ್ರವೇಶಿಸಿದರೆ ದೇವರ ಶಾಪಕ್ಕೆ ಗುರಿಯಾಗುತ್ತಾಳೆ ಎಂದು ಹೇಳಲಾಗುತ್ತದೆ. ಹಾಗಾಗಿ ಈ ಇಲ್ಲಿ ಮಹಿಳೆಯರಿಗೆ ಪ್ರವೇಶ ಇಲ್ಲ, ನಿಷೇಧಿಸಲಾಗಿದೆ.
ಶಬರಿಮಲೆ (Sabarimala): ಈ ಸ್ಥಳಕ್ಕೆ ಮಹಿಳೆಯರಿಗೆ ಪ್ರವೇಶವಿಲ್ಲ. ಇದು ಹೆಚ್ಚಿನವರಿಗೆ ಗೊತ್ತಿರುವ ವಿಚಾರವೇ. ಶಬರಿಮಲೆ ಅತ್ಯಂತ ಪವಿತ್ರವಾದ ಸ್ಥಳ. ಕೇರಳ(Kerala) ರಾಜ್ಯದ ಅತ್ಯಂತ ಜನಪ್ರಿಯವಾದ ಕ್ಷೇತ್ರಗಳಲ್ಲಿ ಇದೂ ಒಂದು. ಇಲ್ಲಿ ಮುಟ್ಟಾಗುವ ಮಹಿಳೆಯರಿಗೆ ಪ್ರವೇಶವಿಲ್ಲ. 10 ರಿಂದ 50 ವರ್ಷ ವಯೋಮಾನದ ಮಹಿಳೆಯರಿಗೆ ದೇವಸ್ಥಾನ ಪ್ರವೇಶಿಸಲು ಅವಕಾಶವಿಲ್ಲ. ಯಾಕೆ ಗೊತ್ತಾ? ಅಯ್ಯಪ್ಪ ಸ್ವಾಮಿಯು ಬ್ರಹ್ಮಚಾರಿ. ಹಾಗಾಗಿ ಇಲ್ಲಿ ಹೆಣ್ಣುಮಕ್ಕಳಿಗೆ ಪ್ರವೇಶವಿಲ್ಲ. ನಿಷೇಧಿಸಲಾಗಿದೆ.
ಜಪಾನ್ ದೇಶದ ದ್ವೀಪ : ಈ ದೇಶದ ದ್ವೀಪ ಅತ್ಯಂತ ಪವಿತ್ರವಾದುದು ಎನ್ನಲಾಗಿದೆ. ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಈ ದ್ವೀಪ ಸೇರ್ಪಡೆಗೊಂಡಿದೆ. ಶಿಂಟೋ ಸಂಪ್ರದಾಯವು ಬೌದ್ಧಧರ್ಮ, ಟಾವೊ ತತ್ತ್ವ ಮತ್ತು ಚೀನಾ(china)ದ ಮಿಶ್ರಣವಾಗಿದೆ. ಹಾಗಾಗಿಯೇ ಮಹಿಳೆಯರು ಈ ಪವಿತ್ರವಾದ ದ್ವೀಪಕ್ಕೆ ಹೋಗುವುದನ್ನು ನಿಷೇಧಿಸಲಾಗಿದೆ.
