High temperature: ಬೇಸಿಗೆ ಆರಂಭದಲ್ಲೇ ಜನರು ಬಿಸಿಲಿಗೆ ಪರಿತಪಿಸುತ್ತಿದ್ದಾರೆ. ಬರುವ ಮಾರ್ಚ್ 3ನೇ ವಾರದಲ್ಲಿ ದೇಶಾದ್ಯಂತ ಉಷ್ಣಾಂಶದಲ್ಲಿ ಮತ್ತಷ್ಟು ಏರಿಕೆ ಕಂಡುಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ತಜ್ಞರು ಅಂದಾಜಿಸಿದ್ದರು. ಅದರಂತೆ ಈ ನಡುವೆ ಬೇಸಿಗೆಯ ಧಗೆ ಏರಿಕೆಯಾಗುತ್ತಿದ್ದು
ಕರ್ನಾಟಕದಲ್ಲಿ (karnataka )ದಕ್ಷಿಣ ಕನ್ನಡ (Dakshina kannada )ಮತ್ತು ಉಡುಪಿ (udupi )ಜಿಲ್ಲೆಗಳಲ್ಲಿ ದಿನದಿಂದ ದಿನಕ್ಕೆ ಗರಿಷ್ಠ ಉಷ್ಣಾಂಶ ಏರಿಕೆ ಕಾಣುತ್ತಿದ್ದು, ಜನರನ್ನು ಮತ್ತಷ್ಟು ಕಂಗೆಡಿಸುತ್ತಿದೆ.
ಪ್ರಸ್ತುತ ಭಾರತೀಯ (india ) ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಮಂಗಳೂರಿನಲ್ಲಿ ಗುರುವಾರ ಅಂದರೆ ಮಾರ್ಚ್ 2ರಂದು 36.9 ಡಿ. ಸೆ ಗರಿಷ್ಠ ಉಷ್ಣಾಂಶ ದಾಖಲಾಗಿದ್ದು, ಇದು ದೇಶದಲ್ಲಿಯೇ ಅತ್ಯಧಿಕವಾಗಿದೆ (High temperature) ಎನ್ನಲಾಗಿದೆ.
ಅದಲ್ಲದೆ ಈ ಉಷ್ಣಾಂಶ ಹವಾಮಾನ ಪ್ರತೀ ವರ್ಷಕ್ಕಿಂತ 3 ಡಿ.ಸೆ ಹೆಚ್ಚಳವಾಗಿದ್ದು, ಇದೇ ವೇಳೆ 23.8 ಡಿ.ಸೆ ಕನಿಷ್ಠ ತಾಪಮಾನ ದಾಖಲಾಗಿದ್ದು, 1 ಡಿ.ಸೆ ಏರಿಕೆಯಾಗಿದೆ ಎಂದು ತಿಳಿದು ಬಂದಿದೆ.
ಸದ್ಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ದಿನದಿಂದ ದಿನಕ್ಕೆ ಗರಿಷ್ಠ ಉಷ್ಣಾಂಶ ಏರಿಕೆ ಕಾಣುತ್ತಿದ್ದು, ದಾಖಲೆಯತ್ತ ಸಾಗುತ್ತಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
