Home » ಕನ್ನಡಿಯಲ್ಲಿ ಎದೆಯ ಭಾಗವನ್ನೇ ದುರುಗುಟ್ಟಿ ನೋಡ್ತಿದ್ದ ಉಬರ್‌ ಡ್ರೈವರ್‌ ವಿರುದ್ಧ ದೂರು ನೀಡಿದ ಪತ್ರಕರ್ತೆ!

ಕನ್ನಡಿಯಲ್ಲಿ ಎದೆಯ ಭಾಗವನ್ನೇ ದುರುಗುಟ್ಟಿ ನೋಡ್ತಿದ್ದ ಉಬರ್‌ ಡ್ರೈವರ್‌ ವಿರುದ್ಧ ದೂರು ನೀಡಿದ ಪತ್ರಕರ್ತೆ!

0 comments

Harassment by Uber driver :ದಿನೇ ದಿನೇ ಹೆಣ್ಣುಮಕ್ಕಳ ಮೇಲಾಗುತ್ತಿರುವ ದೌರ್ಜನ್ಯದ ಪ್ರಕರಣಗಳು ಹೆಚ್ಚಾಗುತ್ತಿದೆ. ಮಹಿಳೆಯರ(women) ಜೊತೆ ಅಸಭ್ಯವಾಗಿ ವರ್ತಿಸುವಂತಹ ಕಾಮುಕರ ಸಂಖ್ಯೆ ಹೆಚ್ಚಾಗಿದೆ. ಇಂತಹ ಪ್ರಕರಣಗಳು ಹಲವೆಡೆ ತಲೆ ಎತ್ತುತ್ತಿವೆ. ಸಂತ್ರಸ್ತ ಮಹಿಳೆಯರು ನ್ಯಾಯಕ್ಕಾಗಿ ಕಾನೂನಿನ ಮೊರೆ‌ಹೋಗುತ್ತಿದ್ದಾರೆ. ಇದೀಗ ಅಂತಹದೇ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಮಹಿಳೆಯೊಬ್ಬರು ಡ್ರೈವರ್ ಮಿರರ್‌ನಲ್ಲಿ ತನ್ನ ಸ್ತನ (Breast)ವನ್ನೇ ನೋಡುತ್ತಿದ್ದ ಎಂದು ಉಬರ್ ವಿರುದ್ಧ (Harassment by Uber driver) ಪೊಲೀಸರಿಗೆ ದೂರು ನೀಡಿದ್ದಾರೆ.

ಓಲಾ(ola), ಊಬರ್‌ನಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವಂತಹ ಪ್ರಕರಣಗಳು ಹೆಚ್ಚಾಗಿವೆ. ಅಂತೆಯೇ ಇದೀಗ ಮಹಿಳಾ ಪತ್ರಕರ್ತೆಯೊಬ್ಬರಿಗೆ (Journalist) ಉಬರ್ ಆಟೋ ರಿಕ್ಷಾ ಚಾಲಕ ಲೈಂಗಿಕ ಕಿರುಕುಳ ನೀಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಆಟೋ ಚಾಲಕನನ್ನು ವಿನೋದ್ ಕುಮಾರ್ ಎಂದು ಗುರುತಿಸಲಾಗಿದ್ದು, ಆತನ ವಿರುದ್ಧ ಮಹಿಳೆ ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ.

ಪತ್ರಕರ್ತೆ ರಿಕ್ಷಾ ಚಾಲಕನ ಅನುಚಿತ ವರ್ತನೆಯ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ (Social media) ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಚಾಲಕ ಆಟೋದ ಸೈಡ್ ಮಿರರ್‌ನಲ್ಲಿ ಮಹಿಳೆಯ ಸ್ತನ ನೋಡುತ್ತಿರುವ ದೃಶ್ಯ ಸೆರೆಯಾಗಿದೆ. ವಿಡಿಯೋದ ಜೊತೆಗೆ ನಡೆದ ಘಟನೆಯನ್ನು ಹಂಚಿಕೊಂಡಿದ್ದು, ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಪ್ರಮುಖ ಮಾಧ್ಯಮ ಸಂಸ್ಥೆಯೊಂದರಲ್ಲಿ ಪತ್ರಕರ್ತೆಯಾಗಿರುವ ಮಹಿಳೆ ನ್ಯೂ ಫ್ರೆಂಡ್ಸ್ ಕಾಲೋನಿಯಲ್ಲಿರುವ ತನ್ನ ನಿವಾಸದಿಂದ ಮಾಳವೀಯ ನಗರದಲ್ಲಿರುವ ತನ್ನ ಸ್ನೇಹಿತನ ಮನೆಗೆ ಉಬರ್ ಆಟೋ(auto) ಹತ್ತಿ ಪ್ರಯಾಣಿಸುತ್ತಿದ್ದಳು. ಈ ವೇಳೆ ಚಾಲಕ ರಿಕ್ಷಾದ ಮಿರರ್‌ನಲ್ಲಿ ಆಕೆಯ ಸ್ತನವನ್ನೇ (Breast) ಪದೇ ಪದೇ ನೋಡುತ್ತಿರುವುದನ್ನು ಮಹಿಳೆ ಗಮನಿಸಿದ್ದಾರೆ. ಈ ವೇಳೆ ಆಕೆ ಉಬರ್‌ನ ಸುರಕ್ಷತಾ ವೈಶಿಷ್ಟ್ಯವನ್ನು ಬಳಸಲು ಪ್ರಯತ್ನಿಸಿದ್ದಾರೆ, ಆದರೆ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಮಹಿಳೆ ತಿಳಿಸಿದ್ದಾರೆ.

ಅಲ್ಲದೆ, ಮಹಿಳೆ ಚಾಲಕನಿಗೆ ಆತನ ವರ್ತನೆಯ ಬಗ್ಗೆ ಪ್ರಶ್ನಿಸಿದ್ದಾರೆ. ಹಾಗೂ ದೂರು ನೀಡುವುದಾಗಿ ಹೇಳಿದ್ದಾರೆ. ಇದಾವುದಕ್ಕೂ ತಲೆಕೆಡಿಸಿಕೊಳ್ಳದ ಆತ, ತನ್ನ ಚಾಳಿ ಮುಂದುವರೆಸಿದ್ದಾರೆ. ಈ ವೇಳೆ
ಮಹಿಳೆ ಘಟನೆಯ ವೀಡಿಯೊವನ್ನು ಚಿತ್ರೀಕರಿಸಿದ್ದು, ಅದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ನಗರ ಪೊಲೀಸರು ಕ್ರಮ ಕೈಗೊಂಡಿದ್ದು, ಕ್ಯಾಬ್ ಅಗ್ರಿಗೇಟರ್ ಸಂಸ್ಥೆಗೆ ನೋಟಿಸ್ ನೀಡಿದ್ದಾರೆ.

You may also like

Leave a Comment