ಕ್ರೀಡಾಂಗಣ (Stadium): ಕ್ರೀಡಾಂಗಣದಲ್ಲಿ ಮಹಿಳೆಯರು, ಪುರುಷರು ಇಬ್ಬರೂ ಆಟವಾಡುತ್ತಾರೆ. ನಿಮಗೆಲ್ಲಾ ಗೊತ್ತಿರುವ ಹಾಗೆ ಸ್ಟಾರ್ ಕ್ರಿಕೇಟಿಗರ ಆಟ ನೋಡಲು ಹುಡುಗಿಯರು ಮುಗಿಬೀಳುತ್ತಾರೆ. ಆದರೆ ಆಶ್ಚರ್ಯ ಏನು ಗೊತ್ತಾ? ಇಲ್ಲೊಂದು ಕ್ರೀಡಾಂಗಣದಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ. 1979 ರಲ್ಲಿ ನಡೆದ ಕ್ರಾಂತಿಯ ತರುವಾಯ ಇಲ್ಲಿ ಮಹಿಳೆಯರ ಪ್ರವೇಶವನ್ನು ಸರ್ಕಾರ ನಿಷೇಧಿಸಿದೆ. ಯಾಕೆ? ಆಟದ ವೇಳೆ ಪುರುಷರು ಅನೇಕ ಅಸಭ್ಯ ಭಾಷೆ, ಕೈ ಸನ್ನೆಗಳನ್ನು ಬಳಸುತ್ತಾರೆ. ಹಾಗಾಗಿ ಸರ್ಕಾರವು ಈ ನಿಯಮವನ್ನು ತಂದಿದೆ.
ಮೌಂಟ್ ಅಥೋಸ್ (mount athos): ಈ ವಿಚಾರ ಕೇಳಿದ್ರೆ ಹೀಗೂ ಇದ್ಯಾ? ಅಂತೀರಾ!! ಯಾಕೆ ಗೊತ್ತಾ? ಈ ಸ್ಥಳಕ್ಕೆ ಮಹಿಳೆಯರು ಮಾತ್ರವಲ್ಲ, ಹೆಣ್ಣಾಗಿರುವ ಯಾವುದೇ ಜೀವಿಗೂ ಕೂಡ ಪ್ರವೇಶವಿಲ್ಲ. ವಿಚಿತ್ರವಾಗಿದೆ ಅಲ್ವಾ?? ಇಲ್ಲಿಗೆ 1000 ವರ್ಷಕ್ಕೂ ಹೆಚ್ಚು ಕಾಲದಿಂದ ಮಹಿಳೆಯರ ಪ್ರವೇಶಕ್ಕೆ ನಿಷೇಧವಿದೆಯಂತೆ. ಇಲ್ಲಿ ವಾಸಿಸುವ ಸಾಧುಗಳ ಪ್ರಕಾರ, ಮಹಿಳೆಯರ ಆಗಮನದಿಂದ ಅವರ ಜ್ಞಾನದ ಪಥವು ನಿಧಾನಗೊಳ್ಳುತ್ತಂತೆ. ಹಾಗಾಗಿ ಮೌಂಟ್ ಅಥೋಸ್ ಗೆ ಮಹಿಳೆಯರಿಗೆ ನೋ ಎಂಟ್ರಿ.
ಅಮೆರಿಕಾದ ಬರ್ನಿಂಗ್ ಟ್ರೀ ಕ್ಲಬ್: ಈ ದೇಶದ ಬರ್ನಿಂಗ್ ಟ್ರೀ ಕ್ಲಬ್‌ಗೆ ಮಹಿಳೆಯರಿಗೆ ಪ್ರವೇಶವಿಲ್ಲ. ಯಾಕೆ ಗೊತ್ತಾ? ಈ ಬರ್ನಿಂಗ್ ಟ್ರೀ ಕ್ಲಬ್ US ನಲ್ಲಿರುವ ಒಂದು ಗಾಲ್ಫ್ ಕ್ಲಬ್ (golf club) ಆಗಿದೆ. ಕುಡಿದು ಪುರುಷರು ಇಲ್ಲಿಗೆ ಭೇಟಿ ನೀಡುತ್ತಾರೆ. ಹಾಗೂ ಅಲ್ಲಿನ ಅಧ್ಯಕ್ಷರು, ನ್ಯಾಯಾಧೀಶರು ಗಾಲ್ಫ್ ಆಡಲು ಬರುತ್ತಾರೆ. ಈ ಕಾರಣದಿಂದ ಮಹಿಳೆಯರಿಗೆ ಈ ಸ್ಥಳಕ್ಕೆ ಪ್ರವೇಶ ನಿಷೇಧಿಸಲಾಗಿದೆ.
