Home » Post Office : ಉಳಿತಾಯ ಯೋಜನೆಯ ಕುರಿತು ಮಾಹಿತಿ, ವಿಧಿಸುವ ಶುಲ್ಕ ಎಷ್ಟು? ಇಲ್ಲಿದೆ ಮಾಹಿತಿ

Post Office : ಉಳಿತಾಯ ಯೋಜನೆಯ ಕುರಿತು ಮಾಹಿತಿ, ವಿಧಿಸುವ ಶುಲ್ಕ ಎಷ್ಟು? ಇಲ್ಲಿದೆ ಮಾಹಿತಿ

399 comments
Post Office Saving Account

Post office Saving Account: ಸಾಮಾನ್ಯವಾಗಿ ಪ್ರತಿಯೊಬ್ಬರು ಯಾವುದಾದರೂ ಒಂದು ಕ್ಷೇತ್ರದಲ್ಲಿ ಉಳಿತಾಯ ಮಾಡೋದು ಸಹಜ. ಸರ್ಕಾರಿ (Governament) ಮತ್ತು ಖಾಸಗಿ ವಲಯದ ಬ್ಯಾಂಕ್‌ (Private Bank), ಪೋಸ್ಟ್ ಆಫೀಸ್(Post Office), ಇನ್ಸೂರೆನ್ಸ್(insurence) ಕಂಪನಿಗಳಲ್ಲಿ ಅಥವಾ ಇನ್ನಿತರ ಹಣಕಾಸಿನ ವ್ಯವಹಾರಗಳಲ್ಲಿ ಠೇವಣಿ(Deposit) ಇಟ್ಟು, ನಿಶ್ಚಿತ ಲಾಭ ಪಡೆಯುವ ಸೌಲಭ್ಯ ಪಡೆಯುತ್ತಾರೆ. ಇವುಗಳಲ್ಲಿ ಪೋಸ್ಟ್ ಆಫೀಸ್(Post Office) ನ ಯೋಜನೆಗಳು ಜನರಿಗೆ ಪ್ರಯೋಜನಕಾರಿಯಾಗಿದೆ.

ಹೌದು, ಹೂಡಿಕೆ(Investment) ಮಾಡಲು ಉಳಿತಾಯ (Savings) ಮಾಡಬೇಕಾಗುತ್ತದೆ. ಇದು ಭವಿಷ್ಯದಲ್ಲಿ ಎದುರಾಗುವ ಆರ್ಥಿಕ ಮುಗ್ಗಟ್ಟಿನಿಂದ ಪಾರಾಗಲು ನೆರವಾಗುತ್ತದೆ. ಅಷ್ಟೇ ಅಲ್ಲದೆ, ವೃದ್ಧಾಪ್ಯದಲ್ಲಿ ಹಣಕಾಸಿನ(Finance) ಅಗತ್ಯತೆಯನ್ನು ಪೂರೈಸಲು ಕೂಡ ಉಳಿತಾಯ(Savings) ನೆರವಾಗುತ್ತದೆ. ಅಂಚೆ ಕಚೇರಿಯು ಇತರ ಸಂಸ್ಥೆಗಳಂತೆ ಹಲವಾರು ಯೋಜನೆಗಳನ್ನು ಹೊಂದಿದೆ. ಹಾಗೇ ನಿಮ್ಮ ಹೂಡಿಕೆಯೂ ಸುರಕ್ಷಿತವಾಗಿರುತ್ತದೆ. ಸದ್ಯ ಪೋಸ್ಟ್ ಆಫೀಸ್ ನಲ್ಲಿ ಉಳಿತಾಯ ಖಾತೆ(Post office Saving Account)ಯ ಬಗ್ಗೆ, ಉಳಿತಾಯ ಯೋಜನೆಗೆ ವಿಧಿಸುವ ಶುಲ್ಕಗಳ ಕುರಿತ ಮಾಹಿತಿ ಇಲ್ಲಿದೆ.

ಅಂಚೆ ಕಚೇರಿಯಲ್ಲಿ ಹಲವಾರು ಜನರು ಹೂಡಿಕೆ ಮಾಡುತ್ತಾರೆ. ಇಲ್ಲಿ ಹೂಡಿಕೆ ಮಾತ್ರವಲ್ಲದೆ, ಉಳಿತಾಯ ಖಾತೆಯನ್ನು ತೆರೆಯುವ ಯೋಜನೆಗಳು ಕೂಡಾ ಇದೆ. ಸಾಮಾನ್ಯ ಬ್ಯಾಂಕ್‌ ಗಳ ಹಾಗೆಯೇ ಅಂಚೆ ಕಚೇರಿಯ ಉಳಿತಾಯ ಖಾತೆಗೆ ಗ್ರಾಹಕರು ಹೂಡಿಕೆ ಮಾಡಿ, ಹಣ ವಿತ್‌ಡ್ರಾ ಮಾಡಿಕೊಳ್ಳಬಹುದು. ಇದು ಸುರಕ್ಷಿತವಾದ ಯೋಜನೆಯೂ ಹೌದು, ಹಾಗೆಯೇ ಅಂಚೆ ಕಚೇರಿಯ ಉಳಿತಾಯ ಯೋಜನೆಗೆ ಶುಲ್ಕಗಳನ್ನೂ ವಿಧಿಸಲಾಗುತ್ತದೆ. ಯಾವುದಕ್ಕೆ, ಎಷ್ಟು ಶುಲ್ಕ? ಇದರ ಕಂಪ್ಲಿಟ್ ವಿವರ ಇಲ್ಲಿದೆ.

ಶುಲ್ಕದ ಮಾಹಿತಿ:

• ಹರಿದ ಪಾಸ್‌ಬುಕ್‌- ಪ್ರತಿ ಪಾಸ್‌ಬುಕ್‌ಗೆ 10 ರೂ. ಆಗಿದೆ.
• ಡುಪ್ಲಿಕೇಟ್ ಪಾಸ್‌ಬುಕ್ -50 ರೂ. ಪಾವತಿಸಬೇಕು.
• ಚೆಕ್‌ಬುಕ್- 10 ರಜೆಗಳು ಉಚಿತ, ಅದಾದ ಬಳಿಕ 2 ರೂ. ಶುಲ್ಕ
• ಚೆಕ್‌ ಬೌನ್ಸ್- 100 ರೂ.
• ಅಕೌಂಟ್ ವರ್ಗಾವಣೆ- 100 ರೂ.
• ಅಕೌಂಟ್ ಸ್ಟೇಟ್‌ಮೆಂಟ್ ಅಥವಾ ಡೆಪಾಸಿಟ್ ರೆಸಿಪ್ಟ್ ಇಶ್ಯು -20 ರೂ.
• ನಾಮಿನೇಷನ್ ಬದಲಾವಣೆ ಮತ್ತು ನಿಷ್ಕ್ರೀಯ- 50 ರೂ.
• ಪ್ಲೆಡ್ಜಿಂಗ್ ದಿ ಅಕೌಂಟ್- 100 ರೂ. ಶುಲ್ಕ ಇರಲಿದೆ.

You may also like

Leave a Comment