Home » ಅತಿಯಾದ ಡಿಜೆ ಶಬ್ದಕ್ಕೆ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಪ್ರಾಣಬಿಟ್ಟ ವರ.!? ಆತನಿಗೆ ಆಗಿದ್ದೇನು ಗೊತ್ತಾ?

ಅತಿಯಾದ ಡಿಜೆ ಶಬ್ದಕ್ಕೆ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಪ್ರಾಣಬಿಟ್ಟ ವರ.!? ಆತನಿಗೆ ಆಗಿದ್ದೇನು ಗೊತ್ತಾ?

0 comments

Patna :ಪಾಟ್ನಾ: ಮದುವೆಯಲ್ಲಿ ಅತಿಯಾದ ಡಿಜೆ ಶಬ್ದಕ್ಕೆ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ವರ ಸಾವನ್ನಪ್ಪಿದ ದುರಂತ ಘಟನೆ ಬಿಹಾರದ (patna) ಸಿತಾರ್ಮಹಿ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.

ಮದುವೆ ಅಂದಾಕ್ಷಣ ಮೋಜು, ಮಸ್ತಿ ಎಲ್ಲವೂ ಇದೆ. ಒಬ್ಬರನ್ನೊಬ್ಬರು ಕಾಲೆಳೆಯುತ್ತಾ ಸಂತೋಷದಿಂದ ವಿವಾಹ ಮಹೋತ್ಸವವನ್ನುಆಚರಿಸಲಾಗುತ್ತದೆ. ವಧು ಮತ್ತು ವರನಿಗೆ ಕಾಲೆಳೆಯುವುದರ ಜತೆಗೆ ಹಾರ ಹಾಕುವ ಸಂದರ್ಭದಲ್ಲಿಯೂ ಕಾಡಿಸುವ ಕೆಲವೊಂದು ವಿಚಾರಗಳು ನಿಮಗೂ ತಿಳಿದಿರಬಹುದು. ಇದೀಗ ಹಾರಹಾಕುವ ಆಚರಣೆ ಮುಗಿದ ಬಳಿಕ ಜೋರಾಗಿ ಡಿಜೆ ಸ್ಯಾಂಗ್‌ ಹಾಕಲಾಗಿತ್ತು. ಈ ವೇಳೆ ವರ ಅತಿಯಾದ ಡಿಜೆ ಶಬ್ಧ ಕೇಳುತ್ತಿದ್ದಂತೆ ಕುಸಿದುಬಿದ್ದನು. ತಕ್ಷಣ ಕುಟುಂಬಸ್ಥರು ಗಾಬರಿಗೊಂಡು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಹೃದಯಾಘಗೊಂಡು ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಮದುಮಗ ಸುರೇಂದ್ರ ಕುಮಾರ್ ಮೃತ ಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಡಿಜೆ ಸ್ಯಾಂಗ್‌ ಬಳಸುವುದು ಸಾಮಾನ್ಯವಾಗಿದೆ. ಡಿಜೆ ಅತಿಯಾದ ಧ್ವನಿಯಲ್ಲಿ ನಡೆಯುತ್ತಿರುವ ಬಗ್ಗೆ ಯುವಕ ಆರಂಭದಲ್ಲೇ ಅಸಮಾಧಾನ ವ್ಯಕ್ತಪಡಿಸಿದ್ದರು. ವಾಲ್ಯೂಮ್ ಅನ್ನು ಕಡಿಮೆ ಮಾಡಲು ಅವರನ್ನು ಹೇಳುತ್ತಿದ್ದಂತೆ ವರ ಸುರೇಂದ್ರ ಕುಮಾರ್ ಕುಸಿದು ಬಿದ್ದರು. ಸಾವಿಗೆ ಮುನ್ನ ವಧು ಮತ್ತು ವರರಿಗೆ ಹೂಮಾಲೆಯನ್ನು ಹಸ್ತಾಂತರಿಸುವ ಆಚರಣೆಯನ್ನು ನಡೆಸಲಾಗಿತ್ತು. ಈ ಘಟನೆ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಆಕ್ರಂಧನ ಮುಗಿಲು ಮುಟ್ಟಿದೆ.

ಈ ಘಟನೆ ಬಗ್ಗೆ ಗಂಭೀರವಾಗಿ ಪರಿಶೀಲಿಸುವುದಾಗಿ ಜಿಲ್ಲಾಡಳಿತ ಹೇಳಿದೆ. ಮದುವೆ ಮಂಟಪದ ಸಿಬ್ಬಂದಿಯೂ ಓಡೋಡಿ ಬಂದು ನಾನು ಹಲವಾರು ಬಾರಿ ನಿಮಗೆ ಹೇಳಿದ್ದೆ, ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ. ಸಾಮಾಜಿಕ ಕಾರ್ಯಕರ್ತ ಡಾ.ಸಂಜೀವ್ ಕುಮಾರ್ ಅವರು ಡಿಜೆ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದಿದ್ದಾರೆ. ಡಿಜೆಯ ಅತಿಯಾದ ಶಬ್ಧದಿಂದ ಜನರ ಜೀವಕ್ಕೆ ಹಾನಿಯಾಗುತ್ತೆಎಂಬುವುದನ್ನು ಈ ಘಟನೆಯ ಮೂಲಕ ತಿಳಿಯಬಹುದಾಗಿದೆ

You may also like

Leave a Comment