Beauty Parlour : ಸದಾ ಚೆನ್ನಾಗಿ ಕಾಣಬೇಕು, ಹೊರಗೆ ಹೋದಾಗ ಆಕರ್ಷವಾಗಿ ಎಲ್ಲರ ಗಮನ ಸೆಳೆಯಬೇಕು ಎಂಬುದು ಪ್ರತಿಯೊಬ್ಬರು ಬಯಸುವುದು ಸಹಜ. ಅದರಲ್ಲೂ ಮದುವೆ ಅಂದಾಗ ಬ್ಯೂಟಿಪಾರ್ಲರ್ ( Beauty Parlour)ಗಳಿಗೆ ಮುಖ ಮಾಡದವರೇ ಇಲ್ಲ..ಫೇಶಿಯಲ್(Facial) ಹೇರ್ಕಟ್(Hair Cut) ಹೇರ್ ಸ್ಪಾ, ಐಬ್ರೋಸ್, ಹೀಗೆ ಯುವತಿಯರು ಅಂದವಾಗಿ ಕಾಣಿಸೋದಕ್ಕಾಗಿ ಮಾಡಿಕೊಳ್ಳುವುದಕ್ಕೆ ಮುಂದಾಗುತ್ತಾರೆ. ಅದರಲ್ಲೂ ಮದುವೆ ಹತ್ತಿರ ಬಂದ ಸಮಯದಲ್ಲಿ ಪಾರ್ಲರ್ಗಳತ್ತ ಹೋಗುವುದು ಸಖತ್ ಡೇಂಜರ್ ಬಹುತೇಕ ಮಂದಿಗೆ ಈ ವಿಚಾರ ತಿಳಿದಿರಬಹುದು. ಇದೀಗ ಹಾಸನದ ಅರಸೀಕೆರೆಯಲ್ಲಿ ಮದುವೆಯಾಗಲು ಸಿದ್ದತೆ ನಡೆಸುತ್ತಿದ್ದ ಯುವತಿಯೊಬ್ಬರು ಬ್ಯೂಟಿಪಾರ್ಲರ್ಗೆ ಹೋಗಿ ಮುಖವನ್ನು ಕೆಡಿಸಿಕೊಂಡು ಅರ್ಧಕ್ಕೆ ಮದುವೆಯೇ ಕ್ಯಾನ್ಸಲ್ ಆದಾ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.
ಮದುವೆ ಎಂದಣಗಿತ್ತಿಯಂತೆ ಸಿಂಗಾರಗೊಳ್ಳಲು ಆಕೆ ಹಾಸನದ ಅರಸೀಕೆರೆಯ ನಗರದಲ್ಲಿರುವ ಗಂಗಾಶ್ರೀ ಹರ್ಬಲ್ ಬ್ಯೂಟಿ ಪಾರ್ಲರ್ ಅಂಡ್ ಸ್ಪಾಪ ಎಂಬ ಹೆಸರಿನ ಪಾರ್ಲರ್ ತೆರಳಿದ್ದರು. ಆಗ ಅವರಿಗೆ ಹೊಸ ರೀತಿಯ ಮೇಕಪ್ ಮಾಡೋದಕ್ಕೆ ಮುಂದಾಗಿ ಭಾರೀ ಅವಾಂತರವನ್ನೆ ಸೃಷ್ಟಿಕೊಂಡಿದ್ದಾರೆ. ಆಕೆ ಹೊಸ ಬಗೆಯ ಮೇಕಪ್ ಮಾಡುವುದಾಗಿ ಹೇಳಿ ಸ್ಟೀಮ್ ನೀಡಿದ್ದಾರೆ. ಇದಾದ ಬಳಿಕ ವಧುವಿನ ಮುಖ ಊದಿಕೊಂಡು, ಸುಟ್ಟುಹೋಗಿದ್ದು ನೋವುದಕ್ಕೂ ಸಾಧ್ಯವಾಗದಂತೆ ಕಾಣಿಸಿಕೊಂಡಿದ್ದಾರೆ. ಆಕೆಯನ್ನು ಕಂಡ ವರ ಹಾಗೂ ಕುಟುಂಬಸ್ಥರಿಗೆ ಶಾಕ್ ಆಗಿದ್ದು ಮದುವೆಯೇ ಬೇಡ ಎಂದಿದ್ದಾರೆ.
ಕಳೆದ 10 ದಿನಗಳ ಹಿಂದೆ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಇದರಿಂದ ಸಂಭ್ರಮ ಸಡಗರಲ್ಲಿದ್ದ ವಧುವಿನ ಮನೆಮಂದಿಯೆಲ್ಲ ಬೇಸರಗೊಂಡಿದ್ದಾರೆ. ಅರ್ಧಕ್ಕೆ ಮದುವೆ ಮನೆಯೇ ನಿರಾಸಮೌನ ಆವರಿಸಿದ್ದು ಕೂಡಲೇ ಕುಟುಂಬಸ್ಥರು ಬ್ಯೂಟಿ ಪಾರ್ಲರ್ ಮಾಲಕರಾದ ಗಂಗಾ ಎಂಬವರಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಲ್ಲದೇ ಸ್ಥಳೀಯ ಠಾಣೆಗೆ ದೂರು ನೀಡಿದ್ದಾರೆ. ವಿಚಾರ ಬಳಿಕ ಕ್ರಮ ಕೈಗೊಳ್ಳುವಂತೆ ವಧುವಿನ ಕುಟುಂಬಸ್ಥರಿಗೆ ಪೊಲೀಸರು ಮನವಿ ಮಾಡಿದ್ದಾರೆ. ಕೇವಲ ಪಾರ್ಲರ್ ಅವಾಂತರದಿಂದ ಒಬ್ಬ ಹೆಣ್ಣು ಮಗಳ ಜೀವನೆ ಹಾಳಾಯ್ತು ಎಂದು ಕುಟುಂಬಸ್ಥರು ಅಳಲು ತೋಡಿಕೊಳ್ಳುತ್ತಿದ್ದಾರೆ. ಈ ಘಟನೆ ಬೆಳಕಿಗೆ ಬಂದ ಬಳಿಕ ಅಪ್ಪಿತಪ್ಪಿಯೂ ಯುವತಿಯರು ಇನ್ನು ಮುಂದೆ ಪಾರ್ಲರ್ ತೆರಳುವ ಮುನ್ನ ಎಚ್ಚರ ವಹಿಸುವುದು ಅವಶ್ಯಕ ಅನ್ನೋದನ್ನು ಅರಿತುಕೊಳ್ಳಬೇಕಾಗಿದೆ.
