IDBI Bank Recruitment :ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲಿಚ್ಚಿಸುವ ಅಭ್ಯರ್ಥಿಗಳಿಗೆ ಐಡಿಬಿಐ ಬ್ಯಾಂಕಿನಲ್ಲಿ (IDBI Bank Recruitment) ಉದ್ಯೋಗವಕಾಶವಿದ್ದು, ಆಸಕ್ತ ಅರ್ಹ ಪದವೀಧರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆ ವಿವರ:
ದೇಶಾದ್ಯಂತ ಬ್ಯಾಂಕಿಂಗ್ ವ್ಯವಸ್ಥೆಯನ್ನು ಹೊಂದಿರುವ ಐಡಿಬಿಐ ಒಟ್ಟು 600 ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ.
ವಿದ್ಯಾಭ್ಯಾಸ:
ಈ ಹುದ್ದೆಗೆ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆಯಿಂದ ಯಾವುದೇ ವಿಷಯದಲ್ಲಿ ಪದವಿಯನ್ನು ಪೂರ್ಣಗೊಳಿಸಿರಬೇಕು.
ವಯೋಮಿತಿ:
ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 21ವರ್ಷವಾಗಿದ್ದು, ಗರಿಷ್ಠ ವಯೋಮಿತಿ – 30 ವರ್ಷ. ಜನವರಿ 1, 2023ಕ್ಕೆ ಒಳಗೆ ಅವರ ವಯೋಮಿತಿ 30ವರ್ಷ ತುಂಬಿರಬೇಕು. ಇನ್ನು ಒಬಿಸಿ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ 3 ವರ್ಷ ಸಡಿಲಿಕೆ ಮಾಡಿದ್ದು, ಪ. ಜಾ, ಪ.ಪಂ, ಇಸಿಒ, ಎಸ್ಎಸ್ಸಿಒ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.
ಅರ್ಜಿ ಶುಲ್ಕ:
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭ್ಯರ್ಥಿಗಳಿಗೆ 200 ರೂ. ನಿಗದಿ ಮಾಡಿದ್ದು, ಇತರೆ ಅಭ್ಯರ್ಥಿಗಳಿ 1000 ರೂ. ನಿಗದಿ ಮಾಡಲಾಗಿದೆ. ಈ ಅರ್ಜಿ ಶುಲ್ಕಗಳನ್ನು ಅಭ್ಯರ್ಥಿಗಳು ಆನ್ಲೈನ್ ಮೂಲಕ ಸಲ್ಲಿಕೆ ಮಾಡಬಹುದಾಗಿದೆ.
ಆಯ್ಕೆ ವಿಧಾನ:
ಈ ಹುದ್ದೆಗಳಿಗೆ ನಾಲ್ಕು ವಿಧದಲ್ಲಿ ಆಯ್ಕೆ ನಡೆಸಲಾಗುವುದು. ಆನ್ಲೈನ್ ಪರೀಕ್ಷೆ, ದಾಖಲಾತಿ ಪರಿಶೀಲನೆ, ವೈಯಕ್ತಿಕ ಸಂದರ್ಶನ ಬಳಿಕ ವೈದ್ಯಕೀಯ ತಪಾಸಣೆಗೆ ಒಳಗಾಗಿಸಲಾಗುವುದು.
ಅರ್ಜಿ ಸಲ್ಲಿಕೆ ದಿನಾಂಕ:
ಈ ಹುದ್ದೆಗಳಿಗೆ ಫೆ 17ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಈ ಅರ್ಜಿ ಸಲ್ಲಿಕೆಯ ಕೊನೆ ದಿನಾಂಕವನ್ನು ಮಾರ್ಚ್ 12ರವರೆಗೆ ವಿಸ್ತರಿಸಲಾಗಿದೆ.
ಅಧಿಕೃತ ವೆಬ್ ಸೈಟ್ : idbibank.in
